ಬೆಂಗಳೂರು(ಸೆ.24):  ಹೊಚ್ಚ ಹೊಸ ಟೊಯೋಟಾ ಅರ್ಬನ್ ಕ್ರೂಸರ್ ಕಾರು ಬಿಡುಗಡೆಯಾಗಿದೆ. ನೂತನ ಕಾರು ಕಿಯಾ ಸೊನೆ, ಟಾಟಾ ನೆಕ್ಸಾನ್, ಮಹೀಂದ್ರ XUV300, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.  ಕಿಯಾ ಸೊನೆಟ್ ಕಾರಿನ ಬೆನ್ನಲ್ಲೇ ಇದೀ ಗ ಟೊಯೋಟಾ ಅರ್ಬನ್ ಕ್ರೂಸರ್ ಕಾರು ಬಿಡುಗಡೆಯಾಗಿದೆ. 

ಹಲವು ವಿಶೇಷಗಳ ಹೊಚ್ಚ ಹೊಸ ಟೊಯೋಟಾ ಅರ್ಬನ್ ಕ್ರೂಸರ್ SUV ಕಾರು ಬಿಡುಗಡೆ!

ಕಿಯಾ ಸೊನೆಟ್ ಕಾರು ಸೆಪ್ಟೆಂಬರ್ 18 ರಂದು ಮಾರಾಟ ಆರಂಭಿಸಿದೆ. ಇದೀಗ ಟೊಯೋಟಾ ಅರ್ಬನ್ ಕ್ರೂಸರ್ ಸೆಪ್ಟೆಂಬರ್ 24ರಂದು ಮಾರುಕಟ್ಟೆ ಪ್ರವೇಶಿಸಿದೆ. ಈ ಎರಡು ಕಾರಿನ ಡಿಫರೆನ್ಸ್ ಏನು ಅನ್ನೋದು ಇಲ್ಲಿ ವಿವರಿಸಲಾಗಿದೆ.

ಕಿಯಾ ಸೊನೆಟ್ ಕಾರಿನ ಮೈಲೇಜ್ ಬಹಿರಂಗ; ಹ್ಯುಂಡೈ ವೆನ್ಯೂಗಿಂತ ಉತ್ತಮ!.

ಟೊಯೋಟಾ ಅರ್ಬನ್ ಕ್ರೂಸರ್ ಕಾರು 3995mm ಉದ್ದ, 1790mm ಅಗಲ, 2500mm ವೀಲ್ ಬೇಸ್ ಹೊಂದಿದೆ. ಇನ್ನು ಕಿಯಾ ಸೊನೆಟ್ ಕಾರು ಕೂಡ  3995mm ಉದ್ದ, 1790mm ಅಗಲ, 2500mm ವೀಲ್ ಬೇಸ್ ಹೊಂದಿದೆ. ಆದರೆ ಎತ್ತರದಲ್ಲಿ ಕಿಯಾ ಸೊನೆಟ್ ಕಾರು 1642mm ಹೊಂದಿದ್ದರೆ, ಅರ್ಬನ್ ಕ್ರೂಸರ್ 1640mm ಹೊಂದಿದೆ.

ಅರ್ಬನ್ ಕ್ರೂಸರ್ ಕಾರು ಡೀಸೆಲ್ ವೇರಿಯೆಂಟ್ ಎಂಜಿನ್ ಲಭ್ಯವಿಲ್ಲ. ಇನ್ನು ಪೆಟ್ರೋಲ್ ವೇರಿಯೆಂಟ್ ಕಾರು K-ಸೀರೀಸ್ 1.5 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ತಡೆರಹಿತ ಮ್ಯಾನುಯಲ್ ಟ್ರಾನ್ಸ್‌ಮಿಷನ್ (MT) / ಸ್ವಯಂಚಾಲಿತ ಪ್ರಸರಣ (AT) ಟ್ರಾನ್ಸ್‌ಮಿಶನ್ ಹೊಂದಿದೆ. ಆದರೆ ಕಿಯಾ ಸೊನೆಟ್ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಹಾಗೂ 1.0 ಲೀಟರ್ ಟರ್ಬೋ ಪೆಟ್ರೋಲ್ ಆಯ್ಕೆ ಇದೆ. ಇನ್ನು 1.5 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ಕೂಡ ಲಭ್ಯವಿದೆ.

ಕಾರ್ ಕನೆಕ್ಟೆಡ್ ಫೀಚರ್ಸ್‌ನಲ್ಲಿ ಕಿಯಾ ಮುಂಚೂಣಿಯಲ್ಲಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, UVO ಕನೆಕ್ಟೆಡ್ ಕಾರು ಟೆಕ್ನಾಲಜಿ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್, ಡಿಜಿಟಲ್ ಇನ್ಸ್‌ಟ್ರುಮೆಂಟಲ್ ಕ್ಲಸ್ಟರ್, ವಯರ್‌ಲೆಸ್ ಸ್ಮಾರ್ಟ್ ಪೋನ್ ಚಾರ್ಜರ್, LED ಸೌಂಡ್ ಮೂಡ್ ಲೈಟ್, ಏರ್ ಪ್ಯೂರಿಫೈಯರ್ ಹಾಗೂ ಡಿಸ್‌ಪ್ಲೇ ಸೇರಿದಂತೆ ಹತ್ತು ಹಲವು ಫೀಚರ್ಸ್ ಸೊನೆಟ್ ಕಾರಿನಲ್ಲಿ ಲಭ್ಯವಿದೆ

ಅರ್ಬನ್ ಕ್ರೂಸರ್ ಕಾರಿನ ಫೀರಚರ್ಸ್ ಹೆಚ್ಚು ಕಡಿಮೆ ಮಾರುತಿ ಬ್ರೆಜ್ಜಾ ಕಾರಿನ ಫೀಚರ್ಸ್ ಗಳಾಗಿವೆ. 7 ಇಂಚಿನ ಟಚ್‌ಸ್ಕ್ರೀನ್, ರೈನ್ ಸೆನ್ಸಿಂಗ್ ವೈಪರ್ ಸೇರಿದಂತೆ ಬ್ರಿಜಾ ಫೀಚರ್ಸ್ ಲಭ್ಯವಿದೆ.

ಬೆಲೆಯಲ್ಲೂ ಕಿಯಾ ಸೊನೆಟ್ ತೀವ್ರ ಪೈಪೋಟಿ ನೀಡಲಿದೆ. ಕಾರಣ ಕಿಯಾ ಸೊನೆಟ್ ಕಾರಿನ ಆರಂಭಿಕ ಬೆಲೆ 6.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟೊಯೋಟಾ ಅರ್ಬನ್ ಕ್ರೂಸರ್ ಕಾರಿನ ಬೆಲೆ 8.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕಿಯಾ ಸೊನೆಟ್ ಟಾಪ್ ಮಾಡೆಲ್ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇತ್ತ ಅರ್ಬನ್ ಕ್ರೂಸರ್ ಟಾಪ್ ಮಾಡೆಲ್ ಬೆಲೆ 11.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).