ನವದೆಹಲಿ(ಅ.11):  ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪೈಪೋಟಿ ನೀಡಲು ಇದೀಗ ನಿಸಾನ್ ಹೊಚ್ಚ ಹೊಸ ಮ್ಯಾಗ್ನೈಟ್ ಕಾರು ಬಿಡುಗಡೆಯಾಗುತ್ತಿದೆ. ಆಗಸ್ಟ್ ಅಂತ್ಯದಲ್ಲಿ ಮ್ಯಾಗ್ನೈಟ್ ಕಾರು ಕಾನ್ಸೆಪ್ಟ್ ಅನಾವರಣ ಮಾಡಲಾಗಿದೆ. ಇದೀಗ ಅಕ್ಟೋಬರ್ 21 ರಂದು ಮ್ಯಾಗ್ನೈಟ್ ಕಾರು ಜಾಗತಿಕ ಮಟ್ಟದಲ್ಲಿ ಅನಾವರಣಗೊಳ್ಳುತ್ತಿದೆ.

ಹೊಸ ಡಿಸೈನ್, ಆಕರ್ಷಕ ಕ್ಯಾಬಿನ್ ಹಾಗೂ ಇಂಟಿರಿಯರ್, ಗರಿಷ್ಠ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿವೆ. ಮುಂಭಾಗದ ಗ್ರಿಲ್, ಹೆಡ್ ಲ್ಯಾಂಪ್ಸ್, ಟೈಲ್ ಲ್ಯಾಂಪ್ಸ್, ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವಿನೂತನ ಶೈಲಿ ಈ ಕಾರಿನಲ್ಲಿ ಅಳವಡಿಸಲಾಗಿದೆ.

ಮ್ಯಾಗ್ನೈಟ್ ಕಾರು 1.0 ಲೀಟರ್, 3 ಸಿಲಿಂಡರ್, bs6 ಪೆಟ್ರೋಲ್ ಎಂಜಿನ್ ಹೊಂದಿದೆ. 71 bhp ಪವರ್ ಹಾಗೂ  96 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಟರ್ಬೋಚಾರ್ಜ್ಡ್ ಎಂಜಿನ್ ವರ್ಶನ್ ಕೂಡ ಬಿಡುಗಡೆ ಮಾಡುತ್ತಿದ್ದು,  99 bhp ಪವರ್ ಹಾಗೂ 160 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 2021ರ ಆರಂಭದಲ್ಲಿ ನೂತನ ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಯಾಗವು ಸಾಧ್ಯತೆ ಇದೆ.