ಆಕರ್ಷಕ ಲುಕ್, ಅತ್ಯುತ್ತಮ ಮೈಲೇಜ್ -ಜೀಪ್ ಕಂಪಾಸ್ ಸ್ಪೋರ್ಟ್ಸ್ ಪ್ಲಸ್ ಟ್ರಿಮ್ ಕಾರು
ಜೀಪ್ ಕಂಪಾಸ್ SUV ಕಾರು ಭಾರತದ ಬಹು ಬೇಡಿಕೆಯ ಕಾರು. ಇದೀಗ ಜೀಪ್ ಕಂಪಾಸ್ ಸ್ಪೋರ್ಟ್ಸ್ ಪ್ಲಸ್ ಟ್ರಿಮ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ: ಹೆಚ್ಚುತ್ತಿರುವ ಸ್ಪರ್ಧೆಯ ಮಧ್ಯೆ ಫಿಯೆಟ್ ಕ್ರೈಸ್ಲರ್ ಇಂಡಿಯಾ ಕಂಪೆನಿ ಜೀಪ್ ಕಂಪಾಸ್ ಸೀರಿಸ್‌ನ ಹೊಸ ಮಾಡೆಲ್ ಸ್ಪೋರ್ಟ್ಸ್ ಪ್ಲಸ್ ಟ್ರಿಮ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. 16 ಇಂಚಿನ ಸ್ಟೋರ್ಟಿ ಆಕರ್ಷಕ ಅಲಾಯ್, ತಾಪಮಾನವನ್ನು ನಿಯಂತ್ರಿಸುವ ಡ್ಯುಯೆಲ್ ಝೋನ್ ಸ್ವಯಂ ಚಾಲಿತ ಏರ್ ಕಂಡೀಶನಿಂಗ್ ಸೇರಿದಂತೆ ಹಲವು ಫೀಚರ್ಸ್ ನೂತನ ಕಾರಿನಲ್ಲಿದೆ.
ಇದನ್ನೂ ಓದಿ: 2018-19ರಲ್ಲಿ ಗರಿಷ್ಠ ಮಾರಾಟ - ಮಾರುತಿ ಸುಜುಕಿಯದ್ದೇ 'ಕಾರು'ಬಾರು!
ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಕಾರಿನ ಮೇಲ್ಭಾಗ ಕರಿಬಣ್ಣದ ರೂಫ್ ರೈಲ್ಸ್ ಮೊದಲಾದ 21 ಹೊಸ ಫೀಚರ್‌ಗಳಿರುವ ಕಾರ್ ಇದು. ಇದಲ್ಲದೇ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಮತ್ತೊಂದು ವಿಶೇಷತೆ. ಕಂಫರ್ಟ್ ಹಾಗೂ ಲಗ್ಸುರಿಗಳೆರಡನ್ನೂ ಹದವಾಗಿ ಬೆರೆಸಿ ತಯಾರಿಸಿರೋ ಈ ಎಸ್‌ಯುವಿ 14.1 ರಷ್ಟುಮೈಲೇಜ್ ಕೊಡುತ್ತೆ ಅಂತ ಕಂಪೆನಿ ಹೇಳುತ್ತೆ. ಪೆಟ್ರೋಲ್ ಹಾಗೂ ಡೀಸೆಲ್‌ಗಳೆರಡರಲ್ಲೂ ಲಭ್ಯ.
ಇದನ್ನೂ ಓದಿ: ಒಮ್ನಿ To ಇಯಾನ್: ಇಲ್ಲಿದೆ ಗುಡ್ ಬೈ ಹೇಳಲಿರುವ ಕಾರುಗಳ ಲಿಸ್ಟ್!
ಜೀಪ್ ಕಂಪಾಸ್ ಸ್ಪೋರ್ಟ್ಸ್ ಪ್ಲಸ್ ಟ್ರಿಮ್ ಕಾರಿನ ಬೆಲೆ 15.99 ಲಕ್ಷ ರುಪಾಯಿ (ದೆಹಲಿ ಎಕ್ಸ್‌ಶೋರೂಮ್ ದರ). ಮಹೀಂದ್ರ XUV500 ಹಾಗೂ ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಜೀಪ್ ಕಂಪಾಸ್ ಭಾರತದಲ್ಲಿ SUV ಕಾರಿಗೆ ಹೊಸ ಭಾಷ್ಯ ಬರೆದಿದೆ.