ನವದೆಹಲಿ(ಜ.19): ಎಂಜಿ ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ SUV ಕಾರಿನ ಮೂಲಕ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರಿಗೆ ತೀವ್ರ ಪೈಪೋಟಿ ನೀಡಿದೆ. ಇದೀಗ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಎಂಜಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಜನವರಿ 23ರಂದು ಭಾರತದಲ್ಲಿ ಹೊಚ್ಚ ಹೊಸ ಎಂಜಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಬೆಂಗ್ಳೂರ್ ಸೇರಿದಂತೆ 5 ನಗರದಲ್ಲಿ MG ZS EV ಬುಕಿಂಗ್ ಆರಂಭ; 50 ಸಾವಿರ ರೂ!.

ಎಂಜಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ. ಈಗಾಗಲೇ 2,300 ಕಾರುಗಳು ಬುಕ್ ಆಗಿವೆ. ಎಲೆಕ್ಟ್ರಿಕ್ ಕಾರಿಗೆ ಈ ರೀತಿಯ ಸ್ಪಂದನೆ ಸಿಕ್ಕಿರುವುದು ಎಂಜಿ ಮೋಟಾರ್ಸ್ ಸಂತಸ ಡಬಲ್ ಮಾಡಿದೆ. ಡಿಸೆಂಬರ್ 21, 2019ರಿಂದ ಎಂಜಿ ZS ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭವಾಗಿತ್ತು. ಜನವರಿ ಆರಂಭದ ವೇಲೆ 2,300 ಕಾರುಗಳು ಬುಕ್ ಆಗಿವೆ.

ಇದನ್ನೂ ಓದಿ: MG ಹೆಕ್ಟರ್ SUV ಕಾರು ಬಿಡುಗಡೆ- ಟಾಟಾ ಹ್ಯಾರಿಯರ್‌ಗಿಂತ ಕಡಿಮೆ ಬೆಲೆ!

ಹ್ಯುಂಡೈ ಕೋನಾಗೆ ನೇರ ಪ್ರತಿಸ್ಪರ್ಧಿಯಾಗಿರುವ ಎಂಜಿ ZS ಎಲೆಕ್ಟ್ರಿಕ್ ಕಾರಿನ ಬೆಲೆ 22 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. ಹ್ಯುಂಡೈ ಕೋನಾ ಬೆಲೆ 25 ಲಕ್ಷ ರೂಪಾಯಿ. ಈ ಮೂಲಕ ಬೆಲೆಯಲ್ಲೂ ಹ್ಯುಂಡೈ ಕೋನಾಗೆ ಹೊಡೆತ ನೀಡಲಿದೆ. ಎಂಜಿ ZS ಎಲೆಕ್ಟ್ರಿಕ್ ಕಾರು ಆರಂಭಿಕ ಹಂತದಲ್ಲಿ ಭಾರತದ 5 ನಗರಗಳಲ್ಲಿ ಮಾತ್ರ ಲಭ್ಯವಿದೆ. ಬೆಂಗಳೂರು, ನವದೆಹಲಿ, ಮುಂಬೈ, ಅಹಮ್ಮದಾಬಾದ್ ಹಾಗೂ ಹೈದರಾಬಾದ್ ನಗರಗಳಲ್ಲಿ ಎಂಜಿ ZS ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ.

MG ZS ಕಾರು 44.5kWh ಬ್ಯಾಟರಿ ಹೊಂದಿದೆ. 143bhp ಪವರ್ ಹಾಗೂ 353Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಒಂದು ಬಾರಿ ಚಾರ್ಜ್ ಮಾಡಿದರೆ 340 ಕಿ.ಮಿ ಮೈಲೇಜ್ ರೇಂಜ್ ನೀಡಲಿದೆ. 50 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಎಂಜಿ ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ  7.4kW AC ಚಾರ್ಜರ್ ಕಾರಿನ ಜೊತೆಗೆ ನೀಡಲಾಗುತ್ತದೆ.