ಬೆಂಗಳೂರು(ಅ.24): ದೀಪಾವಳಿ ಹಬ್ಬಕ್ಕೆ ಭಾರತ ಸಜ್ಜಾಗುತ್ತಿದೆ. ಪ್ರತಿ ಮನೆಯಲ್ಲೂ ಹಬ್ಬದ ಸಡಗರ ಕಳೆಗಟ್ಟಿದೆ. ಇನ್ನು ಈ ಹಬ್ಬಕ್ಕೆ ಕಾರು ಖರೀದಿ ಮಾಡಲು ಹಲವರು ಪ್ಲಾನ್ ಹಾಕಿಕೊಂಡಿರುತ್ತಾರೆ. ಇದೀಗ  ಹಬ್ಬದ ಖುಷಿ ಹೆಚ್ಚಿಸಲು ಕಾರು ಖರೀದಿ ಮಾಡಬೇಕು ಎಂಬ ಆಸೆ ಉಳ್ಳವರಿಗೆ ನಿಸಾನ್‌ ಗ್ರೂಪ್‌ ಒಂದು ಭರ್ಜರಿ ಆಫರ್ ನೀಡುತ್ತಿದೆ.

ಇದನ್ನೂ ಓದಿ: ನಿಸಾನ್ ಕಿಕ್ಸ್-ಜೂಮ್ ಕಾರು ಒಪ್ಪಂದ; ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ!

ಅಕ್ಟೋಬರ್‌ 31ರ ಒಳಗೆ ನಿಸಾನ್‌ ಮತ್ತು ಡಾಟ್ಸನ್‌ ಕಾರು ಖರೀದಿಸುವವರಿಗೆ ಬೇಜಾನ್‌ ಆಫರ್‌ಗಳನ್ನು ಕಂಪನಿ ನೀಡುತ್ತಿದೆ. ನಿಸಾನ್‌ ಕಿಕ್ಸ್‌ ಎಸ್‌ಯುವಿ ಖರೀದಿಸಿದರೆ ಐದು ವರ್ಷ ಎಕ್ಸ್ಟ್ರಾ ವಾರಂಟಿ ಲಭ್ಯ. ಅಲ್ಲದೇ ಸುಮಾರು ರು 40,000 ದವರೆಗಿನ ಲಾಭ ಸಿಗಲಿದೆ. 

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ದಾಟ್ಸನ್ ಹೊರತಂದಿದೆ 2 ಹೊಸ ಕಾರು!

ನಿಸಾನ್‌ ಸನ್ನಿ, ಮೈಕ್ರಾ ಮತ್ತು ಮೈಕ್ರಾ ಆ್ಯಕ್ಟಿವ್‌ ಕಾರು ಖರೀದಿಸಿದರೆ ಸುಮಾರು ರು 94,000ದವರೆಗೆ ಬೆನಿಫಿಟ್‌ ಸಿಗಲಿದೆ. ಡಾಟ್ಸನ್‌ ಗೋ, ಗೋ ಪ್ಲಸ್‌ ಮತ್ತು ರೆಡಿ ಗೋ ಕಾರು ಖರೀದಿಗೆ ರು 62,000ದವರೆಗೆ ಅನುಕೂಲವಾಗಲಿದೆ. ನಿಸಾನ್‌ ಮೋಟಾರ್‌ ಇಂಡಿಯಾದ ನಿರ್ದೇಶಕ ರಾಕೇಶ್‌ ಶ್ರೀವಾಸ್ತವ ಈ ಆಫರ್‌ ಪ್ರಕಟಿಸಿ, ಹಬ್ಬಕ್ಕೆ ಈ ಕೊಡುಗೆ ನೀಡಲು ಸಂತೋಷವಾಗುತ್ತಿದೆ ಎಂದಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಆಫರ್ ಘೋಷಣೆ ಮಾಡಿ ಮಾತನಾಡಿದರಾಕೇಶ್ ಶ್ರೀವಾಸ್ತವ, ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಆರಂಭವಾಗಿದ್ದು, ಸಂಭ್ರಮ ಉತ್ತುಂಗಕ್ಕೇರಿದೆ. ಈ ವೇಳೆಯಲ್ಲಿ ನಮ್ಮ ಗ್ರಾಹಕರಿಗೆಂದೇ ನಾವು ಈ ಆಕರ್ಷಕ ಹಬ್ಬದ ಉಡುಗೊರೆ ನೀಡುತ್ತಿದ್ದೇವೆ ಎಂದರು.

 ಅಕ್ಟೋಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