Asianet Suvarna News Asianet Suvarna News

ಹೊಸ ತಂತ್ರಜ್ಞಾನ, ಅದ್ಭುತ ವಿನ್ಯಾಸ-ನಿಸಾನ್ ಕಿಕ್ಸ್ SUV ಕಾರು!

ಹೊಸ ವರ್ಷಕ್ಕೆ ನಿಸಾನ್ ಹೊಸ SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಯಾವುದೇ ಆಘಾತ ತಡೆಯಬಲ್ಲ, ಹೆಚ್ಚು ಬಲಿಷ್ಠವಾಗಿರೋ ಈ ಕಾರು ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ.

Nissan Kicks SUV car unveiled in India launch in 2019
Author
Bengaluru, First Published Oct 24, 2018, 2:57 PM IST
  • Facebook
  • Twitter
  • Whatsapp

ಬೆಂಗಳೂರು(ಅ.24):  ನಿಸಾನ್ ಇಂಡಿಯಾ ಕಂಪನಿ ಎಸ್‌ಯುವಿ ವಿಭಾಗದಲ್ಲಿ ಹೊಸ ಕ್ರಾಂತಿ ಮಾಡುತ್ತಿದೆ. ಕಿಕ್ಸ್ ಎಂಬ ಹೊಸ ಎಸ್ ಯುವಿ ಕಾರ್ ಅನ್ನು 2019ರ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಸದ್ಯ ಈ ಬಹುನಿರೀಕ್ಷಿತ ಎಸ್‌ಯುವಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ. 

Nissan Kicks SUV car unveiled in India launch in 2019

ಕಾರು ಪ್ರೇಮಿಗಳಲ್ಲಿ ಕುತೂಹಲ ಸೃಷ್ಟಿಸಿರುವ ಈ ಕಾರು ಸಾಹಸಿ ಪ್ರಿಯರಿಗಾಗಿಯೇ ರೂಪಿತಗೊಂಡಿದೆ ಎನ್ನಲಾಗಿದೆ. ಇಂಟರೆಸ್ಟಿಂಗ್ ಅಂದ್ರೆ ತುಂಬಾ ಸ್ಟ್ರಾಂಗ್
ಎಂದೇ ಕರೆಯಲ್ಪಡುವ ಗ್ರಾಫೀನ್ (ಗ್ರ್ಯಾವಿಟಿ- ಫಿಲಿಕ್‌ಎನರ್ಜಿ ಅಬ್ಸಾರ್ಪ್ಸನ್) ದೇಹವನ್ನು ಹೊಂದಿದೆ. 

ಇದು ಇದು ಎಂಥಾ ಆಘಾತದ ಶಕ್ತಿಯನ್ನು ತಡೆಯುತ್ತದೆ. ಹಾಗಾಗಿ ಹೆಚ್ಚು ಸದೃಢ, ಹೆಚ್ಚು ಸುರಕ್ಷಿತ ಎಸ್ ಯುವಿ ಇದು ಎನ್ನಲಾಗಿದೆ. ಕಿಕ್ಸ್ ವಿಶೇಷತೆ ಏನೆಂದರೆ ಇದು ಫ್ರೋಟಿಂಗ್ ರೂಫ್ ವಿನ್ಯಾಸ ಹೊಂದಿದೆ. ಎಲ್‌ಇಡಿ ಡಿಆರ್‌ಎಲ್ ಮತ್ತು ಶಾರ್ಕ್ ಫಿನ್ ಆಂಟೇನಾ ಇದೆ. ಮುಂಭಾಗದ ಫಾಗ್ ಲ್ಯಾಂಪ್‌ಗಳು ಎಂಥಾ ಮಂಜು ಕವಿದ ರಸ್ತೆಯಿದ್ದರೂ ಸರಾಗವಾಗಿ ಚಲಿಸುವಂತೆ ಮಾಡುತ್ತದೆ. 

Nissan Kicks SUV car unveiled in India launch in 2019

ಅನನ್ಯವಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಸಿಗ್ನೇಚರ್ ಲ್ಯಾಂಪ್ ಗಳನ್ನು ಒಳಗೊಂಡಿದ್ದು ಕಾರನ್ನು ಇನ್ನಷ್ಟು ಚೆಂದಗೊಳಿಸಿದೆ.
ಈ ನಿಸಾನ್ ಕಿಕ್ಸ್ ಡಿಸೈನ್ ಬಗ್ಗೆ ಮಾತನಾಡಿದ ನಿಸಾನ್ ಇಂಡಿಯಾದ ಕಾರ‌್ಯಾಚರಣೆ ವಿಭಾಗದ ಅಧ್ಯಕ್ಷ ಥಾಮಸ್ ಕುಹ್ಲ್, ‘ನಿಸಾನ್ ಕಿಕ್ಸ್‌ನ ನೂತನ ಹಿಡಿದಿಡುವ ಮತ್ತು ಉಲ್ಲೇಖಿಸುವಂತಹ ವಿನ್ಯಾಸವನ್ನು ಅನಾವರಣಗೊಳಿಸಲು ನಾವು ಉತ್ಸಾಹಿತರಾಗಿರುವುದಲ್ಲದೆ, ಹೆಮ್ಮೆ ಪಡುತ್ತೇವೆ. ಎಸ್‌ಯುವಿ ವಿನ್ಯಾಸ ಮತ್ತು ಉನ್ನತ ತಂತ್ರಜ್ಞಾನದ ಜೊತೆಗೆ ಇಂದಿನ ನಗರಗಳ ಸಾಹಸ ಅರಸುವ ನೂತನ ಪೀಳಿಗೆಯವರನ್ನು ಇದು ಖಂಡಿತವಾಗಿ ಆಕರ್ಷಿಸಲಿದೆ’ ಎಂದಿದ್ದಾರೆ
 

Follow Us:
Download App:
  • android
  • ios