ಹರ್ಯಾಣ(ಸೆ.09): ಹೊಸ ಟ್ರಾಫಿಕ್ ರೂಲ್ಸ್‌ನಿಂದ ನಿಯಮ ಉಲ್ಲಂಘನೆ ಮಾಡವವರು ಎಚ್ಚೆತ್ತುಕೊಂಡಿದ್ದಾರೆ. ಎಚ್ಚೆತ್ತುಕೊಳ್ಳದ ಕೆಲವರು ದುಬಾರಿ ದಂಡ ಪಾವತಿಸಿ ವಾಹನ ಸಹವಾಸವೇ ಸಾಕು ಎನ್ನುತ್ತಿದ್ದಾರೆ. ಹೊಸ ನಿಯಮ ಜಾರಿಯಾದ ಬಳಿಕವ ಹಲವು ಗೊಂದಲಗಳು ಜನರನ್ನು ಕಾಡುತ್ತಿದೆ. ಇದರಲ್ಲಿ ಪೊಲೀಸರು ವಾಹನ ನಿಲ್ಲಿಸಿ ತಪಾಸಣೆ ವೇಳೆ ವಿಡಿಯೋ ರೆಕಾರ್ಡ್ ಮಾಡಬಹುದಾ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರು: 6 ದಿನದಲ್ಲಿ 6 ಸಾವಿರ ಟ್ರಾಫಿಕ್ ಕೇಸ್, 72 ಲಕ್ಷ ರೂ ದಂಡ ವಸೂಲಿ!

ಟ್ರಾಫಿಕ್ ಪೊಲೀಸರು ವಾಹನ ನಿಲ್ಲಿಸಿ, ಡಾಕ್ಯುಮೆಂಟ್, ಡ್ರೈವಿಂಗ್ ಲೈಸೆನ್ಸ್ ತಪಾಸಣೆ  ವೇಳೆ ವಾಹನ ಮಾಲೀಕರು ವಿಡಿಯೋ ರೆಕಾರ್ಡ್ ಮಾಡಬಹುದೇ? ಎಂದು ಹರ್ಯಾಣ ಸಾಮಾಜಿಕ ಕಾರ್ಯಕರ್ತ(RTI Activist)ಅನುಭವ್ ಶುಖಿಜಾ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನೆ ಕೇಳಿದ್ದರು. ಇದಕ್ಕೆ ವಿಡಿಯೋ ರೆಕಾರ್ಡ್ ಮಾಡಬಾರದು ಅನ್ನೋ ಕುರಿತು ಎಲ್ಲೂ ಉಲ್ಲೇಖವಿಲ್ಲ. ವಾಹನ ಮಾಲೀಕರು ವಿಡಿಯೋ ರೆಕಾರ್ಡ್ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು RTI ಉತ್ತರಿಸಿದೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ನಿಯಮ ಉಲ್ಲಂಘನೆ ಹಾಗೂ ದಂಡ, ಇಲ್ಲಿದೆ ಸಂಪೂರ್ಣ ವಿವರ

ಪೊಲೀಸರ ತಪಾಸಣೆ ಕುರಿತು ವಿಡಿಯೋ ಮಾಡಿದರೆ ತಪ್ಪೇನಿಲ್ಲ.  ಆದರೆ ವಿಡಿಯೋ ರೆಕಾರ್ಡ್ ಪೊಲೀಸರ ಕರ್ತ್ಯವ್ಯಕ್ಕೆ ಅಡ್ಡಿಪಡಸಬಾರದು ಎಂದಿದೆ. ಹೊಸ ನಿಯಮ ಜಾರಿಯಾದ ಬಳಿಕ ದಂಡ ವಸೂಲಿ ಹೆಚ್ಚಾಗಿದೆ. ದುಬಾರಿ ದಂಡ ಪಾವತಿಸಿದ ಪ್ರಕರಣಗಳು ವರದಿಯಾಗುತ್ತಿದೆ. ಜನರು ರಸ್ತೆ ನಿಯಮ ಪಾಲಿಸಿದರೆ ಯಾವುದೇ ಸಮಸ್ಯೆ ಇಲ್ಲ. ನಿಯಮ ಉಲ್ಲಂಘಿಸಿದರೆ ಕಿರಿ ಕಿರಿ ತಪ್ಪೋದಿಲ್ಲ.