ನವದೆಹಲಿ(ಜೂ.04): ಭಾರತದಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಇದೀಗ ಬಹುನಿರೀಕ್ಷಿತ MG ಮೋಟಾರ್ಸ್ ಕಾರು ಬಿಡುಗಡೆಗೆ ಸಜ್ಜಾಗಿದೆ. MG ಹೆಕ್ಟರ್ SUV ಕಾರು ಇದೇ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಇದೀಗ ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ. ಆನ್‌ಲೈನ್ ಹಾಗೂ ಡೀಲರ್ ಬಳಿ ನೂತನ ಕಾರು ಬುಕ್ ಮಾಡಬಹುದು.

ಇದನ್ನೂ ಓದಿ: 44 ತಿಂಗಳಲ್ಲಿ ಹೊಸ ದಾಖಲೆ ಬರೆದ ಮಾರುತಿ ಬಲೆನೊ ಕಾರು!

50,000 ರೂಪಾಯಿ ಪಾವತಿಸಿ MG ಹೆಕ್ಟರ್ ಕಾರು ಬುಕ್ ಮಾಡಬಹುದಾಗಿದೆ. ನೂತನ ಕಾರು 5 ಬಣ್ಣಗಳಲ್ಲಿ ಲಭ್ಯವಿದೆ. 10 ಸ್ಪೋಕ್ ಆಲೋಯ್ ವೀಲ್ಹ್, ದೊಡ್ಡದಾದ ಔಟ್‌ಸೈಡ್ ರೇರ್ ವಿವ್ಯೂ ಮಿರರ್, ಪವರ್ ಅಡ್ಜಸ್ಟೇಬರ್ ಸೀಟ್, ಕ್ರ್ಯೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. 

ಇದನ್ನೂ ಓದಿ: ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!

MG ಹೆಕ್ಟರ್ ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 2.0 ಲೀಟರ್ FCA ಡೀಸೆಲ್ ಎಂಜಿನ್ ಕಾರು ಲಭ್ಯವಿದೆ. ನೂತನ ಕಾರಿನ ಬೆಲೆ 15 ರಿಂದ ಆರಂಭಗೊಳ್ಳಲಿದ್ದು, ಗರಿಷ್ಟ ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).