ನವದೆಹಲಿ(ಮಾ.07): ಬಹುನಿರೀಕ್ಷಿತ ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 15 ರಂದು 2019ರ ನೂತನ ಫೋರ್ಡ್ ಫಿಗೋ ಬಿಡುಗಡೆಯಾಗಲಿದೆ. ಹೆಚ್ಚುವರಿ ಫೀಚರ್ಸ್, ಆಕರ್ಷಕ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನ ನತನ ಫಿಗೋ ಫೇಸ್‌ಲಿಫ್ಟ್ ವಿಶೇಷತೆ.

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

ಹಳೇ ಫಿಗೋ ಕಾರು 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 95bhp ಪವರ್ ಹಾಗೂಬ 120Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ನೂತನ ಫಿಗೋ 1.5 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 123 bhp ಪವರ್ ಹಾಗೂ 150 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಏರ್ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗೆ ಚೆಕ್ ವಿತರಿಸಿದ ಗೃಹ ಸಚಿವ!

ಕಾರಿನ ಮುಂಭಾಗದಲ್ಲಿ ಹೊನಿಕಾಂಬ್ ಪ್ಯಾಟರ್ ಗ್ರಿನ್ ಫೇಸ್‌ಲಿಫ್ಟ್ ವಿಶೇಷತೆಯಾಗಿದೆ. ಇನ್ನು ಸ್ಪೋರ್ಟ್ಸ್ ಬ್ಲಾಕ್ ಅಲೋಯ್ ವೀಲ್ಹ್ಸ್ ಕೂಡ ಹೊಂದಿದೆ. ಕ್ಯಾಬಿನ್ ಸ್ಪೇಸ್ ಆಸ್ಪೈರ್ ಸೆಡಾನ್ ಕಾರಿನ್ನೆ ಹೋಲುತ್ತಿದೆ. ಹೊಚ್ಚ ಹೊಸ ಫೀಚರ್‌ನೊಂದಿಗೆ ಮಾ.15 ರಂದು ಫಿಗೋ ಫೇಸ್‌ಲಿಫ್ಟ್ ಬಿಡುಗಡೆಯಾಗುತ್ತಿದೆ.