ಸುರಕ್ಷತಾ ನಿಯಮ ಪಾಲಿಸಿದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಕೇಂದ್ರ ಸರ್ಕಾರದ ನೂತನ ನಿಯಮ ಪಾಲಿಸದ ಹಲವು ಕಾರಗಳು ಉತ್ಪಾದನೆ ಸ್ಥಗಿತಗೊಳಿಸುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ.

ಬೆಂಗಳೂರು(ಏ.06): ಕೇಂದ್ರ ಸರ್ಕಾರದ ನೂತನ ನಿಯಮದ ಪ್ರಕಾರ ಎಪ್ರಿಲ್ 1, 2019ರಿಂದ ಕನಿಷ್ಠ ಸುರಕ್ಷತೆ ಇಲ್ಲದೆ ಕಾರುಗಳನ್ನು ಮಾರಾಟ ಮಾಡುವಂತಿಲ್ಲ. ಸುರಕ್ಷತಾ ಫೀಚರ್ಸ್ ಅಪ್‌ಗ್ರೇಡ್ ಮಾಡದ ಮಾರುತಿ ಒಮ್ಮಿ ಉತ್ಪಾದನೆ ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ಹಲವು ಕಾರುಗಳು ಭಾರತದಿಂದ ಗುಡ್ ಬೈ ಹೇಳುತ್ತಿದೆ. 

ಇದನ್ನೂ ಓದಿ: Youtubeನಲ್ಲಿ Live: ಫೋರ್ಡ್ ಮಸ್ತಾಂಗ್ ಚಾಲಕ ಪೊಲೀಸರ ಅತಿಥಿ!

ನೂತನ ನಿಯಮದ ಪ್ರಕಾರ ಕ್ರಾಶ್ ಟೆಸ್ಟ್‌ನಲ್ಲಿ ಕನಿಷ್ಠ ಸುರಕ್ಷತೆ ರೇಟಿಂಗ್ ಪಡೆದಿರಬೇಕು. ಇನ್ನು ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಬೇಸಿಕ್ ಏರ್‌ಬ್ಯಾಗ್ ಇರಲೇಬೇಕು. ಆದರೆ ಈ ಫೀಚರ್ಸ್ ಅಳವಡಿಸಿದರೆ ಕಾರಿನ ಬೆಲೆ ಹೆಚ್ಚಾಗಲಿದೆ. ಹೀಗಾಗಿ ಕೆಲ ಕಾರುಗಳು ಅಪ್‌ಗ್ರೇಡ್‌ಗೆ ಮುಂದಾಗಿಲ್ಲ. ಇಷ್ಟೇ ಅಲ್ಲ ಉತ್ಪಾದನೆ ಕೂಡ ಸ್ಥಗಿತಗೊಳಿಸಿದೆ. ಇಲ್ಲಿದೆ ಸ್ಥಗಿತೊಂಡಿರುವ ಹಾಗೂ ಸ್ಥಗಿತಗೊಳ್ಳಲಿರುವ ಕಾರುಗಳ ಲಿಸ್ಟ್.

ಇದನ್ನೂ ಓದಿ: ಮಾರ್ಚ್‌ನಲ್ಲಿ ದಾಖಲೆ ಬರೆದ ನೂತನ ಮಾರುತಿ ಎರ್ಟಿಗಾ ಕಾರು!

ಮಾರುತಿ ಒಮ್ಮಿ


ಮಾರುತಿ ಸುಜುಕಿ ಜಿಪ್ಸಿ


ಹೊಂಡಾ ಬ್ರಿಯೋ


ಟಾಟಾ ನ್ಯಾನೋ


ಹ್ಯುಂಡೈ ಇಯಾನ್