Asianet Suvarna News Asianet Suvarna News

2 ದಶಕಗಳಲ್ಲೇ ಇದು ಗರಿಷ್ಠ; ಜುಲೈನಲ್ಲಿ ಪಾತಾಳಕ್ಕೆ ಕುಸಿದ ವಾಹನ ಮಾರಾಟ!

ಭಾರತದ ವಾಹನ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಆಟೋ ಕಂಪನಿಗಳು, ಡೀಲರ್, ಶೋ ರೂಂಗಳು ಬಾಗಿಲು ಮುಚ್ಚುತ್ತಿವೆ. ಇದರ ಬೆನ್ನಲ್ಲೇ ಜುಲೈ ತಿಂಗಳ ವಾಹನ ಮಾರಾಟ ಅಂತಿ ಅಂಶ  ಮತ್ತಷ್ಟು ಆತಂಕ ತಂದಿದೆ.

Indian Automobile companies worst july sales in two decades
Author
Bengaluru, First Published Aug 3, 2019, 6:18 PM IST

ನವದೆಹಲಿ(ಆ.03): ಭಾರತದ ಆಟೋಮೊಬೈಲ್ ಕಂಪನಿಗಳು ನಿಜಕ್ಕೂ ಸಂಕಷ್ಟದಲ್ಲಿದೆ. ಇತರ ದೇಶಗಳಿಗಿಂತ ಭಾರತದಲ್ಲಿ ವಾಹನ ಕಂಪನಿಗಳು ಹೆಚ್ಚಿನ ಆದಾಯ ಗಳಿಸುತ್ತಿತ್ತು. ಇದೀಗ ಕಟ್ಟು ನಿಟ್ಟಿನ ಕ್ರಮ, ಕನಿಷ್ಠ ಸುರಕ್ಷತೆ,  ಎಮಿಶನ್ ನಿಯಮ, ವಾಹನ ವಿಮೆ, ರಿಜಿಸ್ಟ್ರೇಶನ್ ಚಾರ್ಜ್ ಸೇರಿದಂತೆ ಆಟೋಕಂಪನಿಗಳಿಗೆ ಸವಾಲಿನ ಮೇಲೆ ಸವಾಲು ಎದುರಾಗುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ವಾಹನ ಮಾರಾಟ ಕುಸಿತ ಕಂಡಿದೆ.  ಮಾರಾಟದಲ್ಲಿ ಸತತ ಇಳಿಕೆ ಕಾಣುತ್ತಿರುವ ಭಾರತ ಇದೀಗ ಜುಲೈ ತಿಂಗಳಲ್ಲಿ ಆತಂಕಕಾರಿ ಅಂಕಿ ಅಂಶ ಬಹಿರಂಗವಾಗಿದೆ.

ಇದನ್ನೂ ಓದಿ: 18 ತಿಂಗಳಲ್ಲಿ ಮುಚ್ಚಿತು 286 ಶೋ ರೂಂ; 32 ಸಾವಿರ ಮಂದಿ ಬೀದಿಗೆ!

ಪ್ರಮುಖವಾಗಿ ಕಾರು ಮಾರುಕಟ್ಟೆ ಪಾತಳಕ್ಕೆ ಕುಸಿದಿದೆ. ಜುಲೈ ತಿಂಗಳಲ್ಲಿ ಮಾರುತಿ ಸುಜುಕಿ ವಾಹನ ಮಾರಾಟದಲ್ಲಿ -36.71% ಕುಸಿತ ಕಂಡಿದೆ. ಹ್ಯುಂಡೈ -10.28%, ಮಹೀಂದ್ರ & ಮಹೀಂದ್ರ -14.91% , ಟೊಯೊಟಾ -23.79% ಹಾಗೂ ಹೊಂಡಾ -48-67% ರಷ್ಟು ಮಾರಾಟದಲ್ಲಿ ಇಳಿಕೆಯಾಗಿದೆ. ಭಾರತದ ಕಾರು ಮಾರುಕಟ್ಟೆ ಜುಲೈ ತಿಂಗಳಲ್ಲಿ ಒಟ್ಟು -30-62% ರಷ್ಟು ಇಳಿಕೆಯಾಗಿದೆ.

ಇದನ್ನೂ ಓದಿ: ಭಾರತದ ಡಿಎಲ್ ಇದ್ರೆ ಈ ದೇಶಗಳಲ್ಲಿ ಡ್ರೈವಿಂಗ್‌ಗೆ ಪರ್ಮಿಶನ್ ಬೇಕಾಗಿಲ್ಲ!

ಜುಲೈನಲ್ಲಿ ಮಾರುತಿ ಸುಜುಕಿ ಒಟ್ಟು 96,478 ಕಾರುಗಳು ಮಾರಾಟವಾಗಿದೆ. ಹ್ಯುಂಡೈ 39,010 ಕಾರುಗಳು ಮಾರಾಟವಾಗಿದೆ. ಈಗಾಗಲೇ ಸುಮಾರು 300ಕ್ಕೂ ಹೆಚ್ಚು ಡೀಲರ್‌ಗಳು ಆರ್ಥಿಕ ಸಂಕಷ್ಟಕ್ಕೆ ನಲುಗಿ ಹೋಗಿವೆ. ಡೀಲರ್‌ಗಳು ಕಾರು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಇಂಧನ ಕಾರಿನ ಮೇಲಿನ GST(ತೆರಿಗೆ) ಇಳಿಸಲು ಆಟೋಮೊಬೈಲ್ ಕಂಪನಿಗಳು ಮನವಿ ಮಾಡಿವೆ.
 

Follow Us:
Download App:
  • android
  • ios