ಸತತ 3ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಭಾರತಕ್ಕೆ ತೀವ್ರ ಹೊಡೆತ!

ಕಳೆದೆರಡು ತಿಂಗಳಿನಿಂದ ತಟಸ್ಥವಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೀಗ ಸತತ 3ನೇ ದಿನ ಏರಿಕೆ ಕಂಡಿದೆ. ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದ್ದು, ಎಲ್ಲಾ ವಸ್ತುಗಳು, ಆಹಾರ ಉತ್ಪನ್ನಗಳ ಬೆಲೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
 

Petrol diesel price hiked by 8 paisa 19 paisa respectively per liter third straight day ckm

ನವದೆಹಲಿ(ನ.22):  ಸತತ 3ನೇ ದಿನ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿದೆ. ಭಾನುವಾರ ಪಟ್ರೋಲ್ ಬೆಲೆ 8 ಪೈಸೆ ಏರಿಕೆ ಕಂಡಿದೆ. ಇನ್ನು ಡೀಸೆಲ್ ಬೆಲೆ 19 ಪೈಸೆ ಏರಿಕೆಯಾಗಿದೆ. ಈ ಮೂಲಕ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದುಬಾರಿಯಾಗುತ್ತಿದೆ.

2 ತಿಂಗಳ ಬಳಿಕ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!.

ಎಲ್ಲಾ ರಾಜ್ಯಗಳಲ್ಲಿ ಕಳೆದ 3 ದಿನಗಳಲ್ಲಿ ಪೆಟ್ರೋಲ್ ಬೆಲೆ ಒಟ್ಟು 40 ಪೈಸೆ ಹಾಗೂ ಡೀಸೆಲ್ ಬೆಲೆ ಒಟ್ಟು 61 ಪೈಸೆ ಹೆಚ್ಚಳವಾಗಿದೆ.  ದೆಹಲಿಯಲ್ಲಿ ಪೆಟ್ರೋಲ್ ಬೆಲೆ 81.38 ಪೈಸೆಯಿಂದ ಇದೀಗ 81.46 ಪೈಸೆ ಆಗಿದೆ. ಇನ್ನು ಡೀಸೆಲ್ ಬೆಲೆ71.07  ಪೈಸೆಯಿಂದ 70.88 ಪೈಸೆ ಆಗಿದೆ.

ತೈಲ ಮತ್ತು ಅನಿಲ ತಾಣ ಪತ್ತೆ; ಭಾರತಕ್ಕೆ ಹೊಸ ಬೆಳಕಾದ ಕೋಲ್ಕತಾ!.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್  ಸೇರಿದಂತೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು  ಅಂತರರಾಷ್ಟ್ರೀಯ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರದ ಆಧಾರದ ಮೇಲೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸುತ್ತವೆ.

ಕೊರೋನಾ ವಕ್ಕರಿಸಿದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಬೆಲೆಗಳ ಚಂಚಲತೆಯನ್ನು ಕಳೆದೆರಡು ತಿಂಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ನಿಯಂತ್ರಿಸಲಾಗಿತ್ತು. ಆದರೆ ಕಳೆದ 3 ತಿಂಗಳಿನಿಂದ ಬೆಲೆ ಏರಿಕೆಯಾಗುತ್ತಲೇ ಇದೆ. ಸೆಪ್ಟೆಂಬರ್ 22 ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು. ಇನ್ನು ಅಕ್ಟೋಬರ್ 2 ರಿಂದ ಡೀಸೆಲ್ ಬೆಲೆ ಸ್ಥಿರವಾಗಿತ್ತು.

Latest Videos
Follow Us:
Download App:
  • android
  • ios