ಜರ್ಮನಿ(ಫೆ.01): ಆಟೋಮೊಬೈಲ್ ಕ್ಷೇತ್ರ ಕಳೆದ 3 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೊಸ ಹೊಸ ಪರಿಕಲ್ಪನೆ ಕಾರು ಬೈಕ್ ಬಿಡುಗಡೆಯಾಗಿದೆ. ಇದೀಗ ಡ್ರೈವರ್ ಲೆಸ್ ಕಾರು ಅಭಿವೃದ್ಧಿಯಾಗುತ್ತಿದೆ. ಆದರೆ ಈಗಾಗಲೇ ಸೆಲ್ಫ್ ಪಾರ್ಕಿಂಗ್ ಕಾರು ಮಾರುಕಟ್ಟೆಯಲ್ಲಿದೆ.

ಇದನ್ನೂ ಓದಿ: ಬ್ರೈಟ್ ಹೆಡ್‌ಲೈಟ್ಸ್ ಅಳವಡಿಸಿದರೆ ವಾಹನದ RC, ಲೈಸೆನ್ಸ್ ರದ್ದು!

ಮರ್ಸಿಡಿಸ್ ಬೆಂಝ್ ಐಷಾರಾಮಿ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನ ಬಳಸಿಕೊಳ್ಳುತ್ತೆ. ನೂತನ ಬೆಂಝ್ ಕಾರಿನಲ್ಲಿ ಸೆಲ್ಫ್ ಪಾರ್ಕಿಂಗ್ ಬಟನ್ ನೀಡಲಾಗಿದೆ. ಈ ಬಟನ್ ಒತ್ತಿ, ಪಾರ್ಕಿಂಗ್ ಲಾಟ್ ಆಯ್ಕೆ ಮಾಡಿದರೆ ಸಾಕು, ಕಾರು ತನ್ನಷ್ಟಕ್ಕೆ ಪಾರ್ಕ್ ಆಗಲಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಿದ ಕಿಯಾ ಮೋಟಾರ್ಸ್!

ಸೆನ್ಸಾರ್, ಗೂಗಲ್ ಮ್ಯಾಪ್, ರಿವರ್ಸ್ ಕ್ಯಾಮರಾ ಸೇರಿದಂತೆ ಹಲವು ತಂತ್ರಜ್ಞಾನಗಳ ಮೂಲಕ ಈ ಕಾರು ತನ್ನಷ್ಟಕ್ಕೆ ಪಾರ್ಕ್ ಆಗಲಿದೆ. ಕಾರು ನಿಲ್ಲಿಸುವಷ್ಟು ಜಾಗವಿದ್ದರೆ ಸಾಕು, ಇತರ ಕಾರುಗಳಿಗೆ ಯಾವುದೇ ಸಮಸ್ಯೆ ಆಗದಂತೆ ಆಟೋಮ್ಯಾಟಿಕ್ ಪಾರ್ಕಿಂಗ್ ಆಗಲಿದೆ.

ಇದನ್ನೂ ಓದಿ:ಬೈಕ್ ರೈಡ್ ಮಾಡಿದರೆ ಒತ್ತಡ ನಿವಾರಣೆ- ಅಧ್ಯಯನದಿಂದ ಬಹಿರಂಗ!

ಕಾರು ಪಾರ್ಕಿಂಗ್ ಸದ್ಯ ಬಹುದೊಡ್ಡ ಸಮಸ್ಯೆ. ಇರೋ ಜಾಗದಲ್ಲಿ ಪಾರ್ಕ್ ಮಾಡಲು ಅನುಭವದ  ಕೊರತೆ. ಸಣ್ಣ ಜಾಗದಲ್ಲಿ ಪಾರ್ಕ ಮಾಡಲೇಬೇಕಾದ ಅನಿವಾರ್ಯತೆಗಳಿಗೆ ಮರ್ಸಿಡಿಸ್ ಬೆಂಝ್ ಕಾರಿನ ಆಟೋಮ್ಯಾಟಿಕ್ ಪಾರ್ಕಿಂಗ್ ಅತ್ಯಂತ ಸಹಾಯಕಾರಿಯಾಗಿದೆ.