ಬೆಂಗಳೂರು, [ಸೆ. 21]: ಕೇಂದ್ರ ಮೋಟಾರು ವಾಹನ‌ ಕಾಯ್ದೆ (ತಿದ್ದುಪಡಿ) ಅನ್ವಯ ಸೆ. 3ರಿಂದ ಹೆಚ್ಚಳಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಕೊನೆಗೂ ಇಳಿಸಲಾಗಿದೆ.

ಸಂಚಾರ ಉಲ್ಲಂಘನೆಗೆ ವಿಧಿಸುತ್ತಿರುವ ದುಬಾರಿ ದಂಡ ಇಳಿಕೆ ಮಾಡಿ ಇಂದು [ಶನಿವಾರ] ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ನೂತನದ ದಂಡದ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ದುಬಾರಿ ದಂಡ ತೆತ್ತು ಸುಸ್ತಾಗಿದ್ದ ವಾಹನ ಸವಾರರಿಗೆ ಕೊಂಚ ರಿಲೀಫ್​ ಸಿಕ್ಕಂತಾಗಿದೆ.

ಕಮಿಷನರ್ ಸಾಹೇಬ್ರೇ... ಇದೇನಾ ಟ್ರಾಫಿಕ್ ಪೊಲೀಸಿಂಗ್ ಅಂದ್ರೆ?

 ಕೇಂದ್ರ ಸರ್ಕಾರ ಮೋಟಾರು ವಾಹನಗಳ ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿದ್ದ ದಂಡವನ್ನು ಹೆಚ್ಚಿಸಿ ದೇಶ ವ್ಯಾಪಿ ಸೆ.1ರಿಂದ ಜಾರಿಗೆ ತಂದಿತ್ತು. ರಾಜ್ಯದಲ್ಲಿ ಸರ್ಕಾರಿ ರಜೆ ಇದ್ದ ಕಾರಣ ಸಾರಿಗೆ ಇಲಾಖೆ ಸೆ.3 ರಂದು ಅಧಿಸೂಚನೆ ಹೊರಡಿಸಿತ್ತು.

ಇದೀಗ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗುಜರಾತ್‌ ಮಾದರಿಯಲ್ಲಿ ದಂಡ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಯಾವುದಕ್ಕೆ ಎಷ್ಟು ಎನ್ನುವ ಪರಿಷ್ಕೃತ ದಂಡದ ವಿವರ ಈ ಕೆಳಗಿನಂತಿದೆ.

ಹಳೆ ದಂಡ ಮತ್ತು ಹೊಸ ದಂಡದ ವಿವರ
ಹೆಲ್ಮೆಟ್ ಹಾಕದಿದ್ದರೆ 1000ದಿಂದ 500 ರೂ.ಗೆ ಇಳಿಕೆ. 
ಸೀಟ್ ಬೆಲ್ಟ್ 1000ದಿಂದ 500ರೂ.ಗೆ ಇಳಿಕೆ.                                            
ಲೈಸೆನ್ಸ್ ಇಲ್ಲದಿದ್ದರೆ 5000ದಿಂದ 1000ರೂ.ಗೆ ಇಳಿಕೆ
ಮೊಬೈಲ್ ಬಳಕೆ 10000ದಿಂದ 500ರೂ.ಗೆ ಇಳಿಕೆ
ಡ್ರೀಂಕ್ & ಡ್ರೈವ್  10000 ಇದನ್ನು ಇಳಿಕೆ ಮಾಡಿಲ್ಲ.
ಅಂಬ್ಯುಲೆನ್ಸ್ ದಾರಿ ಬಿಡದಿದ್ದರೆ  10000ದಿಂದ 1000ರೂ.ಗೆ ಇಳಿಕೆ
ಅತಿವೇಗ 5000 ರೂ. ದಂಡ ಇಳಿಕೆ ಇಲ್ಲ