BMW ಕಾರು ಗಿಫ್ಟ್ ನೀಡಿದ್ರೂ ಪೋಷಕರಿಗೆ ತಪ್ಪಲಿಲ್ಲ ತಲೆನೋವು!

ಮಕ್ಕಳಿಗೆ BMW ಕಾರು ಗಿಫ್ಟ್ ನೀಡಿದ ಪೋಷಕರು ನೆಮ್ಮದಿಯಿಂದ ಒಂದು ದಿನ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. BMW ಪಡೆದ ದಿನವೇ ಮಕ್ಕಳು ಆಕ್ರೋಶ ಹೊರಹಾಕಿದ್ದಾರೆ. ಪೋಷಕರು ಹಾಗು ಮಕ್ಕಳ ನಡುವಿನ ಸಮರ ಅಂತ್ಯವಾಗಿದ್ದು ಎಲ್ಲಿ? ಇಲ್ಲಿದೆ ವಿವರ.

Parents gift bmw instead of jaguar Youth dumps car into river

ಹರ್ಯಾಣ(ಆ.11): ಮಕ್ಕಳು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಪೋಷಕರಿಗೆ ತಲೆನೋವು ಹೆಚ್ಚಾಗುತ್ತೆ. ಕಾರು, ಬೈಕ್‌ಗಾಗಿ ಡಿಮ್ಯಾಂಡ್ ಗಗನೆತ್ತರಕ್ಕೆ ಬೆಳೆಯುತ್ತೆ. ಮಕ್ಕಳ ಆಸೆ ಪೂರೈಸಲು ಹೇಗಾದರೂ ಮಾಡಿ ಆಗ್ರಹ ಪೂರೈಸಿದರೆ, ಮತ್ತೆ ಅವಾಂತರಗಳ ತಲೆನೋವು ಪೋಷಕರನ್ನು ಬೇತಾಳನಂತೆ ಕಾಡುತ್ತೆ. ಇದೀಗ ಹರ್ಯಾಣದಲ್ಲಿ ಆಗಿದ್ದು ಇದೆ. ಮಕ್ಕಳು ಜಾಗ್ವಾರ್ ಕಾರಿಗೆ ಬೇಡಿಕೆ ಇಟ್ಟಿದ್ದಾರೆ. ಕೋಟಿ ರೂಪಾಯಿಗಿಂತೆ ಹೆಚ್ಚಿರುವ ಜಾಗ್ವಾರ್ ಬದಲು ಪೋಷಕಪು 50 ಲಕ್ಷ ರೂಪಾಯಿಯ BMW ಕಾರನ್ನು ಮಕ್ಕಳಿಗೆ ಗಿಫ್ಟ್ ನೀಡಿದ್ದಾರೆ. 

ಇದನ್ನೂ ಓದಿ: 11 ಸಾವಿರಕ್ಕೆ ಬುಕ್ ಮಾಡಿ ಮಾರುತಿ ಸುಜುಕಿ XL6 ಕಾರು!

ಗಿಫ್ಟ್ ನೀಡಿದ ಪೋಷಕರು, ಜಾಗ್ವಾರ್ ಆಗದಿದ್ದರೂ, BMW ನೀಡಿದ್ದೇವೆ. ಕನಿಷ್ಠ ಮಕ್ಕಳ ಆಸೆಯನ್ನು ಪೂರೈಸಿದ್ದೇವೆ ಅನ್ನೋ ಸಂತಸದಲ್ಲಿದ್ದರು. ಆದರೆ ಗಿಫ್ಟ್ ಪಡೆದ ಮಕ್ಕಳಿಗೆ BMW ಕಾರು ಎಳ್ಳಷ್ಟು ಇಷ್ಟವಿರಲಿಲ್ಲ. ಪೋಷಕರ ಬಳಿಕ ಸಾರಿ ಸಾರಿ ಹೇಳಿದರೂ BMW ಕಾರನ್ನೇಕೆ ನೀಡಿದ್ದಾರೆ ಅನ್ನೋ ಅಸಮಧಾನ. ಇವರ ಆಕ್ರೋಶ ಅಷ್ಟಕ್ಕೆ ತಣ್ಣಗಾಗಲಿಲ್ಲ. ಪೋಷಕರ ಮೇಲಿನ ಸಿಟ್ಟಿಗೆ ನೂತನ BMW ಕಾರನ್ನು ನದಿ ಬಳಿ ತೆಗೆದುಕೊಂಡು ಹೋಗಿ ನಡು ನೀರಿನಲ್ಲಿ ತೇಲಿಸಿ ಬಿಟ್ಟಿದ್ದಾರೆ.

ಇದನ್ನೂ ಓದಿ: ಮರ್ಸಿಡೀಸ್ ಬೆಂಝ್ GLE ಖರೀದಿಸಿದ ದ್ರಾವಿಡ್; ಇಲ್ಲಿದೆ ಈ ಕಾರಿನ ವಿಶೇಷತೆ!

ಸ್ಥಳೀಯರ ಸಹಾಯದಿಂದ ಮೊದಲು ಯುವಕರನ್ನು ರಕ್ಷಿಸಲಾಗಿದೆ. ಬಳಿಕ ಬೋಟ್ ಮೂಲಕ BMW ಕಾರನ್ನು ದಡ ಸೇರಿಸಿದ್ದಾರೆ. ಅಷ್ಟರಲ್ಲೇ BMW  ಕಾರು ಸಂಪೂರ್ಣ ಹಳಾಗಿದೆ. ಎಂಜಿನ್‌ನಲ್ಲಿ ನೀರು ತುಂಬಿಕೊಂಡಿದೆ. ಕಾರಿನ ಬಾಡಿ ನದಿಯಲ್ಲಿನ ಕಲ್ಲಿನಿಂದ ನಜ್ಜು ಗುಜ್ಜಾಗಿದೆ. ಇಷ್ಟೇ ಅಲ್ಲ ಮಳೆಗಾಲವಾದ್ದರಿಂದ ನದಿ ನೀರಿನ ರಭಸಕ್ಕೆ ಕಾರು ರೀಪೇರಿಗೆ ಮತ್ತಷ್ಟು ಲಕ್ಷ ರೂಪಾಯಿ ಬೇಕಾಗಲಿದೆ.

 

ಮಕ್ಕಳು ಪೋಷಕರ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಲು, ಕಾರನ್ನು ನದಿ ನೀರಲ್ಲಿ ತೇಲಿಸಿ ಬಿಡುವುದನ್ನು ವಿಡಿಯೋ ಮಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಹರಿಯಾಣದ ಯಮುನಾ ನಗರದ  ಯುವಕರನ್ನ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಆದರೆ ಇವರ ವಿರುದ್ಧ ಪ್ರಕರಣ ದಾಖಲಾಗಿರುವುದರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

Latest Videos
Follow Us:
Download App:
  • android
  • ios