ನವದೆಹಲಿ(ಮೇ.12): ಹೊಂಡಾ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಕಳೆದ ವರ್ಷದಿಂದ ತಯಾರಿ ನಡೆಸುತ್ತಿದೆ. ಇದೀಗ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆ ಖಚಿತಪಡಿಸಿದೆ. ಹೊಂಡಾ ಜಾಝ್ ಹೈಬ್ರಿಡ್ ಕಾರು ಬಿಡುಗಡೆ ಮಾಡಲು ಹೊಂಡಾ ಎಲ್ಲಾ ತಯಾರಿ ಮಾಡಿಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಜಾಝ್ ಕಾರು ಕೆಲ ಬದಲಾವಣೆಯೊಂದಿಗೆ ಶೀಘ್ರದಲ್ಲೇ ಹೈಬ್ರಿಡ್ ಕಾರಾಗಿ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಆಕರ್ಷಕ ಲುಕ್- ಫೋರ್ಡ್ ಆಸ್ಪೈರ್ ಬ್ಲೂ ಎಡಿಶನ್ ಬಿಡುಗಡೆ!

ನೂತನ ಜಾಝ್ ಹೈಬ್ರಿಡ್ ಕಾರು ಕ್ವಿಕ್ ಚಾರ್ಜಿಂಗ್ ಮೂಲಕ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 201 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಇನ್ನು ಎಂಜಿನ್ ಕೆಪಾಸಿಟಿ 99hp ಪವರ್ ಹಾಗೂ 300Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದರ ಪ್ರತಿಸ್ಪರ್ಧಿಯಾಗಿರುವ BMW i3 ಎಲೆಕ್ಟ್ರಿಕ್ ಕಾರು 310 ಕಿ.ಮೀ ಮೈಲೇಜ್ ಹಾಗೂ ಕಿಯಾ ಇ ನಿರೋ ಎಲೆಕ್ಟ್ರಿಕ್ ಕಾರು 453 ಕಿ.ಮೀ ಮೈಲೇಜ್ ನೀಡಲಿದೆ.

ಇದನ್ನೂ ಓದಿ: ಭಾರತಕ್ಕೆ ಚೀನಾದ ಚೆರಿ ಕಾರು- ವಾಹನ ಮಾರುಕಟ್ಟೆ ತಲ್ಲಣ!

ಆದರೆ BMW i3 ಹಾಗೂ ಕಿಯಾ ನಿರೋ ಕಾರುಗಳು ದುಬಾರಿ ಬೆಲೆಯಾಗಿದೆ. ಹೊಂಡಾ ಜಾಝ್ ಹೈಬ್ರಿಡ್ ಕಾರು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ಆದರೆ ಸದ್ಯ ದರ ಪಟ್ಟಿ ಬಹಿರಂಗವಾಗಿಲ್ಲ. 2019ರಲ್ಲಿ ಟೊಕಿಯೋ ಮೋಟಾರ್ ಶೋನಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಇನ್ನು 2020ರಲ್ಲಿ ಭಾರತದಲ್ಲಿ ಹೊಂಡಾ ಜಾಝ್ ಹೈಬ್ರಿಡ್ ಕಾರು ಬಿಡುಗಡೆಯಾಗಲಿದೆ.