Asianet Suvarna News Asianet Suvarna News

ಕಡಿಮೆ ಬೆಲೆ, ಗರಿಷ್ಠ ಮೈಲೇಜ್; ಬರುತ್ತಿದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

ಜನಪ್ರಿಯ ಟಾಟಾ ನೆಕ್ಸಾನ್ ಕಾರು ಇದೀಗ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗುತ್ತಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ರೇಂಜ್ ನೀಡಬಲ್ಲ ನೂತನ ನೆಕ್ಸಾನ್ ಕಾರು ಹಲವು ವಿಶೇಷತೆಗಳನ್ನೊಳಗೊಂಡಿದೆ. 

Tata motors will launch electric nexon suv car soon
Author
Bengaluru, First Published Jul 31, 2019, 2:28 PM IST

ನವದೆಹಲಿ(ಜು.31): ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಸಂಚಲ ಮೂಡಿಸುತ್ತಿದೆ. ಆಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸದೊಂದಿಗೆ ಟಾಟಾ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ದೇಶದ ಅತ್ಯುಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೂ ಟಾಟಾ ಪಾತ್ರವಾಗಿದೆ. ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲೂ ಟಾಟಾ ಸಕ್ರಿಯವಾಗಿದೆ. ಇದೀಗ ಟಾಟಾದ ಜನಪ್ರಿಯ ಹಾಗೂ ದಾಖಲೆ ಮಾರಾಟವಾಗಿರುವ ಟಾಟಾ ನೆಕ್ಸಾನ್ SUV ಕಾರು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಇಕೋ ಸ್ಪೋರ್ಟ್, ಮಹೀಂದ್ರ ಹಿಂದಿಕ್ಕಿದ ಟಾಟಾ ನೆಕ್ಸಾನ್!

ಟಾಟಾ ಮೋಟಾರ್ಸ್ ಸಂಸ್ಥೆಯ 74ನೇ ವಾರ್ಷಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಟಾಟಾ ಈಗಾಗಲೆ ಟಿಗೋರ್ ಎಲೆಕ್ಟ್ರಿಕ್ ಅನಾವರಣ ಮಾಡಿದೆ. ಇನ್ನು ಶೀಘ್ರದಲ್ಲೇ ಟಾಟಾ ಅಲ್ಟ್ರೋಝ್ ಎಲೆಕ್ಟಿಕ್ ಕಾರು ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ನೆಕ್ಸಾನ್ SUV ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಟಾಟಾ ನೆಕ್ಸಾನ್ ಕಾರಿನಲ್ಲಿದೆ 10 ಸೇಫ್ಟಿ ಫೀಚರ್ಸ್!

ಅಲ್ಟ್ರೋಝ್ ರೀತಿಯಲ್ಲಿ AC,DC ಚಾರ್ಜರ್ ಹೊಂದಿರುವ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಟಾಟಾ ಮುಂದಾಗಿದೆ. ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಎಂಜಿನ್ ಹೊಂದಿರಲಿದೆ. ಅಲ್ಟ್ರೋಝ್ ಕಾರು ಒಂದು ಚಾರ್ಜ್‌ಗೆ 250 ರಿಂದ 300 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಕ್ವಿಕ್ ಚಾರ್ಜ್ ಮೂಲಕ 60 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇದೇ ಲಿಥಿಯಂ, ಇಯಾನ್ ಬ್ಯಾಟರಿ ನೂತನ ನೆಕ್ಸಾನ್ ಕಾರಿನಲ್ಲಿ ಬಳಸಲು ಟಾಟಾ ನಿರ್ಧರಿಸಿದೆ. 

ನೆಕ್ಸಾನ್ ಕಾರು 5 ಸ್ಟಾರ್ ಸೇಫ್ಟಿ ಹೊಂದಿರುವ ಭಾರತದ ಮೊದಲ ಕಡಿಮೆ ಬೆಲೆಯ ಕಾರು. ಇದೀಗ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ನೀಡಲು ಟಾಟಾ ಮುಂದಾಗಿದೆ. ನೂತನ ಕಾರು 2020ರಲ್ಲಿ ಬಿಡುಗಡೆಯಾಗಲಿದೆ. ಆದರೆ ಬೆಲೆ, ಹಾಗೂ ಇತರ ಮಾಹಿತಿ ಬಹಿರಂಗವಾಗಿಲ್ಲ.

Follow Us:
Download App:
  • android
  • ios