ಭಾರತದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊಟ್ಟ ಮೊದಲ ಹಾರುವ ಕಾರು!
ಅಹಮ್ಮದಾಬಾದ್(ಮಾ.11): ಹೆಚ್ಚುತ್ತಿರುವ ವಾಹನ, ಟ್ರಾಫಿಕ್ ಕಿರಿಕಿರಿಗೆ ಪರಿಹಾರವಾಗಿ ಹಾರುವ ಕಾರು ಉತ್ತರವಾಗಿದೆ. 2018ರ ಜಿನೆವಾ ಮೋಟಾರು ಶೋನಲ್ಲಿ PAL-V ಕಂಪನಿ ಹಾರುವ ಕಾರು ಅನಾವರಣ ಮಾಡಿತ್ತು. ನೆದರ್ಲೆಂಡ್‌ನ ಈ ಕಂಪನಿ ಇದೀಗ ಭಾರತದಲ್ಲಿ ಹಾರುವ ಕಾರು ನಿರ್ಮಾಣಕ್ಕೆ ಮುಂದಾಗಿದೆ.
ಅಹಮ್ಮದಾಬಾದ್(ಮಾ.11): ನೆದರ್ಲೆಂಡ್ ಮೂಲದ PAL-V ಕಂಪನಿ ವಿಶ್ವದ ಮೊದಲ ಹಾರುವ ಕಾರು ನಿರ್ಮಾಣಕ್ಕೆ ಭಾರತವನ್ನು ಆಯ್ಕೆ ಮಾಡಿಕೊಂಡಿದೆ. ಇಷ್ಟೇ ಅಲ್ಲ 2021ರಿಂದ ಅಂದರೆ ಮುಂದಿನ ವರ್ಷದಿಂದ ಭಾರತದಲ್ಲಿ ಹಾರುವ ಕಾರು ನಿರ್ಮಾಣವಾಗಲಿದೆ. ಈ ಮೂಲಕ ಭಾರತ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ.
ಬೊಯಿಂಗ್ ಹಾರುವ ಕಾರು ಶೀಘ್ರದಲ್ಲೇ ಬಿಡುಗಡೆ!
PAL-V ಕಂಪನಿ ಗುಜರಾತ್‌ನಲ್ಲಿ ಉತ್ಪಾದನ ಘಟಕ ಆರಂಭಿಸಿ, ನಿರ್ಮಾಣ ಮಾಡಲಿದೆ. ಇದಕ್ಕಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಜೊತೆ PAL-V ಕಂಪನಿಯ ಅಂತಾರಾಷ್ಟ್ರೀಯ ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಕಾರ್ಲೋ ಮಾಸ್‌ಬೊಮೆಲ್ ಒಪ್ಪಂದ ಮಾಡಿಕೊಂಡಿದ್ದಾರೆ.
ಹೊಸ ವರ್ಷಕ್ಕೆ ಬಂಪರ್; ಹ್ಯುಂಡೈ ಬಿಡುಗಡೆ ಮಾಡಲಿದೆ ಹಾರುವ ಕಾರು!.
ಗುಜರಾತ್‌ನಲ್ಲಿ ಉತ್ತಮ ಸೌಲಭ್ಯಗಳಿದೆ. ಉತ್ಪಾದನ ಘಟಕ ಆರಂಭಿಸಲು ಬೇಕಾದ ಎಲ್ಲಾ ಅವಕಾಶಗಳು ಸೌಲಭ್ಯಗಳು ಇವೆ. ಜೊತೆಗೆ ಸರ್ಕಾರ ಕೂಡ ಉತ್ತಮ ಬೆಂಬಲ ನೀಡುತ್ತಿದೆ. ಹೀಗಾಗಿ ನಾವು ಗುಜರಾಜ್ ಆಯ್ಕೆ ಮಾಡಿದ್ದೇವೆ ಎಂದು ಕಾರ್ಲೋ ಮಾಸ್‌ಬೊಮೆಲ್ ಹೇಳಿದ್ದಾರೆ.
ಇನ್ನೈದು ವರ್ಷದಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ!
ಅಮೆರಿಕಾ, ಯುರೋಪ್ ಸೇರಿದಂತೆ ಹಲವು ಭಾಗಗಳಿಗೆ ಹಾರುವು ಕಾರು ಭಾರತದಿಂದ ರಫ್ತಾಗಲಿದೆ. ಈಗಾಗಲೇ 100 ಆರ್ಡರ್‌ಗಳು ಬಂದಿದ್ದು, ಶೀಘ್ರದಲ್ಲೇ ಉತ್ಪಾದನ ಘಟಕದ ತಯಾರಿ ಆರಂಭಿಸಲಾಗುತ್ತದೆ ಎಂದಿದ್ದಾರೆ. ಹಾರುವ ಕಾರಿನ ಅಂದಾಜು ಬೆಲೆ 2.6 ಕೋಟಿ ಎನ್ನಲಾಗುತ್ತಿದೆ.