ನವದೆಹಲಿ(ಡಿ.12): ನಿಸಾನ್ ಸಂಸ್ಥೆಯ ಕಿಕ್ಸ್ SUV ಕಾರು 2019ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಡಿಸೆಂಬರ್ 14 ರಿಂದ ಕಾರಿನ ಬುಕಿಂಗ್ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನವೆ ಕೆಲ ಡೀಲರ್‌ಗಳು  ಬುಕಿಂಗ್ ಆರಂಭಿಸಿದ್ದಾರೆ. 25,000 ರೂಪಾಯಿ ನೀಡಿ ನಿಸಾನ್ ಕಾರನ್ನ ಈಗಲೇ ಬುಕ್ ಮಾಡಿಕೊಳ್ಳಬಹುದು.
 
ನೂತನ ನಿಸಾನ್ ಕಿಕ್ಸ್ ಬೆಲೆ 10 ರಿಂದ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.  ಹೆಚ್ಚು ಸದೃಢ, ಹೆಚ್ಚು ಸುರಕ್ಷಿತ ಎಸ್ ಯುವಿ ಎಂದೇ ಗುರುತಿಸಿಕೊಂಡಿರುವ  ಗ್ರಾಫೀನ್ (ಗ್ರ್ಯಾವಿಟಿ- ಫಿಲಿಕ್‌ಎನರ್ಜಿ ಅಬ್ಸಾರ್ಪ್ಸನ್) ಬಾಡಿ ಹೊಂದಿದೆ.  

ಇದನ್ನೂ ಓದಿ: 2019 ರಿಂದ ಆಟೋ ರಿಕ್ಷಾಗೆ ಹೊಸ ನೀತಿ- ಸಂಕಷ್ಟದಲ್ಲಿ ಮಾಲೀಕರು!

ಕಿಕ್ಸ್ ವಿಶೇಷತೆ ಏನೆಂದರೆ ಇದು ಫ್ರೋಟಿಂಗ್ ರೂಫ್ ವಿನ್ಯಾಸ ಹೊಂದಿದೆ. ಎಲ್‌ಇಡಿ ಡಿಆರ್‌ಎಲ್ ಮತ್ತು ಶಾರ್ಕ್ ಫಿನ್ ಆಂಟೇನಾ ಇದೆ. ಮುಂಭಾಗದ ಫಾಗ್ ಲ್ಯಾಂಪ್‌ಗಳು ಎಂಥಾ ಮಂಜು ಕವಿದ ರಸ್ತೆಯಿದ್ದರೂ ದಾರಿ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ. ಇದರಿಂದ ಕಾರು ಸರಾಗವಾಗಿ ಚಲಿಸುವಂತೆ ಮಾಡುತ್ತದೆ. 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದಿ ಗ್ರೇಟ್ ಖಲಿ ಜಾಲಿ ರೈಡ್!

ಹ್ಯುಂಡೈ ಕ್ರೆಟಾ ಸೇರದಂತೆ SUV ಕಾರುಗಳಿಗೆ ಪೈಪೋಟಿ ನೀಡಲು ನೂತನ ನಿಸಾನ್ ಕಿಕ್ಸ್ ರೆಡಿಯಾಗಿದೆ. ಕಿಕ್ಸ್ ಕಾರಿನ ಮುಂಭಾಗದಲ್ಲಿ ವಿ ಶೇಪ್ ಗ್ರಿಲ್, ಲಾರ್ಜ್ ಹೆಡ್‌ಲ್ಯಾಂಪ್ಸ್, ಚೈನ್ ಸ್ಪಾಯಿಲರ್, ಇನ್ನೂ LED ಫಾಗ್‌ಲ್ಯಾಂಪ್ಸ್, ಟ್ವಿನ್ ಫೈವ್ ಸ್ಪೋಕ್ ಅಲೋಯ್ ವೀಲ್ಹ್ ಅಳವಡಿಸಲಾಗಿದೆ. 

ಇದನ್ನೂ ಓದಿ: ಮಾರುತಿ ಬ್ರಿಜಾ ಪ್ರತಿಸ್ಪರ್ಧಿ ಮಹೀಂದ್ರ S201 ಶೀಘ್ರದಲ್ಲೇ ಬಿಡುಗಡೆ

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯೆಂಟ್‌ಗಳಲ್ಲಿ ನಿಸಾನ್ ಕಿಕ್ಸ್ ಲಭ್ಯವಿದೆ. ಪೆಟ್ರೋಲ್ 1.6 ಲೀಟರ್ 4 ಸಿಲಿಂಡರ್ ಇಂಜಿನ್ 103 ಬಿಹೆಚ್‌ಪಿ ಪವರ್ ಉತ್ವಾದಿಸಲಿದೆ. 1.5 ಲೀಟರ್ ಡೀಸೆಲ್ ಇಂಜಿನ್ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನ್ಯುಯೆಲ್ ಹಾಗೂ AMT ಟ್ರಾನ್ಸ್‌ಮಿಶನ್ ಲಭ್ಯವಿದೆ.

ಇದನ್ನೂ ಓದಿ: ಭಾರತದಲ್ಲಿ ದಾಖಲೆ ಬರೆದ ಮಾರುತಿ ಸುಜುಕಿ ಸ್ವಿಫ್ಟ್!