ಬೆಂಗಳೂರು(ಮೇ.13): ಬೆಂಗಳೂರು ಮೂಲದ ಓಲಾ ಟ್ಯಾಕ್ಸಿ ಇದೀಗ ಬಹುತೇಕ ರಾಷ್ಟ್ರಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಓಲಾ ಟ್ಯಾಕ್ಸಿ ಬೆಲೆ ಕಡಿತಗೊಳ್ಳಲಿದೆ. ಇದಕ್ಕೆ ಕಾರಣ ಓಲಾ ಕ್ಯಾಬ್ ಇದೀಗ ಎಲೆಕ್ಟ್ರಿಕ್ ಮಯವಾಗುತ್ತಿದೆ. ಡೀಸೆಲ್, ಪೆಟ್ರೋಲ್ ವಾಹನಗಳಿಂದ ತುಂಬಿರುವ ಓಲಾ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನ ಸೇರ್ಪಡೆಗೊಳ್ಳಲಿದೆ. ಬರೋಬ್ಬರಿ 10,000 ವಾಹನ ಓಲಾ ಸೇರಿಕೊಳ್ಳಲಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಬಂತು ಹೀರೋ ಪ್ಲೆಶರ್ ಪ್ಲಸ್ 110 ಸ್ಕೂಟರ್!

ಪ್ರಾಥಮಿಕ ಹಂತದಲ್ಲಿ ಓಲಾ ದ್ವಿಚಕ್ರ ಹಾಗೂ ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಸೇರಿಸಿಕೊಳ್ಳಲು ನಿರ್ಧರಿಸಿದೆ. ಬಳಿಕ ಎಲೆಕ್ಟ್ರಿಕ್ ಕಾರು ಪರಿಚಯಿಸಲಿದೆ. ಎಲೆಕ್ಟ್ರಿಕ್ ಕಾರಿಗೆ ಭಾರತದಲ್ಲಿ ಸದ್ಯ ಪೂರಕವಾದ ವಾತವರಣ ಇಲ್ಲ. ಕಾರು ಚಾರ್ಜಿಂಗ್ ಸ್ಟೇಶನ್‌ಗಳು ಲಭ್ಯವಿಲ್ಲ. ಹೀಗಾಗಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಹಾಗೂ ಸ್ಕೂಟರ್ ಮೊದಲ ಹಂತದಲ್ಲಿ ಓಲಾ ಪರಿಚಯಿಸಲಿದೆ ಎಂದು ಒಲಾ ಹೇಳಿದೆ.

ಇದನ್ನೂ ಓದಿ: ಸತತ 11 ಗಂಟೆ, 800 ಕಿ.ಮೀ- ಮತದಾನಕ್ಕಾಗಿ ಜೀಪ್ ಕಂಪಾಸ್ ಸಾಹಸ!

ಓಲಾ ಎಲೆಕ್ಟ್ರಿಕ್ ವಾಹನ ಸೇವೆ ಆರಂಭಗೊಂಡರೆ ದರದಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ. ಕಾರಣ ಇಂಧನ ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನ ನಿರ್ವಹಣಾ ವೆಚ್ಚ ಕಡಿಮೆ. ಹೀಗಾಗಿ ಓಲಾ ಕ್ಯಾಬ್ ಸೇವೆ ದರ ಕಡಿತಗೊಳ್ಳುವ ಸಾಧ್ಯತೆ ಇದೆ. 2020ರ ಮಾರ್ಚ್ ವೇಳೆ 10 ಸಾವಿರ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾಗಳು ಓಲಾ ಸೇರಿಕೊಳ್ಳಲಿದೆ.