Asianet Suvarna News Asianet Suvarna News

ಹೊಸ ಮಾಡೆಲ್ ಕಾರು ಬಿಡುಗಡೆಗೆ ಮುಂದಾದ ಮಾರುತಿ ಸುಜುಕಿ!

ಮಾರುತಿ ಸುಜುಕಿ ಕಾರುಗಳು ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳಿಗಿಂತ ಸಂಪೂರ್ಣ ಬದಲಾಗಲಿದೆ. ನೂತನ ಮಾಡೆಲ್ ಕಾರುಗಳ ಕುರಿತ ವಿವರ ಇಲ್ಲಿದೆ.
 

Maruti suzuki plan to launch new model cars in India
Author
Bengaluru, First Published Nov 27, 2019, 2:10 PM IST

ನವದೆಹಲಿ(ನ.27): ಭಾರತದ ಮಾರುತಿ ಸುಜುಕಿ ಕಂಪನಿ ಹೊಸ ಯೋಜನೆ ಜಾರಿಗೊಳಿಸಲು ಸಜ್ಜಾಗಿದೆ. ದೇಶದ  ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ, ಬದಲಾವಣೆಗೆ ತಕ್ಕಂತೆ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಮಾರುತಿ ಹೊಸ ಮಾಡೆಲ್ ಕಾರುಗಳನ್ನು ಬಿಡುಗಡೆಗೆ ತಯಾರಿ ಮಾಡಿದೆ.  ಕಡಿಮೆ ಬೆಲೆಯಲ್ಲಿ ಹೊಸ ಮಾಡೆಲ್ ಕಾರು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಇದನ್ನೂ ಓದಿ: 5 ಲಕ್ಷ ರೂಪಾಯಿ ಒಳಗೆ ಲಭ್ಯವಿರುವ ಭಾರತದ ಟಾಪ್ 10 ಕಾರು ಪಟ್ಟಿ!

ನೂತನ ಯೋಜನೆ ಪ್ರಕಾರ ಮಾರುತಿ ಸುಜುಕಿ ಕಾರುಗಳು ಸಂಪೂರ್ಣ ಬದಲಾಗಲಿದೆ. ಹೊಸ ಮಾಡೆಲ್ ಕಾರುಗಳು ರಸ್ತೆಗಿಳಿಯಲಿದೆ. ಮಾರುತಿ ವಿಟಾರ ಬ್ರೆಜಾ ಕಾರಿನ ಮಾಡೆಲ್ ರೀತಿಯಲ್ಲೇ ಹೊಸ ಹೊಸ ಮಾಡೆಲ್ ಕಾರುಗಳನ್ನು ಪರಿಚಯಿಸಲು ಮುಂದಾಗಿದೆ. ಹೊಸ ಮಾಡೆಲ್ ಕಾರುಗಳ ನಿರ್ಮಾಣಕ್ಕೆ 900 ರಿಂದ 1,100 ಕೋಟಿ ರೂಪಾಯಿ ಹೆಚ್ಚುವರಿ ಹಣ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಸುಜುಕಿ ವಾಕು ಸ್ಪೋ ಕಾನ್ಸೆಪ್ಟ್ ಕಾರು ಅನಾವರಣ; ಆಕರ್ಷಕ ಲುಕ್‌ಗೆ ಮಾರುಹೋದ ಜನ!

ಕಾರಿನ ಹೊರಭಾಗ ಹಾಗೂ ಒಳಭಾಗದ ಬದಲಾಣೆಗೆ ಸರಿಸಮಾರು 200 ರಿಂದ 250 ಕೋಟಿ ರೂಪಾಯಿ ವ್ಯಯವಾಗಲಿದೆ.  ಈ ಮೂಲಕ ಮಾರುಕಟ್ಟೆ ಹೆಚ್ಚು ಆಕ್ರಮಣಕಾರಿಯಾಗಿ ಕಾರುಗಳ ಮಾರಾಟಕ್ಕೆ ಮುಂದಾಗಿದೆ. ಈ ಮೂಲಕ ರೆನಾಲ್ಟ್, ನಿಸಾನ್, ಫೋಕ್ಸ್‌ವ್ಯಾಗನ್, ಹ್ಯುಂಡೈ ಸೇರಿದಂತೆ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಮುಂದಾಗಿದೆ.

2019 ಭಾರತದ ಆಟೋಮೊಬೈಲ್ ಕಂಪನಿಗಳಿಗೆ ಉತ್ತಮವಾಗಿರಲಿಲ್ಲ. ಎಪ್ರಿಲ್‌ನಿಂದ ಅಕ್ಟೋಬರ್ ವರೆಗೆ ಮಾರುತಿ ಸುಜುಕಿ ಪ್ಯಾಸೆಂಜರ್ ವಾಹನ 23.2% ಮಾರಾಟ ಕುಸಿತ ಕಂಡಿದೆ. ಸದ್ಯ ಕಾರು ಮಾರುಕಟ್ಟೆ ಚೇತರಿಸಿಕೊಂಡಿದೆ. ಮಾರುತಿ ಈಗಾಗಲೇ ಭಾರತದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸಿದೆ. ಕ್ರಾಸ್ ಬ್ಯಾಡ್ಜಿಂಗ್  ಮೂಲಕ ಮಾರುತಿ ಬಲೆನೋ ಕಾರು, ಟೊಯೊಟಾ ಗ್ಲಾಂಜಾ ಕಾರಾಗಿ ಬಿಡುಗಡೆಯಾಗಿದೆ.

ಪ್ರತಿ ವರ್ಷ 2 ಹೊಸ ಮಾಡೆಲ್ ಕಾರು ಮಾರುಕಟ್ಟೆಗೆ ಪರಿಚಯಿಸಲು ಮಾರುತಿ ನಿರ್ಧರಿಸಿದೆ. ಸದ್ಯ ಮಾರುಕಟ್ಟೆಯಲ್ಲಿರು ಮಾರುತಿ ಸುಜುಕಿ ಕಾರಗಳಿಗಿಂತ ಭಿನ್ನ, ಆಕರ್ಷಕ ವಿನ್ಯಾಸ ಹಾಗೂ ಕಡಿಮೆ ಬೆಲೆಯಲ್ಲಿ ನೂತನ ಕಾರುಗಳು ಬಿಡುಗಡೆಯಾಗಲಿದೆ. 2022ರಿಂದ ಮಾರುತಿ ನೂತನ ಯೋಜನೆ ಜಾರಿಗೆ ಬರಲಿದೆ.

Follow Us:
Download App:
  • android
  • ios