ಹ್ಯುಂಡೈ ವೆನ್ಯು to ಟಾಟಾ ಅಲ್ಟ್ರೋಜ್- ಬಿಡುಗಡೆಯಾಗಲಿದೆ ಟಾಪ್ 5 ಕಾರು!
2019ರ ಸಾಲಿನಲ್ಲಿ ಆಟೋಮೊಬೈಲ್ ಕ್ಷೇತ್ರ ಹಲವು ಬದಲಾವಣೆಗಳನ್ನು ಕಂಡಿದೆ. ಈ ವರ್ಷ ಹಲವು ಕಾರುಗಳು ಬಿಡುಗಡೆಯಾಗಿದೆ. ಇದೀಗ ಕೆಲ ಕಾರುಗಳು ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಟಾಪ್ 5 ಕಾರು ವಿವರ ಇಲ್ಲಿದೆ.
ನವದೆಹಲಿ(ಏ.29): 2019ರ ಸಾಲಿನಲ್ಲಿ ಈಗಾಗಲೇ ಹಲವು ಕಾರುಗಳು ಭಾರತದಲ್ಲಿ ಬಿಡುಗಡೆಯಾಗಿದೆ. ಟಾಟಾ ಹ್ಯಾರಿಯರ್, ಮಹೀಂದ್ರ XUV300 ಸೇರಿದಂತೆ ನೂತನ ಕಾರುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದೀಗ ಶೀಘ್ರದಲ್ಲೇ ಹಲವು ಕಾರುಗಳು ಬಿಡುಗಡೆಯಾಗಲಿದೆ. ಮಾರುತಿ SUV ಹ್ಯುಂಡೈ ಹ್ಯಾಚ್‌ಬ್ಯಾಕ್ ಸೇರಿದಂತೆ ಹಲವು ಕಾರುಗಳಿ ಪ್ರತಿಸ್ಪರ್ಧಿಯಾಗಿ ನೂತನ ಕಾರು ಬಿಡುಗಡೆಯಾಗಲಿದೆ. ಕೆಲ ದಿನಗಳಲ್ಲಿ ಬಿಡುಗಡೆಯಾಗಲಿರು ಟಾಪ್ 5 ಕಾರುಗಳ ವಿವರ ಇಲ್ಲಿದೆ.
ಹ್ಯುಂಡೈ ವೆನ್ಯು
ಮಾರುತಿ ಬ್ರೆಜಾ ಸೇರಿದಂತೆ SUV ಸಬ್‌ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದೆ. ನೂತನ ವೆನ್ಯು ಕಾರಿನ ಬೆಲೆ 8 ರಿಂದ 12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಮೇ 21ಕ್ಕೆ ಈ ಕಾರು ಬಿಡುಗಡೆಯಾಗಲಿದೆ.
MG ಹೆಕ್ಟರ್
ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್, ಮಹೀಂದ್ರ XUV500 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬ್ರಿಟೀಷ್ ಮೂಲದ MG ಹೆಕ್ಟರ್ ಕಾರು ಭಾರತದ ರಸ್ತೆಗಳಿಯುತ್ತಿದೆ. 16 ರಿಂದ 20 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಮೌಲ್ಯದ ಈ ಕಾರು ಆಧುನಿಕ ತಂತ್ರಜ್ಞಾನ ಹಾಗೂ ಹಲವು ವಿಶೇಷತೆಗಳನ್ನೊಳಗೊಂಡಿದೆ.
ಟಾಟಾ ಅಲ್ಟ್ರೋಜ್
ಟಾಟಾ ಮೋಟಾರ್ಸ್ ಇದೀಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಮಾರುತಿ ಬಲೆನೊ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಜ್ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಯಾಗುತ್ತಿದೆ. 5.50 ರಿಂದ 8.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಮೌಲ್ಯದ ಈ ಕಾರು, ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದೆ.
ಜೀಪ್ ಕಂಪಾಸ್ ಟ್ರೈಲ್‌ವಾಕ್
SUV ಕಾರಿನಲ್ಲಿ ಭಾರತದ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು ಜೀಪ್ ಕಂಪಾಸ್ ಕಾರು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದೀಗ ಜೀಪ್ ಕಂಪಾಸ್ ಟ್ರೈಲ್‌ವಾಕ್ ಕಾರು ಬಿಡುಗಡೆ ಮಾಡುತ್ತಿದೆ. ನೂತನ ಜೀಪ್ ಕಂಪಾಸ್ ಬೆಲೆ 26 ರಿಂದ 30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಟೊಯೊಟಾ ಗ್ಲಾಂಝಾ
ಮಾರುತಿ ಸುಜುಕಿ ಬಲೆನೊ ಕಾರು ಇದೀಗ ಟೊಯೊಟಾ ಗ್ಲಾಂಝಾ ಕಾರಾಗಿ ಬಿಡುಗಡೆಯಾಗುತ್ತಿದೆ. ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಈ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರಿ ಬೆಲೆ 7 ರಿಂದ 10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).