Asianet Suvarna News Asianet Suvarna News

ಮಿನಿ ಕೂಪರ್ ಕಾರು ಬುಕ್ ಮಾಡಿ ಅಮೇಜಾನ್ ಮೂಲಕ!

ನೂತನ ಮಿನಿ ಕೂಪರ್ ಕಾರು ಭಾರತದಲ್ಲಿ ಬಿಡುಗಡೆ ಮಾಡಿದೆ. ಅಮೇಜಾನ್ ಮೂಲಕ ಈ ಕಾರನ್ನ ಬುಕ್ ಮಾಡಬುದು. ಮಿನಿ ಕೂಪರ್ ಕಾರಿನ ವಿಶೇಷತೆ ಏನು? ಅಮೇಜಾನ್ ಬುಕಿಂಗ್‌ನಲ್ಲಿ ಆಫರ್ ಇದೆಯಾ? ಇಲ್ಲಿದೆ ಮಾಹಿತಿ.

MINI cooper launched in India at Rs 45 lakhs Book online via Amazon
Author
Bengaluru, First Published Oct 23, 2018, 4:50 PM IST

ಬೆಂಗಳೂರು(ಅ.23): ಬ್ರಿಟೀಷ್ ಮೂಲದ ಮಿನಿ ಕೂಪರ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಲಿಮಿಟೆಡ್ ಎಡಿಶನ್ ಈ ಕಾರು ಭಾರತದಲ್ಲಿ ಕೇವಲ 25 ಕಾರುಗಳು ಮಾತ್ರ ಮಾರಟಕ್ಕಿದೆ. ವಿಶೇಷ ಅಂದರೆ ನೂತನ ಕಾರನ್ನ ಅಮೇಜಾನ್ ಆನ್‌ಲೈನ್ ಶಾಪಿಂಗ್ ಸೈಟ್ ಮೂಲಕ ಬುಕ್ ಮಾಡಲು ಅವಕಾಶ ನೀಡಿದೆ.

MINI cooper launched in India at Rs 45 lakhs Book online via Amazon

ಮಿನಿ ಆಕ್ಸ್‌ಫರ್ಡ್ ಎಡಿಶನ್ ಕಾರಿನ ಬೆಲೆ 45 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸ್ಪೋರ್ಟ್ಸ್ ಲುಕ್ ಜೊತೆಗೆ ಹೆಚ್ಚುವರಿ ಫೀಚರ್ಸ್ ನೂತನ ಮಿನಿ ಕೂಪರ್ ಕಾರಿನ ವಿಶೇಷತೆ.  ರೆಡ್ ಮತ್ತು ಬ್ಲಾಕ್ ಕಲರ್‌ಗಳಲ್ಲಿ ಸ್ಪೆಷಲ್ ಎಡಿಶನ್ ಕಾರು ಲಭ್ಯವಿದೆ.

MINI cooper launched in India at Rs 45 lakhs Book online via Amazon

ಗ್ಲಾಸ್ ರೂಫ್, 8.8 ಇಂಚಿನ ಟಚ್ ಸ್ಕ್ರೀನ್ ಜೊತೆಗೆ ಟಚ್ ಪ್ಯಾಡ್ ಕಂಟ್ರೋಲರ್, ಮಿನಿ ನ್ಯಾವಿಗೇಶನ್, ಮಿನಿ ಕೆನಕ್ಟ್, ವಯರ್‌ಲೆಸ್ ಚಾರ್ಜಿಂಗ್, Hi-Fi 12 ಸ್ಪೀಕರ್ಸ್ ಹಾಗೂ ಡೂರ್ ಸರ್ಫೇಸ್ ಕೂಡ ಹೊಂದಿದೆ.

MINI cooper launched in India at Rs 45 lakhs Book online via Amazon

ಗರಿಷ್ಠ ಸುರಕ್ಷತೆ ಒದಗಿಸೋ ಮಿನಿ ಕೂಪರ್ ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್,  ಕ್ರಾಶ್ ಸೆನ್ಸಾರ್, ಎಬಿಎಸ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಆಟೋ ಸ್ಟಾರ್ಟ್-ಸ್ಟಾಪ್ ಸರಿದಂತೆ ಹಲವು ಸೆಫ್ಟಿ ಫೀಚರ್ಸ್‌ಗಳು ನೂತನ ಮಿನಿ ಆಕ್ಸ್‌ಫರ್ಡ್ ಎಡಿಶನ್ ಕಾರಿನಲ್ಲಿದೆ.

MINI cooper launched in India at Rs 45 lakhs Book online via Amazon

2.4 ಲೀಟರ್, 4 ಸಿಲಿಂಡರ್ ಮಿನಿ ಟ್ವಿನ್ ಪವರ್ ಟರ್ಬೋ ಚಾರ್ಜಡ್ ಪೆಟ್ರೋಲ್ ಎಂಜಿನ 193 ಹೆಚ್‌ಪಿ ಪವರ್ ಹಾಗೂ 280 Nm ಟಾರ್ಕ್ ಉತ್ಪಾದಿಸಲಿದೆ. 0-100 ಕಿ.ಮೀ ತಲುಪಲು 6.7 ಸೆಕೆಂಡುಗಳು ಸಾಕು. ಅಮೇಜಾನ್ ಮೂಲಕ ಬುಕ್ ಮಾಡಲು ಬಯಸುವವರು www.amazon.in/adlp/MINI ಈ ಲಿಂಕ್ ಬಳಸಿ.
 
Follow Us:
Download App:
  • android
  • ios