ನ್ಯೂಯಾರ್ಕ್(ಮಾ.13): ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಖ್ಯಾತ ಸಿಂಗರ್ ನಿಕ್ ಜೋನಸ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇದೀಗ ಪತ್ನಿ ಪ್ರಿಯಾಂಕಾಗೆ ನಿಕ್ ಜೋನಸ್ ಬರೋಬ್ಬರಿ 3 ಕೋಟಿ ರೂಪಾಯಿ ಮರ್ಸಡೀಸ್ ಬೆಂಝ್ ಮೇಬ್ಯಾಚ್ S650 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಪತ್ನಿಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಪುನೀತ್!

ನಿಕ್ ಜೋನಸ್ ಸಹೋದರರ ಆಲ್ಬಮ್ ಸಿಂಗಲ್ ಇದೀಗ ವಿಶ್ವದ ನಂ.1 ಸ್ಥಾನ ಪಡೆದುಕೊಂಡಿದೆ.  ಇದೀಗ ಸಂಭ್ರಮಾಚರಣೆಯಲ್ಲಿರುವ ನಿಕ್ ಜೋನಸ್ ಪತ್ನಿ ಪ್ರಿಯಾಂಕಾಗೆ ದುಬಾರಿ ಕಾರನ್ನೇ ಗಿಫ್ಟ್ ನೀಡಿದ್ದಾರೆ. ಈ ಕಾರಿಗೆ ಪ್ರಿಯಾಂಕ ಎಕ್ಸ್ಟಾ ಚೋಪ್ರಾ ಜೋನಸ್ ಎಂದು ಹೆಸರಿಟ್ಟಿದ್ದಾರೆ.

 

 

ದುಬಾರಿ ಕಾರಿನಲ್ಲಿ ಮರ್ಸಡೀಸ್ ಬೆಂಝ್ ಮೇಬ್ಯಾಚ್ S650 ಟಾಪ್ ವೇರಿಯೆಂಟ್ ಕಾರು. ಭಾರತದಲ್ಲಿ ಇದರ ಬೆಲೆ 2.73 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).  6.0 ಲೀಟರ್ V12 ಎಂಜಿನ್ 630 Bhp ಪವರ್ ಹಾಗೂ  1,000 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ:ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

0-100 ಕಿ.ಮೀಯನ್ನು ಕೇವಲ 4.7 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿದೆ.  ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕಾರು, 19 ಇಂಚು ಅಲೋಯ್ ವೀಲ್ಹ್, LED ಹೆಡ್‌ಲ್ಯಾಂಪ್ಸ್, ಮಲ್ಟಿಫಂಕ್ಷನ್ ಸ್ಟೆರಿಂಗ್ ವೀಲ್ಹ್, ಫ್ರಾಗ್ರಾನ್ಸ್ ಕಿಟ್, 26 ಸ್ಪೀಕರ್, ಪನಾರೋಮಿಕ್ ಸನ್‌ರೂಫ್, ವೈಯರ್‌ಲೆಲ್ ಚಾರ್ಜರ್ ಸೇರಿದಂತೆ ಹಲವು ಸೌಲಭ್ಯ ಹೊಂದಿದೆ.

ಗರಿಷ್ಠ ಸುರಕ್ಷತೆ ನೀಡಬಲ್ಲ ಈ ಕಾರು ABS, EBD ಸೇರಿದಂತೆ ಅತ್ಯಾಧುನಿಕ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಏರ್‌ಬ್ಯಾಗ್, ಮ್ಯಾಜಿಕ್ ಕಾರ್ಪೆಟ್ ಒಳಗೊಂಡ ಸೌಲಭ್ಯಗಳು ಮರ್ಸಡಿಸ್ ಮೆಬ್ಯಾಚ್ ಕಾರಿನಲ್ಲಿದೆ. ಭಾರತದಲ್ಲಿ ಪ್ರಿಯಾಂಕಾ ಚೋಪ್ರಾ ಬಳಿ ರೋಲ್ಸ್ ರಾಯ್ಸ್ ಘೋಸ್ಟ್,  BMW 5-ಸಿರೀಸ್,  ಮರ್ಸಡೀಸ್ ಬೆಂಝ್ S-Class, ಮರ್ಸಡೀಸ್ ಬೆಂಝ್ E-Class ಹಾಗೂ ಆಡಿ Q7 ಕಾರು ಹೊಂದಿದ್ದಾರೆ.