ನವದೆಹಲಿ(ಜು.20): ಕೊರೋನಾ ವೈರಸ್ ಕಾರಣ ಹಲವು ಆಟೋಮೊಬೈಲ್ ಕಂಪನಿಗಳ ವಾಹನಗಳು ಕೊಂಚ ತಡವಾಗಿ ಬಿಡುಗಡೆಯಾಗುತ್ತಿದೆ. 2 ತಿಂಗಳ ಲಾಕ್‌ಡೌನ್ ಬಳಿಕ ಜೂನ್ ತಿಂಗಳಿನಿಂದ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ರೆನಾಲ್ಟ್ ಡಸ್ಟರ್ 1.3 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು ಆಗಸ್ಟ್ ತಿಂಗಳ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ನೂತನ ರೆನಾಲ್ಟ್ ಡಸ್ಟರ್ 1.3-ಲೀಟರ್ ಟರ್ಬೋ ಎಂಜಿನ್ ,4 ಸಿಲಿಂಡರ್,  ಪೆಟ್ರೋಲ್ ಎಂಜಿನ್ ಹೊಂದಿದೆ.  153 bhp ಪವರ್ ಹಾಗೂ  250 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6-ಸ್ಪೀಡ್ ಮಾನ್ಯುಯೆಲ್ ಗೇರ್‌ಬಾಕ್ಸ್  ಹಾಗೂ  CVT ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಷ್ಟೇ ಅಲ್ಲ ಬಹುತೇಕ ಫೀಚರ್ಸ್‌ಗಳಲ್ಲಿ ಬದಲಾವಣೆ ಇಲ್ಲ. ಕ್ಯಾಬಿನ್, ಇಂಟೀರಿಯರ್ ಕಲರ್ ಕೋಡಿಂಗ್ ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. 7 ಇಂಚಿನ್ ಟಚ್‌ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ. 

ಸುರಕ್ಷತಾ ಫೀಚರ್ಸ್‌ಗಳಾದ ABS ಹಾಗೂ EBD, ಡ್ರೈವರ್ ಹಾಗೂ ಪ್ಯಾಸೆಂಜರ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂ, ಸ್ಪೀಡ್ ಅಲರ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ ಹಾಗೂ ಹಿಲ್ ಅಸಿಸ್ಟ್ ಫೀಚರ್ಸ್ ಹೊಂದಿದೆ.