ಬೆಂಗಳೂರು(ಜು.18); BMW ಗ್ರೂಪ್ ಇಂಡಿಯಾ ತನ್ನ ಹೊಚ್ಚ ಹೊಸ ಪ್ರೀಮಿಯಂ ಸೆಲೆಕ್ಷನ್(BPS) ಸೌಲಭ್ಯವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಭಾರತದಲ್ಲಿಅತ್ಯಂತದೊಡ್ಡ BPS ಸೌಲಭ್ಯವನ್ನು ನವ್‍ನಿತ್ ಮೋಟಾರ್ಸ್‍ಆಯೋಜಿಸಿದೆ ಮತ್ತು ವಿಸ್ತಾರ ಶ್ರೇಣಿಯ ಪೂರ್ವ,ಮಾಲೀಕತ್ವದ  BMW ವಾಹನಗಳನ್ನು ಪ್ರದರ್ಶಿಸಲಿದೆ. ಪೂರ್ವ ಮಾಲೀಕತ್ವದ ಅಥವ ಬಳಸಿದ BMW ಕಾರುಗಳ ಬಹುದೊಡ್ಡ ಮಳಿಗೆ ಇದಾಗಿದ್ದು, ಗ್ರಾಹಕರು ಸುರಕ್ಷಿತವಾಗಿ ಯಾವುದೇ ಆತಂಕವಿಲ್ಲದೆ ಕಾರು ಖರೀದಿಸಬಹುದು. 

BMW ಅಧೀಕೃತ ಡೀಲರ್ ನವ್‍ನಿತ್ ಮೋಟಾರ್ಸ್ ಬೆಂಗಳೂರಿನಲ್ಲಿ ಈ ಸೌಲಭ್ಯ ನೀಡುತ್ತಿದೆ. ನವನೀತ್ ಮೋಟಾರ್ಸ್  ಬೆಂಗಳೂರು, ಮಂಗಳೂರು ಮತ್ತು ಮುಂಬೈಗಳಲ್ಲಿ BMW ಸೇಲ್ಸ್ ಮತ್ತು ಸರ್ವೀಸ್ ಮಳಿಗೆಗಳನ್ನು ಹೊಂದಿದೆ.

ಪ್ರೀಮಿಯಂ ಸೆಲೆಕ್ಷನ್ ಸೂಕ್ಷ್ಮದೃಷ್ಟಿಯುಳ್ಳ ನಮ್ಮಗ್ರಾಹಕರಿಗೆ `ಶೀರ್ ಡ್ರೈವಿಂಗ್ ಪ್ಲೆಷರ್’ ವಿಶ್ವಕ್ಕೆ ಪ್ರವೇಶಕೊಡಿಸುವ ಮೂಲಕ ಸಂಪೂರ್ಣ ಮನಃಶ್ಯಾಂತಿ ನೀಡುತ್ತದೆ. ಪ್ರತಿ ಪೂರ್ವ-ಮಾಲೀಕತ್ವದ ವಾಹನವನ್ನು BMW  ಪ್ರೀಮಿಯಂ ಸೆಲೆಕ್ಷನ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು ಬಳಸಿದಕಾರುಗಳಲ್ಲಿ ಮೌಲ್ಯ, ಗುಣಮಟ್ಟ ಮತ್ತು ಸೇವೆಯಲ್ಲಿಅತ್ಯುತ್ತಮಆಯ್ಕೆಯಾಗಿರುತ್ತದೆ. ಭಾರತದಲ್ಲಿ ಪ್ರೀಮಿಯಂ ಪೂರ್ವ-ಮಾಲೀಕತ್ವದಕಾರು ಮಾರುಕಟ್ಟೆಗೆ ಅಪಾರ ಸಾಮರ್ಥ್ಯವಿದೆ ಮತ್ತು BMW ಇಂಡಿಯಾಗೆ ಬೆಂಗಳೂರು ಪ್ರಮುಖ ಮಾರುಕಟ್ಟೆಗಳಲ್ಲಿಒಂದಾಗಿದೆ. ನವ್‍ನಿತ್ ಮೋಟಾರ್ಸ್BMW ಪ್ರೀಮಿಯಂ ಸೆಲೆಕ್ಷನ್ ಪ್ರಾರಂಭದೊಂದಿಗೆ, ನಾವು ಪ್ರೀಮಿಯಂ ಪೂರ್ವ ಮಾಲೀಕತ್ವದಕಾರು ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದೇವೆ  ಎಂದು  BMW ಗ್ರೂಪ್ ಇಂಡಿಯಾ ಹಂಗಾಮಿ ಅಧ್ಯಕ್ಷ ಅರ್ಲಿಂಡೋ ಟೆಕ್ಸೆರಿಯಾ ಹೇಳಿದ್ದಾರೆ. 

