ದಾಖಲೆ ಬರೆದ ಮಾರುತಿ ಸುಜುಕಿ ಇಗ್ನಿಸ್ ಕಾರು!
2017ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ಮಾರುತಿ ಇಗ್ನಿಸ್ ಕಾರು 2 ವರ್ಷಗಳಲ್ಲಿ ದಾಖಲೆ ಬರೆದಿದೆ. ಮಾರುತಿ ಇಗ್ನಿಸ್ ದಾಖಲೆ ಏನು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ.
ನವದೆಹಲಿ(ಏ.30): ಮಾರುತಿ ಸುಜುಕಿ ಸಂಸ್ಥೆಯ ಎಂಟ್ರಿ ಲೆವೆಲ್ ಕಾರು ಇಗ್ನಿಸ್‌ಗೆ ಭಾರಿ ಬೇಡಿಕೆ ಇದೆ. 2017ರಲ್ಲಿ ಬಿಡುಗಡೆಯಾದ ಇಗ್ನಿಸ್ 2019ರ ಆರಂಭದಲ್ಲಿ ಡೀಸೆಲ್ ವೇರಿಯೆಂಟ್ ಕಾರನ್ನು ಸ್ಥಗಿತಗೊಳಿಸಿದೆ. 2017ರಿಂದ ಇಲ್ಲೀವೆರೆಗೆ 1 ಲಕ್ಷ ಇಗ್ನಿಸ್ ಕಾರು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಎರ್ಟಿಗಾ 1.5 L ಡೀಸೆಲ್ ಕಾರು ಬಿಡುಗಡೆ!
ಇಗ್ನಿಸ್ ಕಾರಿನಲ್ಲಿ AMT(ಆ್ಯಟೋಮ್ಯಾಟಿಕ್ ಟ್ರಾನ್ಸ್‌ಮಿಶನ್) ಕೂಡ ಲಭ್ಯವಿದೆ. ಪ್ರತಿ ತಿಂಗಳ ಮಾರಾಟ ದಾಖಲೆಯಲ್ಲಿ ಇಗ್ನಿಸ್ ಮುಂಚೂಣಿಯಲ್ಲಿದೆ. ಪ್ರತಿ ತಿಂಗಳು ಸರಾಸರಿ 2500 ಕಾರುಗಳು ಮಾರಾಟವಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಮಾರುತಿ ಇಗ್ನಿಸ್ 3,156 ಕಾರುಗಳು ಮಾರಾಟವಾಗಿದೆ. ಇಗ್ನಿಸ್ ಕಾರಿನ ಬೆಲೆ 5.4 ಲಕ್ಷ ರೂಪಾಯಿಂದ 7.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಇದನ್ನೂ ಓದಿ: ಹ್ಯುಂಡೈ ವೆನ್ಯು to ಟಾಟಾ ಅಲ್ಟ್ರೋಜ್- ಬಿಡುಗಡೆಯಾಗಲಿದೆ ಟಾಪ್ 5 ಕಾರು!
ಡೀಸೆಲ್ ವೇರಿಯೆಂಟ್ ಸ್ಥಗಿತಗೊಂಡಿರುವುದರಿಂದ ಮಾರುತಿ ಇಗ್ನಿಸ್ ಸದ್ಯ 1.2 ಲೀಟರ್ K-ಸೀರಿಸ್ ಪೆಟ್ರೋಲ್ ಎಂಜಿನ್ ಕಾರು ಮಾತ್ರ ಲಭ್ಯವಿದೆ. 4-ಸಿಲಿಂಡರ್ ಪೆಟ್ರೋಲ್ ಎಂಜಿನ್, 82 Bhp ಪವರ್ (@6,000 rpm) ಹಾಗೂ 113 Nm ಪೀಕ್ ಟಾರ್ಕ್ (@4,200 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ 5 ಸ್ಪೀಡ್ AMT ಟ್ರಾನ್ಸ್‌ಮಿಶನ್ ಕೂಡ ಲಭ್ಯವಿದೆ.