ಬಲೆನೋ, ಸ್ವಿಫ್ಟ್, ಅಲ್ಟೋ ಸೇರಿದಂತೆ ಮಾರುತಿ ಕಾರಿನ EMI ಈಗ ಕೇವಲ 899 ರೂ!
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ವೇತನ ಕಡಿತ, ಉದ್ಯೋಗ ಕಡಿತದಿಂದ ಜನರು ಕಂಗಲಾಗಿದ್ದಾರೆ. ಇತ್ತ ಕುಸಿದಿರುವ ಆಟೋಮೊಬೈಲ್ ಕ್ಷೇತ್ರವನ್ನು ಮೇಲಕ್ಕೆತ್ತಲು ಕಾರು ಕಂಪನಿಗಳು ಭರ್ಜರಿ ಆಫರ್ ನೀಡುತ್ತಿದ್ದಾರೆ. ಇದೀಗ ಮಾರುತಿ ಸುಜುಕಿ ಕಾರು ಖರೀದಿಗೆ ಭರ್ಜರಿ ಆಫರ್ ನೀಡಿದೆ. ಕೇವಲ 899 ರೂಪಾಯಿಗೆ ಮಾರುತಿ ಕಾರಿನ ಕಂತು ಆರಂಭಿಸಿದೆ. ನೂತನ ಆಫರ್ ಕುರಿತ ವಿವರ ಇಲ್ಲಿದೆ.
ನವದೆಹಲಿ(ಮೇ.28): ಮಾರುತಿ ಸುಜುಕಿ ಮಾರಾಟ ಉತ್ತೇಜಿಸಲು ಇದೀಗ ಹಲವು ಆಫರ್ ನೀಡುತ್ತಿದೆ. ಹೊಸ ಕಾರು ಖರೀದಿಸುವವರಿಗೆ ಕಾರಿನ ಕಂತು ಕೇವಲ 899 ರೂಪಾಯಿ ಮಾತ್ರ. ಮಾರುತಿ ಸುಜುಕಿ ಇದೀಗ HDFC ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅತ್ಯಂತ ಕಡಿಮೆ ಬೆಲೆಯ EMI ಆಫರ್ ನೀಡಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಜನರ ಅನುಕೂಲತಗೆ ತಕ್ಕಂತೆ ಹೊಸ ಆಫರ್ ನೀಡಲಾಗಿದೆ ಎಂದು ಕಂಪನಿ ಹೇಳಿದೆ.
ಮಾರಾಟ ಹೆಚ್ಚಿಸಲು ಮಾರುತಿ ಸುಜುಕಿ ಸುಲಭ ಸಾಲ; ಗ್ರಾಹಕರಿಗೆ ಸ್ಪೆಷಲ್ ಆಫರ್!.
ಮಾರುತಿ ಸುಜುಕಿಯ ಅಲ್ಟೋ, ಸ್ವಿಫ್ಟ್, ಬಲೆನೋ, ಡಿಸೈರ್ ಸೇರಿದಂತೆ ಕೆಲ ಕಾರುಗಳ ಮೇಲೆ ಈ ಆಫರ್ ಲಭ್ಯವಿದೆ. ವೇತನ ಪಡೆಯುವ ಗ್ರಾಹಕರಿಗೆ ಮೊದಲ 6 ತಿಂಗಳು ಕೇವಲ 899 ರೂಪಾಯಿಂತ ಕಂತು ಪಾವತಿಸಿದರೆ ಆಯಿತು. ಇನ್ನು ಸ್ಯಾಲರಿ ಪಡೆಯದ ಗ್ರಾಹಕರಿಗೆ 3 ತಿಂಗಳ ವರೆಗೆ 899 ರೂಪಾಯಿಂತ ಕಂತು ಪಾವತಿಸುವ ಸ್ಕೀಮ್ ಜಾರಿಗೆ ತಂದಿದೆ.
ಲಾಕ್‌ಡೌನ್ ವೇಳೆ ದಾಖಲೆ ಬರೆದ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು!
ಬಲೂನ್ EMI ಸ್ಕೀಮ್‌ನಡಿಯಲ್ಲಿ ಕಾರು ಖರೀದಿಸುವುದಾದರೆ ಕೇವಲ 1,111 ರೂಪಾಯಿ ಪ್ರತಿ ತಿಂಗಳು ಪಾವತಿಸಿದರೆ ಮುಗಿಯಿತು. 84 ತಿಂಗಳ ಪ್ಲಾನ್ ಇದಾಗಿದ್ದು, ಪ್ರತಿ ತಿಂಗಳು 1,111 ರೂಪಾಯಿ ಪಾವತಿಸುವ ಮೂಲಕ ಗ್ರಾಹಕರಿಗೆ EMI ಹೊರೆ ಕಡಿಮೆ ಮಾಡಲಾಗುತ್ತಿದೆ. ಲೋನ್‌ಗಳು HDFC ಬ್ಯಾಂಕ್ ಪಾಲಿಸಿ ಪ್ರಕಾರ ನೀಡಲಾಗುತ್ತದೆ ಎಂದ Maruti Suzuki ಹೇಳಿದೆ.