ಟೋಕಿಯೊ(ಅ.25): ಹೊಸ ಹೊಸ ಮಾಡೆಲ್, ಆಕರ್ಷಕ ವಿನ್ಯಾಸ, ಜನರ ತುಡಿತಕ್ಕೆ ಅನುಗುಣವಾಗಿ ಕಾರುಗಳನ್ನು ಬಿಡುಗಡೆ ಮಾಡುವುದರಲ್ಲಿ ಸುಜುಕಿ ಎತ್ತಿದ ಕೈ. ಹೀಗಾಗಿಯೇ ಭಾರತದಲ್ಲಿ ಮಾರುತಿ ಸುಜುಕಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೀಗ ಟೋಕಿಯೊ ಮೋಟಾರ್ ಶೋನಲ್ಲಿ ಸುಜುಕಿ ನೂತನ ಕಾರನ್ನು ಪರಿಚಯಿಸಿಸಿದೆ. ಸುಜಿಕಿ ಹೊಸ ಕಾರಿಗೆ ಕಾರು ಪ್ರಿಯರು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಸುಜುಕಿ-ಟೊಯೊಟಾ ಬಿಡುಗಡೆ ಮಾಡುತ್ತಿದೆ ನೂತನ ಎಲೆಕ್ಟ್ರಿಕ್ ಕಾರು!

ಸುಜುಕಿ ವಾಕು ಸ್ಪೋ ಕಾನ್ಸೆಪ್ಟ್ ಕಾರು ಅನಾವರಣ ಮಾಡಲಾಗಿದೆ. ರೆಟ್ರೋ ಸ್ಟೈಲ್‌ನಲ್ಲಿರುವ ಈ ಕಾರು ಮೊದಲ ನೋಟದಲ್ಲೇ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಕಾರು ಭಾರತದಲ್ಲಿ ಜನಪ್ರಿಯವಾಗಿದ್ದ ಪ್ರಿಮಿಯರ್ ಪದ್ಮಿನಿ ಕಾರಿನ ವಿನ್ಯಾಸದಲ್ಲೂ ಹೋಲಿಕೆ ಇದೆ. ನೂತನ ಸುಜುಕಿ ವಾಕು ಸ್ಪೋ ಕಾನ್ಸೆಪ್ಟ್ ಕಾರು ಹೆಚ್ಚು ಆಕರ್ಷಕವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. 

ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!

1960ರಲ್ಲಿ ಬಿಡುಗಡೆಯಾದ ಸುಜುಕಿ ಫ್ರಂಟೆ ಕಾರಿಗೆ ಕೊಂಚ ಮಾಡಿಫಿಕೇಶನ್ ಮಾಡಿ, ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಲಾಗಿದೆ. ಹೈಬ್ರಿಡ್ ಕಾರಾಗಿದ್ದು, ಸೈಡ್ ಮಿರರ್ ಬದಲು ಕ್ಯಾಮರ ಬಳಸಲಾಗಿದೆ. ಇನ್ನು ಒಳಬಾಗದಲ್ಲಿ ಎಲ್ಲವೂ ಟಚ್ ಸಿಸ್ಟಮ್ ಬಳಸಲಾಗಿದೆ.