ವಾಹನಗಳ ಥರ್ಡ್‌ಪಾರ್ಟಿ ವಿಮಾ ಪ್ರೀಮಿಯಂ ಹೆಚ್ಚಳ

 ದ್ವಿಚಕ್ರ ವಾಹನ ಮತ್ತು ಕಾರುಗಳು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕಾದ ಥರ್ಡ್‌ಪಾರ್ಟಿ ವಿಮೆಯ ಪ್ರೀಮಿಯಂ ದರವನ್ನು ಜೂನ್‌ 16ರಿಂದ ಹೆಚ್ಚಿಸಲು ನಿರ್ಧರಿಸಲಾಗಿದೆ. 

Premium for third party motor insurance to be raised

ನವದೆಹಲಿ: ವಿವಿಧ ಮಾದರಿಯ ದ್ವಿಚಕ್ರ ವಾಹನ ಮತ್ತು ಕಾರುಗಳು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕಾದ ಥರ್ಡ್‌ಪಾರ್ಟಿ ವಿಮೆಯ ಪ್ರೀಮಿಯಂ ದರವನ್ನು ಜೂನ್‌ 16ರಿಂದ ಹೆಚ್ಚಿಸಲು ನಿರ್ಧರಿಸಲಾಗಿದೆ. 

ಸಾಮಾನ್ಯವಾಗಿ ಪ್ರತಿ ವರ್ಷದ ಏಪ್ರಿಲ್‌ 1ರಿಂದ ನೂತನ ದರಗಳು ಜಾರಿಯಾಗುತ್ತವೆಯಾದರೂ, ಈ ಬಾರಿ ಜೂನ್‌ 16ರಿಂದ ಹೊಸ ದರ ಜಾರಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ದ್ವಿಚಕ್ರ ಮತ್ತು ಕಾರುಗಳ ವಿಮಾ ಪ್ರೀಮಿಯಂ ದರವು ಕನಿಷ್ಠ ಶೇ.12ರಿಂದ ಗರಿಷ್ಠ ಶೇ.21ರವರೆಗೂ ಹೆಚ್ಚಳವಾಗಲಿದೆ.

ಇದೇ ವೇಳೆ ಖಾಸಗಿ ಮತ್ತು ಸಾರ್ವಜನಿಕ ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್‌ ಪಾರ್ಟಿ ವಿಮೆಯ ಪ್ರೀಮಿಯಂ ಕೂಡಾ ಹೆಚ್ಚಿಸಲಾಗಿದೆ. ಜೊತೆಗೆ ಶಾಲಾ ಬಸ್‌ಗಳ ವಿಮಾ ಪ್ರೀಮಿಯಂ ಕೂಡಾ ಹೆಚ್ಚಳವಾಗಲಿದೆ.

ಹೊಸ ವಿಮಾ ಪ್ರೀಮಿಯಂ ದರ ಕಾರು

ಮಾದರಿ    ಹಳೆದರ    ಹೊಸ ದರ    ಹೆಚ್ಚಳ

1000 ಸಿಸಿಗಿಂತ ಕಡಿಮೆ    1850    2072    ಶೇ.12

1000-1500 ಸಿಸಿ    2863    3221    ಶೇ.12.5

1500 ಸಿಸಿಗಿಂತ ಹೆಚ್ಚಳ    7890    7890    ಶೇ.0


ಹೊಸ ವಿಮಾ ಪ್ರೀಮಿಯಂ ದರ ಬೈಕ್‌

ಹೊಸ ವಿಮಾ ಪ್ರೀಮಿಯಂ ದರ ಕಾರು

75 ಸಿಸಿಗಿಂತ ಕಡಿಮೆ    427    482    ಶೇ.12.88

75-150 ಸಿಸಿ    720    752    ಶೇ.4.4

150-350 ಸಿಸಿ    985    1193    ಶೇ.21.11

350 ಸಿಸಿಗಿಂತ ಹೆಚ್ಚು    2323    2323    ಶೇ.0

Latest Videos
Follow Us:
Download App:
  • android
  • ios