ಮಾರಾಟ ಹೆಚ್ಚಿಸಲು ಮಾರುತಿ ಸುಜುಕಿ ಸುಲಭ ಸಾಲ; ಗ್ರಾಹಕರಿಗೆ ಸ್ಪೆಷಲ್ ಆಫರ್!
ಲಾಕ್‌ಡೌನ್ 4.0 ಅಂತಿಮ ಹಂತಕ್ಕೆ ತಲುಪುತ್ತಿದೆ. ಇತ್ತ ಹಲವು ಕ್ಷೇತ್ರಗಳಿಗೆ ಲಾಕ್‌ಡೌನ್ ಸಡಿಲ ಮಾಡಲಾಗಿದೆ. ಇದರೊಂದಿಗೆ ಆಟೋಮೊಬೈಲ್ ಕ್ಷೇತ್ರ ಕೂಡ ಕಾರ್ಯಾರಂಭಿಸಿದೆ. ಇದೀಗ ಮಾರಾಟ ಹೆಚ್ಚಿಸಲು ಹಲವು ಕಂಪನಿಗಳು ಕಸರತ್ತು ಆರಂಭಿಸಿದೆ. ಇದರ ಅಂಗವಾಗಿ ಮಾರುತಿ ಸುಜುಕಿ ಹೊಸ ಸಾಲ ಸೌಲಭ್ಯ ನೀಡುತ್ತಿದೆ. ಈ ಮೂಲಕ ಕಾರು ಖರೀದಿ ಇನ್ನು ಸುಲಭವಾಗಿದೆ.
ನವದೆಹಲಿ(ಮೇ.22): ಕೊರೋನಾ ವೈರಸ್ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಮಕಾಡೆ ಮಲಗಿವೆ. ಇದೀಗ ಲಾಕ್‌ಟಡೌನ್ ಸಡಿಲಿಕೆಗೊಂಡಂತೆ ಆಟೋಮೊಬೈಲ್ ಪುನರ್ ಆರಂಭಗೊಂಡಿದೆ. ಇಷ್ಟೇ ಅಲ್ಲ ಗ್ರಾಹಕರನ್ನು ಸೆಳೆಯಲು ಹಲವು ಆಫರ್ ನೀಡುತ್ತಿದೆ. ಇದೀಗ ಮಾರುತಿ ಸುಜುಕಿ ವಿಶೇಷ ಸಾಲ ಸೌಲಭ್ಯ ಮೂಲಕ ಕಾರು ಖರೀದಿಯನ್ನು ಮತ್ತಷ್ಟು ಸುಲಭವಾಗಿಸಿದೆ.
ಮಾರಾಟವಾಗದೇ ಉಳಿದುಕೊಂಡಿದೆ 125 ಕೋಟಿ ರೂ ಮೌಲ್ಯದ BS4 ಮಾರುತಿ ಸುಜುಕಿ ಕಾರು!
ಮಾರುತಿ ಸುಜುಕಿ ಇದೀಗ ಕಾರು ಈಗ ಖರೀದಿಸಿ, ಹಣ ಬಳಿಕ ಪಾವತಿಸಿ ಸ್ಕೀಮ್ ಜಾರಿಗೆ ತಂದಿದೆ. ಈ ಸ್ಕೀಮ್ ಮೂಲಕ ಹಣವಿಲ್ಲದೆ ಕಾರು ಮನೆ ಸೇರಿಕೊಳ್ಳಲಿದೆ. ಕಾರಿನ ಆನ್‌ರೋಡ್ ಬೆಲೆ ಶೇಕಡಾ 90 ರಷ್ಟು ಸಾಲ ಸಿಗಲಿದೆ. ಕಡಿಮೆ ಡೌನ್‌ಪೇಮೆಂಟ್ ಹಣದಲ್ಲಿ ಕಾರು ನಿಮ್ಮದಾಗಿಸಿಕೊಳ್ಳುವ ಅವಕಾಶವನ್ನು ಮಾರುತಿ ಸುಜುಕಿ ನೀಡಿದೆ.
ಕೊರೋನಾ ವೈರಸ್ ಕಾರಣ ಹೆಚ್ಚಿನವರ ಬಳಿ ಹಣವಿಲ್ಲ. ಆದರೆ ವೈರಸ್‌ನಿಂದ ಸುರಕ್ಷಿತವಾಗಿರಲು ಇದೀಗ ಪ್ರತಿ ಕುಟುಂಬಕ್ಕೆ ಕಾರಿನ ಅವಶ್ಯಕತೆ ಇದೆ ಎಂದೆನಿಸುತ್ತಿದೆ. ಕಾರಣ ಸಾರ್ವಜನಿಕ ವಾಹನ ಬಳಕೆ ಕೂಡ ಆತಂಕ ತರುತ್ತಿದೆ. ಆದರೆ ವೈರಸ್ ಕಾರಣ ಆರ್ಥಿಕ ಕುಸಿತ ಕಾಣುತ್ತಿದ್ದೇವೆ. ಇದೇ ಕಾರಣ ಈಗ ಖರೀದಿಸಿ, ಬಳಿಕ ಪಾವತಿಸಿ ಸ್ಕೀಮ್ ಜಾರಿಗೆ ತರುತ್ತಿದ್ದೇವೆ ಎಂದು ಮಾರುತಿ ಸುಜುಕಿ ಮಾರ್ಕೆಟಿಂಗ್ ಸೇಲ್ಸ್‌ನ ಕಾರ್ಯನಿರ್ವಾಕ ನಿರ್ದೇಶಕ ಶಶಾಂಕ್ ಶ್ರೀವತ್ಸವ್ ಹೇಳಿದ್ದಾರೆ.