Asianet Suvarna News Asianet Suvarna News

ಬೆಂಗಳೂರಿನಲ್ಲಿ ಯಮಹಾ ಮೋಟೋ ವರ್ಲ್ಡ್ ಆರಂಭ!

ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ವ್ಯೂಹಾತ್ಮಕವಾಗಿ ಹೆಚ್ಚಿಸುವ ಗುರಿಯನ್ನು ಯಮಹಾ ಹೊಂದಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ನೂತನ ಯಮಹಾ ವರ್ಲ್ಡ್ ಆರಂಭಗೊಂಡಿದೆ.

New Yamaha Dealership Launched 18th in Bengaluru
Author
Bengaluru, First Published Oct 24, 2018, 11:50 AM IST

ಬೆಂಗಳೂರು(ಅ.24):  ಇಂಡಿಯಾ ಯಮಹಾ ಮೋಟಾರ್‌ (ಐವೈಎಂ) ಪ್ರೈ.ಲಿ. ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಹೊಸ ಡೀಲರ್‌ಶಿಪ್‌ ಪ್ರಾರಂಭಿಸಿದೆ. "ಮೋಟೋ ವರ್ಲ್ಡ್‌'' ಹೆಸರಿನ ಈ ಕೇಂದ್ರವು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಎನ್‌ಎಚ್‌ 7, ಹೊಸೂರು ಮುಖ್ಯ ರಸ್ತೆಯಲ್ಲಿ ಉದ್ಘಾಟನೆಯಾಗುವುದರೊಂದಿಗೆ ಯಮಹಾ ಬೆಂಗಳೂರಿನಲ್ಲಿ ಒಟ್ಟಾರೆ 18 ಮತ್ತು ಕರ್ನಾಟಕದಲ್ಲಿ 50 ಡೀಲರ್‌ಶಿಪ್‌ ಹೊಂದಿದೆ.

ದೇಶೀ ಮಾರುಕಟ್ಟೆಯಲ್ಲಿರುವ ಎಲ್ಲ ರೀತಿಯ ಯಮಹಾ ದ್ವಿಚಕ್ರ ವಾಹನಗಳ ಮಾದರಿಗಳು ಇದರಲ್ಲಿ ಲಭ್ಯವಾಗಲಿವೆ. ಜೊತೆಗೆ ಮಾರಾಟ, ಸೇವೆಗಳು ಮತ್ತು ಬಿಡಿಭಾಗಗಳ ಬೆಂಬಲ ನೀಡುವ ವಿಶಿಷ್ಟ ಪ್ರದೇಶ ಲಭ್ಯವಾಗಲಿದೆ. ಇದು ಒಟ್ಟಾರೆ 13,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಡೀಲರ್‌ಶಿಪ್‌ ಪ್ರಾದೇಶಿಕ ಮಾರುಕಟ್ಟೆಯ ಮೇಲೆ ಗಮನ ಕೇಂದ್ರೀಕರಿಸಲಿದೆ. 

ಯಮಹಾದ ಈಗಿರುವ ವಿಶಿಷ್ಟ ಸರಣಿಯ ದ್ವಿಚಕ್ರ ವಾಹನಗಳ ಪ್ರಗತಿ ಮತ್ತು ಪ್ರಚಾರ, ಸೇವೆಯ ಬೆಂಬಲ ಮತ್ತು ಬಿಡಿಭಾಗಗಳ ಲಭ್ಯತೆ ಇವುಗಳನ್ನು ಖಚಿತಪಡಿಸಲಿದೆ. ಇದರಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಇನ್ನಷ್ಟು ವೃದ್ಧಿ ಕಾಣಲಿದೆ.

ಸ್ಪೋರ್ಟಿ ಮತ್ತು ಪ್ರೀಮಿಯಂ ಬೈಕ್‌ ಅಪೇಕ್ಷಿಸುವವರ ಒಂದು ವರ್ಗ ಸೃಷ್ಟಿಯಾಗಿದ್ದು ಮೋಟೋ ವರ್ಲ್ಡ್‌ನಲ್ಲಿ ಮುಂದುವರಿದ ತಂತ್ರಜ್ಞಾನದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವ ವಿಶ್ವಾಸವನ್ನು ಯಮಹಾ ಹೊಂದಿದೆ'' ಎಂದು ಯಮಹಾ ಮೋಟಾರ್‌ ಇಂಡಿಯಾ ಸೇಲ್ಸ್‌ ಪ್ರೈ. ಲಿ.ನ ಮಾರಾಟ ಮತ್ತು ಮಾರುಕಟ್ಟೆ ಹಿರಿಯ ಉಪಾಧ್ಯಕ್ಷ ರಾಯ್‌ ಕುರಿಯನ್‌ ಹೇಳಿದರು.

ಯಮಹಾ ಇತ್ತೀಚೆ ಬಿಡುಗಡೆ ಮಾಡಿರುವ ಬಹು ನಿರೀಕ್ಷಿತ ವೈಝಡ್‌ಎಫ್‌-ಆರ್‌15 ಆವೃತ್ತಿ 3.0 ಮತ್ತು ಎಬಿಎಸ್‌ ತಂತ್ರಜ್ಞಾನವನ್ನು ಹೊಂದಿರುವ ವೈಝಡ್‌ಎಫ್‌-ಆರ್‌3 ಕ್ರಮವಾಗಿ ರು. 1,27,000 ಮತ್ತು ರು. 3,49,000 ಬೆಲೆಯನ್ನು ಹೊಂದಿದೆ (ಎಕ್ಸ್‌ ಶೋರೂಂ ಕರ್ನಾಟಕ). ಇವು ಪ್ರೀಮಿಯಂ ಮತ್ತು ಸ್ಪೋರ್ಟಿ ವಿಭಾಗದಲ್ಲಿ ತನ್ನ ಪಾಲನ್ನು ಇನ್ನಷ್ಟು ಹಿಗ್ಗಿಸಿಕೊಳ್ಳಲಿದೆ.
 ಯಮಹಾ ವೈಝಡ್‌ಎಫ್‌-ಆರ್‌15 ಆವೃತ್ತಿ 3.0 ಮೋಟೋ ಜಿಪಿ ಮತ್ತು ಎಫ್‌ಝಡ್‌ಎಸ್‌-ಎಫ್‌1 ಕೂಡ ಬಿಡುಗಡೆ ಮಾಡಿದೆ. 

ಇವುಗಳಿಗೆ  ಹಿಂಭಾಗದಲ್ಲಿ ಡಿಸ್ಕ್‌ ಬ್ರೇಕ್‌ಗಳಿವೆ. ಹೊಸ ಬಣ್ಣಗಳನ್ನು ಹೊಂದಿವೆ. "ದಿ ಕಾಲ್ ಆಫ್‌ ದಿ ಬ್ಲೂ'' ಎಂದು ಇತ್ತೀಚೆ ಹೊಸ ಬ್ರಾಂಡ್‌ನ ಪ್ರಚಾರ ಮಾಡಿಲಾಗಿತ್ತು. ಅದಕ್ಕೆ ಅನುಗುಣವಾಗಿ ಇವು ಇವೆ.  

Follow Us:
Download App:
  • android
  • ios