ಭಾರತದಲ್ಲಿಅತ್ಯಂತದೊಡ್ಡBMW ಸೌಲಭ್ಯ ಪ್ರಾರಂಭಿಸುವ ಮೂಲಕ ನಮ್ಮ ವಹಿವಾಟಿಗೆ ಹೊಸ ಉದ್ಯಮ ಸೇರ್ಪಡೆ ಮಾಡಿದ್ದೇವೆ  ನಮ್ಮ ಸರ್ವೀಸ್ ವರ್ಕ್‍ಶಾಪ್‍ಜೊತೆಯಲ್ಲಿಯೇ ಇದ್ದು ಈ ಸೌಲಭ್ಯವು BMW ವಿಶ್ವಕ್ಕೆ ಸೇರಲು ಬಯಸುವ ಸಂಭವನೀಯ ಗ್ರಾಹಕರರ ಆಯ್ಕೆಯತಾಣವಾಗುತ್ತದೆ ಎಂದು ನಮಗೆ ಭರವಸೆ ಇದೆ. ಐಷಾರಾಮಿ ವಾಹನ ಮಾರುಕಟ್ಟೆ ಕುರಿತು ಹಾಗೂ ಈ ಪ್ರದೇಶದ ಪೂರ್ವ ಮಾಲೀಕತ್ವದ ವಿಭಾಗ ಕುರಿತು ನಮ್ಮಆಳವಾದ ತಿಳಿವಳಿಕೆಯಿಂದ, ಭಾರತದಲ್ಲಿ ಬೆಳೆಯುತ್ತಿರುವ BMW ಯಶೋಗಾಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಭರವಸೆ ನಮ್ಮದು ಎಂದು ನವನೀತ್ ಮೋಟಾರ್ಸ್‌ನ ಶರದ್ ಕಚಾಲಿಯಾ ಹೇಳಿದರು.

2011ರಲ್ಲಿ ಪ್ರಾರಂಭದ ದಿನದಿಂದಲೂ BMW ಗ್ರೂಪ್ ಇಂಡಿಯಾ ದೇಶಾದ್ಯಂತ 24BPS ಸೌಲಭ್ಯಗಳನ್ನು ರೂಪಿಸಿದೆ. BPS ಅತ್ಯುತ್ತಮ ಶ್ರೇಣಿಯ ಪೂರ್ವ ಮಾಲೀಕತ್ವದ ಮತ್ತುಗುಣಮಟ್ಟಕ್ಕೆ ಸಮಗ್ರವಾಗಿ ಪರೀಕ್ಷಿಸಿದ BMW ವಾಹನಗಳನ್ನು ಪೂರೈಸುತ್ತದೆ. ಪ್ರತಿ ವಾಹನವೂ ಸರ್ವೀಸಿಂಗ್, ನಿರ್ವಹಣೆ ಮತ್ತುರಿಪೇರಿಗಳ ಪೂರ್ಣ, ವಿವರವಾದ ಇತಿಹಾಸ ಲಭ್ಯವಿದೆ.  

ಈ ಪ್ರಮುಖವಾದ ಸ್ಥಳದಲ್ಲಿರುವ ಸೌಲಭ್ಯವು 7,500ಚದರ ಅಡಿ ವಿಸ್ತೀರ್ಣ ಹೊಂದಿದ್ದು15ಕಾರುಗಳ ಡಿಸ್ಪ್ಲೇ, ಸೇಲ್ಸ್ ಲೌಂಜ್ ಮತ್ತುಕಸ್ಟಮರ್ ಲೌಂಜ್ ಹೊಂದಿದೆ. ಉದ್ಯಮದ ಪ್ರಥಮ ಮುಂಚೂಣಿಯ ವರ್ಚುಯಲ್ ಪ್ರಾಡಕ್ಟ್ ಪ್ರೆಸೆಂಟೇಷನ್(VPP)ನೊಂದಿಗೆಗ್ರಾಹಕರು ಪ್ರಸ್ತುತ ವಾಹನದದಾಸ್ತಾನು ಪರೀಕ್ಷಿಸಬಹುದು, ಪ್ರಸ್ತುತ ಮೈಲೇಜ್, ರೀಟೇಲ್‍ದರ, ಕಾರಿನ ವಿಶೇಷತೆಗಳು ಮತ್ತು ಡೀಲರ್ ಸಂಪರ್ಕದತ್ತಾಂಶ ಮುಂತಾದ ಎಲ್ಲ ಮಾಹಿತಿ ಪಡೆಯಬಹುದು. ಹೆಚ್ಚುವರಿಯಾಗಿ, ಈ ಬಳಕೆದಾರ ಸ್ನೇಹಿ ಇಂಟರ್‍ಫೇಸ್ ಭೇಟಿ ನೀಡುವವರಿಗೆ ಅವರ ಅಚ್ಚುಮೆಚ್ಚಿನ ವಾಹನ ಆಯ್ಕೆ ಮಾಡಿಕೊಳ್ಳಲು ವಿಸ್ತಾರ ಶ್ರೇಣಿಯ ಹುಡುಕಾಟದ ಕಾರ್ಯವನ್ನೂಒದಗಿಸುತ್ತದೆ. 

