ನವದೆಹಲಿ(ಜ.30): ಮೇಡ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವರ್ಲ್ಡ್ ಎಂಬ ವಿನೂತನ ಚಿಂತನೆಯೊಂದಿಗೆ ನಿಸ್ಸಾನ್‌ ಇಂಡಿಯಾವು ಭಾರತದಲ್ಲಿ ಹೊಸ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈಗಾಗಲೇ ಕಿಕ್ಸ್ SUV ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ನಿಸಾನ್ ಮತ್ತೊಂದು ಹೆಜ್ಜೆ ಇಡುತ್ತಿದೆ. 

ಇದನ್ನೂ ಓದಿ: ನಿಸಾನ್ ಕಿಕ್ಸ್‌ ವರ್ಷಾಚರಣೆ; ಭರ್ಜರಿ ಆಫರ್ ಘೋಷಣೆ!

ಎಸ್‌ಯುವಿ ಉತ್ಪಾದನೆಯಲ್ಲಿ ಈಗಾಗಲೇ ಜಾಗತಿಕ ಮನ್ನಣೆ ಗಳಿಸಿರುವ ನಿಸ್ಸಾನ್‌ 2020ರ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯಂತ ಐಷಾರಾಮಿ ಹಾಗೂ ಅತಿ ವಿನೂತನ ವಿನ್ಯಾಸಗಳಿಂದ ಮಾರುಕಟ್ಟೆಪ್ರವೇಶಕ್ಕೆ ಅಣಿಯಾಗಿದೆ. 

ಇದನ್ನೂ ಓದಿ: ಲೀಫ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಖಚಿತಪಡಿಸಿದ ನಿಸಾನ್!

ಆಧುನಿಕ ತಂತ್ರಜ್ಞಾನವಾದ ನಿಸ್ಸಾನ್‌ ಇಂಟಲಿಜೆಂಟ್‌ ಮೊಬಿಲಿಟಿ, ಜಪಾನ್‌ ತಂತ್ರಜ್ಞಾನ ಇದ್ದು, ನಿಸ್ಸಾನ್‌ನ ಐಕಾನಿಕ್‌ ಮಾಡೆಲ್‌ಗಳಾದ ಪ್ಯಾಟ್ರೊಲ್‌, ಪಾಥ್‌ಪೈಂಡರ್‌, ಆರ್ಮಡಾ, ಎಕ್ಸ್‌ ಟ್ರೈಲ್‌, ಜ್ಯೂಕ್‌, ಕ್ವಶ್ಕಾಯಿ, ಮತ್ತು ಕಿಕ್ಸ್‌ ಮಾದರಿಯಲ್ಲೇ ಇದೂ ಕೂಡ ನಿರ್ಮಾಣವಾಗಿದೆ