Asianet Suvarna News Asianet Suvarna News

ಸಾರಿಗೆ ಇಲಾಖೆ ಸಂಚಾರಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದ ಓಲಾ, ಉಬರ್

ಬ್ಯಾನ್ ಮಾಡಿದ್ರೂ ಕೂಡ ಓಲಾ, ಉಬರ್ ಕಂಪನಿಗಳು ಪೂಲಿಂಗ್ , ಶೇರಿಂಗ್ ಮುಂದುವರಿಸಿವೆ. ಕಾನೂನು ಉಲ್ಲಂಘನೆ ಮಾಡಿ ನಿಯಮ ಮಾಡಿದ್ರೂ ಡೋಂಟ್ ಕೇರ್ ಎನಿಸುತ್ತಿವೆ. 

Ola Uber violates traffic department order to stop pool service
Author
Bengaluru, First Published Jul 3, 2019, 11:29 AM IST
  • Facebook
  • Twitter
  • Whatsapp

ಬೆಂಗಳೂರು [ಜು.3] : ರಾಜ್ಯ ಸರ್ಕಾರ ಬ್ಯಾನ್ ಮಾಡಿದರೂ ಕೂಡ ಓಲಾ, ಉಬರ್ ಕಂಪನಿಗಳು ಪೂಲಿಂಗ್, ಶೇರಿಂಗ್ ನಿಲ್ಲಿಸಿಲ್ಲ. ರಾಜಾರೋಷವಾಗಿ ತಮ್ಮ ಕೆಲಸ ಮುಂದುವರಿಸಿವೆ. 

ಪೂಲಿಂಗ್ ಶೇರಿಂಗ್ ಕಾನೂನು ಬಾಹಿರ ಎಂದು ಜೂನ್ 28 ರಂದು ಕಡ್ಡಾಯವಾಗಿ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೂ ಕೂಡ ಇದಕ್ಕೆ ಕಡಿವಾಣ ಬಿದ್ದಿಲ್ಲ.

ಆದೇಶ ಪಾಲನೆ ಮಾಡಿಲ್ಲವೆಂದಾದಲ್ಲಿ ಲೈಸೆನ್ಸ್  ರದ್ದು ಮಾಡುತ್ತೇವೆ ಎಂದು ಆರ್ ಟಿ ಓ ಅಧಿಕಾರಿಗಳು ಎಚ್ಚರಿಸಿದ್ದರು. ಆದರೂ ಕೂಡ ಆದಾಯದ ಮೇಲೆ ಹೊಡೆದ ಬೀಳುವ ಕಾರಣದಿಂದ ಶೇರಿಂಗ್ ಪೂಲಿಂಗ್ ನಿಲ್ಲಿಸದೇ ಮುಂದುವರಿದಿದೆ. 

ಕರ್ನಾಟಕದಲ್ಲಿ ಓಲಾ, ಉಬರ್ ಕಾರ್‌ಪೂಲಿಂಗ್ ನಿಷೇಧಿಸಿದ ಸರ್ಕಾರ!

ಈ ಹಿಂದೆ ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಓಲಾ ಕಂಪನಿಗೆ ನಿಷೇಧ ಹೇರಿ ಮತ್ತೆ ವಾಪಸ್ ಪಡೆಯಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಕಠಿಣ ಆದೇಶ ನಡುವೆಯೂ ಕೂಡ ಕಾನೂನು ಉಲ್ಲಂಘನೆ ಮಾಡಲಾಗುತ್ತಿದೆ.  

ಬೆಂಗಳೂರಿನಲ್ಲಿ ನಿತ್ಯ 60 ಸಾವಿರ ಓಲಾ, ಉಬರ್ ಟ್ಯಾಕ್ಸಿಗಳು ಸಂಚರಿಸುತ್ತಿದ್ದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಡ್ರಾಪ್ ಕೊಡಲು ಮಾತ್ರ ಟ್ಯಾಕ್ಸಿಗಳಿಗೆ ಅವಕಾಶವಿದ್ದು,  ಶೇರಿಂಗ್ ಪೂಲಿಂಗ್ ಗೆ ಓಲಾ ಉಬರ್ ನಲ್ಲಿ ಅವಕಾಶ ನಿರಾಕರಿಸಲಾಗಿದೆ. ಆದರೂ ಆದೇಶ ಮೀರಿ ಶೇರಿಂಗ್ ಪೂಲಿಂಗ್ ಮಾಡುತ್ತಿವೆ. 

Follow Us:
Download App:
  • android
  • ios