ಕುಡಿದು ಅಡ್ಡಾ ದಿಡ್ಡಿ ಸ್ಕೂಟರ್ ರೈಡ್- ಅಡ್ಡಗಟ್ಟಿದ ಪೊಲೀಸ್-ವೀಡಿಯೋ ವೈರಲ್!

ನಿಯಮ ಉಲ್ಲಂಘನೆಯಲ್ಲಿ ಕುಡಿದು ವಾಹನ ಚಲಾವಣೆ ಅತೀ ದೊಡ್ಡ ಅಪರಾಧ.  ಕುಡಿದ ಮತ್ತಿನಲ್ಲಿ ಹೊಂಡಾ ಡಿಯೋ ಸ್ಕೂಟರ್ ಚಲಾಯಿಸಿದ ಯುವಕರಿಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಈ ಯುವಕರನ್ನು ಪೊಲೀಸರು ಹಿಡಿದಿದ್ದು ಹೇಗೆ?

police caught drunk and riders in pune with help of tvs bike rider

ಪುಣೆ(ಮೇ.14): ರಸ್ತೆ ನಿಯಮ ಉಲ್ಲಂಘನೆಯಲ್ಲಿ ಕುಡಿದು ವಾಹನ ಚಲಾವಣೆ ಅತೀ ದೊಡ್ಡ ಅಪರಾಧ. ಕುಡಿದು ವಾಹನ ಚಲಾವಣೆ ಅಪಾಯಕ್ಕೆ ಆಹ್ವಾನ ನೀಡಿದಂತೆ. ಈ ಕುರಿತು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ನಿಯಮ ಉಲ್ಲಂಘನೆ ಸಂಪೂರ್ಣವಾಗಿ ನಿಂತಿಲ್ಲ. ಇದೀಗ ಕುಡಿದು ಅಡ್ಡಾ ದಿಟ್ಟಿ ಸ್ಕೂಟರ್ ರೈಡ್ ಮಾಡಿದ ಯುವಕರಿಬ್ಬರನ್ನು ಪೊಲೀಸರು ಹಿಡಿದು ಭಾರಿ ದಂಡ ಹಾಕಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿ ಭಾರತೀಯ ವಾಹನ ಮಾರುಕಟ್ಟೆ - ಕಳೆದ 8 ವರ್ಷಗಳಲ್ಲಿ ಇದೇ ಮೊದಲು!

ಪುಣೆಯ ಮುಖ್ಯ ರಸ್ತೆಯಲ್ಲಿ ಕುಡಿದು ಸ್ಕೂಟರ್ ಚಲಾಯಿಸುತ್ತಿದ್ದ ಯುವಕರಿಬ್ಬರನ್ನು ಗಮಮಿಸಿದ ಟಿವಿಎಸ್ ಬೈಕ್ ರೈಡರ್ ತಕ್ಷಣವೇ ಅವರನ್ನು ಹಿಂಬಾಲಿಸಿದ. ಹಲವು ಭಾರಿ ಕುಡಿದ ಮತ್ತಿನಲ್ಲಿ ಇತರ ವಾಹನಕ್ಕೆ ಡಿಕ್ಕಿ ಹೊಡೆಯುವ ಸಂದರ್ಭಗಳು ಟಿವಿಎಸ್ ರೈಡರ್ ಕ್ಯಾಮರದಲ್ಲಿ ಸೆರೆಯಾಗಿದೆ. ದಾರಿಯುದ್ದಕ್ಕೂ ಯುವಕರನ್ನು ಹಿಂಬಾಸಿಲಿದ ರೈಡರ್ ದೂರದಲ್ಲಿ ಪೊಲೀಸರು ನಿಂತಿರುವುದನ್ನು ಗಮಿಸಿದ್ದಾನೆ.

ಇದನ್ನೂ ಓದಿ: 30 ನಿಮಿಷ ಚಾರ್ಜ್, 201 ಕಿ.ಮಿ ಮೈಲೇಜ್- ಬರುತ್ತಿದೆ ಹೊಂಡಾ ಜಾಝ್ ಎಲೆಕ್ಟ್ರಿಕ್ ಕಾರು!

ತಕ್ಷಣವೇ ಯುವಕರನ್ನು ಚೇಸ್ ಮಾಡಿ ಮುಂದಕ್ಕೆ ಹೋದ ಟಿವಿಎಸ್ ರೈಡರ್, ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕಾರ್ಯಪ್ರವೃತ್ತರಾದ ಪೊಲೀಸರು ಯುವಕರನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಬಳಿಕ ಪರೀಶಿಲಿಸಿದಾಗ ಯುವಕರು ಕುಡಿದ ಮತ್ತಿನಲ್ಲಿ ಸ್ಕೂಟರ್ ರೈಡ್ ಮಾಡಿರುವುದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ ಮುಂದೊದಗುವ ಅಪಾಯ ತಪ್ಪಿಸಿದ ಟಿವಿಎಸ್ ರೈಡರ್‌ಗೆ ಪೊಲೀಸರು ಧನ್ಯವಾದ ಹೇಳಿದ್ದಾರೆ.

ಕುಡಿದು ವಾಹನ ಚಲಾವಣೆ ಅತೀ ದೊಡ್ಡ ಅಪರಾಧ
ಕುಡಿದು ವಾಹನ ಚಲಾಯಿಸಿದರೆ ಅಪಾಯವೇ ಹೆಚ್ಚು. ಹೀಗಾಗಿ ಪೊಲೀಸರು ಕನಿಷ್ಠ 2000 ರೂಪಾಯಿಂದ 10,000  ರೂಪಾಯಿ ವರೆಗೂ ದಂಡ ವಿಧಿಸುತ್ತಾರೆ. ಇಷ್ಟೇ ಅಲ್ಲ 6 ತಿಂಗಳಿಂದ  ಗರಿಷ್ಠ  4 ವರ್ಷದ ವರೆಗೆ ಜೈಲು ಶಿಕ್ಷೆಯೂ ವಿಧಿಸಲಾಗುತ್ತೆ.

Latest Videos
Follow Us:
Download App:
  • android
  • ios