ಮಾರುಕಟ್ಟೆಯಲ್ಲಿ ಹೊಸ ಕಾರು ಬಾರು; ನಿಮ್ಮ ಆಯ್ಕೆ ಯಾವುದು?...

BPS ವಾಹನಗಳಿಗೆ ವೈಯಕ್ತಿಕ ಮತ್ತುಆಕರ್ಷಕ ಹಣಕಾಸು ಆಯ್ಕೆಗಳು ಲಭ್ಯವಿವೆ. ಹಣಕಾಸು ಮತ್ತುಇನ್ಶೂರೆನ್ಸ್ ಕನ್ಸಲ್ಟೆಂಟ್‍ಗಳ ತಂಡ ಸಲಹೆ ನೀಡಲಿದೆ. ಗ್ರಾಹಕರ ಅಗತ್ಯಗಳು ಮತ್ತು ಭವಿಷ್ಯದ ಯೋಜನೆಗಳ ಅನ್ವಯ ಸೂಕ್ತ ಹಣಕಾಸು ಒದಗಿಸುತ್ತದೆ. ಗ್ರಾಹಕರು ಪಾರದರ್ಶಕ ವಿನಿಮಯ ಮೌಲ್ಯ, ತಡೆರಹಿತ ದಾಖಲೀಕರಣ ಮತ್ತುಅವರ ಮನೆಬಾಗಿಲಿನಲ್ಲಿ ವಾಹನದ ಮೌಲ್ಯ ಮಾಪನಕ್ಕೆ ಟ್ರೇಡ್-ಇನ್ ಆಫರ್  ಯ್ಕೆ ಮಾಡಿಕೊಳ್ಳಬಹುದು. 

3 ತಿಂಗಳಲ್ಲಿ ಎಲ್ಲಾ ಕಾರು ಬುಕ್; ದಾಖಲೆ ಬರೆದ BMW x7

BMW ಪ್ರೀಮಿಯಂ ಸೆಲೆಕ್ಷನ್‍ಅಡಿಯಲ್ಲಿಆಯ್ಕೆಯಾದಎಲ್ಲಕಾರುಗಳು ಐದು ವರ್ಷಗಳಿಗಿಂತಕಡಿಮೆಯಾಗಿರುತ್ತವೆ ಮತ್ತು100,000ಕಿ.ಮೀ.ಗಳಿಗಿಂತಕಡಿಮೆ ಪ್ರಯಾಣ ನಡೆಸಿರುತ್ತವೆ. ಈ ವಾಹನಗಳು24ತಿಂಗಳವರೆಗೆ  ವಾರೆಂಟಿಯೊಂದಿಗೆ ಬರುತ್ತವೆ. BPS  ಮಾಲೀಕರಿಗೆ BMW ಇಂಡಿಯಾ ರೋಡ್‍ಸೈಡ್ ಅಸಿಸ್ಟೆನ್ಸ್ ತೆಗೆದುಕೊಳ್ಳುವ ಅವಕಾಶವೂ ಇರುತ್ತದೆ ಅದು ದಿನದ 24 ಗಂಟೆಗಳು ವರ್ಷದ 365 ದಿನಗಳು ಲಭ್ಯವಿರುತ್ತದೆ. 

ಈ ಸೌಲಭ್ಯವುತನ್ನಆವರಣದಲ್ಲಿ ಸಮಗ್ರ ಸ್ಯಾನಿಟೈಸೇಷನ್ ಪ್ರಕ್ರಿಯೆಅನುಸರಿಸುತ್ತದೆ, ವರ್ಕ್‍ಶಾಪ್‍ಟೂಲ್ಸ್ ಮತ್ತು ಸಾಧನಗಳನ್ನು ಹೊಂದಿದ್ದು ಸರ್ಕಾರದ ಪ್ರಾಧಿಕಾರಗಳ ಸಾಮಾಜಿಕಅಂತರದ ನಿಯಮಗಳನ್ನುಕಠಿಣವಾಗಿಅನುಸರಿಸುತ್ತದೆ. ಈ ಸೌಲಭ್ಯವು  40/66, ಸೊಣ್ಣಪ್ಪನಹಳ್ಳಿ ಬೆಟ್ಟ ಹಲಸೂರು ಪೋಸ್ಟ್, ನ್ಯೂ ಏರ್‌ಪೋರ್ಟ್ ರೋಡ್ , ಬೆಂಗಳೂರು, ಕರ್ನಾಟಕ, 562157ಇಲ್ಲಿದೆ.