44 ತಿಂಗಳಲ್ಲಿ ಹೊಸ ದಾಖಲೆ ಬರೆದ ಮಾರುತಿ ಬಲೆನೊ ಕಾರು!
ಮಾರುತಿ ಬಲೆನೋ ಕಾರು ಹೊಸ ದಾಖಲೆ ಬರೆದಿದೆ. ಕೇವಲ 44 ತಿಂಗಳಲ್ಲಿ ಬಲೆನೊ ಭಾರತದಲ್ಲಿ ಇತರ ಎಲ್ಲಾ ಕಾರುಗಳನ್ನು ಹಿಂದಿಕ್ಕ ಇತಿಹಾಸ ರಚಿಸಿದೆ.
ನವದೆಹಲಿ(ಜೂ.03): ಹ್ಯಾಚ್‌ಬ್ಯಾಕ್ ಕಾರು ವಿಭಾಗದಲ್ಲಿ ಮಾರುತಿ ಬಲೆನೊ ಈಗಾಗಲೇ ಹಲವು ದಾಖಲೆ ಬರೆದಿದೆ. 2015ರಲ್ಲಿ ಬಿಡುಗಡೆಯಾದ ಈ ಕಾರು ಗ್ರಾಹಕರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ಕಾರು ಖರೀದಿಸುವವರ ಮೊದಲ ಆಯ್ಕೆ ಇದೀಗ ಬಲೆನೋ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಬಿಡುಗಡೆಯಾಗಿ 44 ತಿಂಗಳಲ್ಲೇ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ.
ಇದನ್ನೂ ಓದಿ: ಭಾರತದಲ್ಲಿ ಟ್ರೆಂಡ್ ಆಯ್ತು ಕಾರು ಸೆಗಣಿ ಪೈಂಟ್!
44 ತಿಂಗಳಲ್ಲಿ 6 ಲಕ್ಷ ಕಾರುಗಳು ಮಾರಾಟವಾಗಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ 6 ಲಕ್ಷ ಕಾರು ಮಾರಾಟಗೊಳ್ಳೋ ಮೂಲಕ ದಾಖಲೆ ಬರೆದಿದೆ. ಭಾರತದಲ್ಲಿ ಹೆಚ್ಚಿನ ಜನರ ಪ್ರೀತಿಯ ಕಾರಾಗಿ ಬಲೆನೋ ಮಾರ್ಪಟ್ಟಿದೆ. ಈಗಾಗಲೇ ಬಲೆನೊ ಕಾರು BS-VI ಎಮಿಶನ್, 1.2 ಲೀಟರ್ ಡ್ಯುಯೆಲ್ ಜೆಟ್ VVT ಪೆಟ್ರೋಲ್ ಜೊತೆಗೆ ಹೈಬ್ರಿಡ್ ಟೆಕ್ನಾಲಜಿ ಎಂಜಿನ್ ಬಿಡುಗಡೆಯಾಗಿದೆ.
ಇದನ್ನೂ ಓದಿ: 2019ರ ಜೂನ್--ಜುಲೈನಲ್ಲಿ ಬಿಡುಗಡೆಯಾಗುತ್ತಿದೆ 4 ಕಾರು- ಇಲ್ಲಿದೆ ವಿವರ!
ಬಲೆನೋ ಕಾರಿನ ಬೆಲೆ ಕೊಂಚ ಏರಿಕೆಯಾಗಿದೆ. ಬಲೆನೊ ಝೆಟಾ ವೇರಿಯೆಂಟ್ ಹಳೇ ಬೆಲೆ 6.97 ಲಕ್ಷ ಬೆಲೆ. ಇದೀಗ 7.86 ಲಕ್ಷ ರೂಪಾಯಿ ಆಗಿದೆ. ಡೆಲ್ಟಾ ವೇರಿಯೆಂಟ್ ಬೆಲೆ 7.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).