Asianet Suvarna News Asianet Suvarna News

ಶೀಘ್ರದಲ್ಲೇ ಗುಡ್ ಬೈ ಹೇಳಲಿದೆ ಮಾರುತಿ ಆಲ್ಟೋ 800 !

ಭಾರತದ ಹಳ್ಳಿ ಹಳ್ಳಿಗಳಲ್ಲೂ ಮಾರುತಿ ಸುಜುಕಿ ಸಂಸ್ಥೆಯ ಕಾರುಗಳಿವೆ. ಅದರಲ್ಲೂ ಮಾರುತಿ ಅಲ್ಟೋ 800 ಕಾರು ಜನಸಾಮಾನ್ಯರ ಕಾರಿನ ಕನಸನ್ನ ನನಸಾಗಿತ್ತು. ಇದೀಗ ಈ ಕಾರು ನಿರ್ಮಾಣ ಸ್ಥಗಿತಗೊಳಿಸುತ್ತಿದೆ. 

Maruti Suzuki Plan to discontinue Alto 800 car in 2019
Author
Bengaluru, First Published Nov 26, 2018, 3:02 PM IST

ಬೆಂಗಳೂರು(ನ.26): ಭಾರತದ ಬಹುತೇಕ ಮಧ್ಯಮ ವರ್ಗದ ಜನ ಕಾರಿನ ಕನಸು ನನಸು ಮಾಡಿದ್ದು ಮಾರುತಿ ಸುಜುಕಿ ಸಂಸ್ಥೆಯ ಆಲ್ಟೋ 800 ಕಾರಿನಿಂದ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆ ಹೊಂದಿದ್ದ ಈ ಆಲ್ಟೋ 800 ಕಾರು ಶೀಘ್ರದಲ್ಲೇ ಗುಡ್ ಬೈ  ಹೇಳಲಿದೆ.

Maruti Suzuki Plan to discontinue Alto 800 car in 2019

2019ರಿಂದ ಮಾರುತಿ ಸುಜುಕಿ ಆಲ್ಟೋ 800 ನಿರ್ಮಾಣ ನಿಲ್ಲಿಸಲಿದೆ. ಮಾರುತಿ ಅಲ್ಟೋ 800 ಹಾಗೂ ಮಾರುತಿ ಒಮ್ಮಿ ಕಾರುಗಳು ಭಾರತ ಸ್ಟೇಜ್(VI)ತಂತ್ರಜ್ಞಾನ ಅಭಿವೃದ್ದಿ ಹಾಗೂ ಸುರಕ್ಷತಾ ಪರೀಕ್ಷೆ(ಕ್ರಾಶ್ ಟೆಸ್ಟ್) ನಿಯಮ ಪಾಲಿಸುವುದು ಕಷ್ಟ. ನೂತನ ನಿಯದ ಪ್ರಕಾರ ಕನಿಷ್ಠ ಸುರಕ್ಷತೆ ಹಾಗೂ ಕಡಿಮೆ ಹೊಗೆ ಉಗುಳುವ ವಾಹನ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ.

Maruti Suzuki Plan to discontinue Alto 800 car in 2019

ಆಲ್ಟೋ 800 ಹಾಗೂ ಮಾರುತಿ ಒಮ್ಮಿ ಬಿಎಸ್(VI) ಹಾಗೂ ಸುರಕ್ಷತೆ ಅಭಿವೃದ್ದಿ ಪಡಿಸುವುದು ಮತ್ತಷ್ಟು ದುಬಾರಿಯಾಗಲಿದೆ. ಇದಕ್ಕಿಂತ ಹೊಸ ಕಾರು ಬಿಡುಗಡೆ ಮಾಡುವುದೇ ಸೂಕ್ತ ಎಂದು ಮಾರುತಿ ಸುಜುಕಿ ಹೇಳಿದೆ. ಹೀಗಾಗಿ 2019ರ ರಿಂದ ಮಾರುತಿ ಸುಜುಕಿ ಆಲ್ಟೋ 800 ಕೂಡ ವಿದಾಯ ಹೇಳಲಿದೆ.
Maruti Suzuki Plan to discontinue Alto 800 car in 2019

Follow Us:
Download App:
  • android
  • ios