ನವದೆಹಲಿ(ಜು.06): ಮಾರುತಿ ಸುಜುಕಿ ನೆಕ್ಸಾ ಡೀಲರ್‌ಶಿಪ್ ಇದೀಗ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಮಾರುತಿ ಬಲೆನೋ, ಇಗ್ನಿಸ್, ಸಿಯಾಝ್, XL6 ಸೇರಿದಂತೆ ಕೆಲ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಗ್ರಾಹಕರಿಂದ ಗ್ರಾಹಕರಿಗೆ, ಕಾರಿನಿಂದ ಕಾರು ಹಾಗೂ ಎಕ್ಸ್‌ಚೇಂಜ್ ಮೇಲೆ ಡಿಸ್ಕೌಂಟ್ ಬದಲಾಗಲಿದೆ.

ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!.

ಮಾರುತಿ ಬಲೆನೋ ಸಿಗ್ಮಾ ವೇರಿಯೆಂಟ್ ಕಾರಿನ ಬೆಲೆ 5.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಕಾರಿಗೆ 15,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಎಕ್ಸ್‌ಚೇಂಜ್ ಆಫರ್ 15,000 ರೂಪಾಯಿ ನೀಡಲಾಗಿದೆ.ಬಲೆನೊದ ಡೆಲ್ಟಾ, ಝೆಟಾ ಹಾಗೂ ಆಲ್ಪಾ ವೇರಿಯೆಂಟ್ ಕಾರುಗಳಿಗೆ 10,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಈ ಮೂರು ವೇರಿಯೆಂಟ್ ಕಾರುಗಳ ಎಕ್ಸ್‌ಚೇಂಜ್ ಆಫರ್ 15,000 ರೂಪಾಯಿ ನೀಡಲಾಗಿದೆ.

ಮಾರುತಿ ಸುಜುಕಿ ಸೆಲೆರಿಯೋ CNG ಕಾರು ಬಿಡುಗಡೆ!.

ಇಗ್ನಿಸ್ ಝೆಟಾ ವೇರಿಯೆಂಟ್ ಕಾರಿಗೆ 15,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಎಕ್ಸ್‌ಚೇಂಜ್ ಬೋನಸ್ 15,000 ನೀಡಲಾಗಿದೆ. ಇನ್ನುಳಿದ ಇಗ್ನಿಸ್ ವೆರಿಯೆಂಟ್ ಕಾರುಗಳಿಗೆ 20,000 ರೂಪಾಯಿ ಡಿಸ್ಕೌಂಟ್ ಆಫರ್ ಹಾಗೂ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಆಫರ್ ನೀಡಲಾಗಿದೆ.

ಮಾರುತಿ XL6 ಕಾರಿಗೆ ನಗದು ಡಿಸ್ಕೌಂಟ್ ಆಫರ್ ನೀಡಿಲ್ಲ. ಆದರೆ ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ ನೀಡಲಾಗಿದೆ. ಇನ್ನು ಕೊರೋನಾ ವಾರಿಯರ್ಸ್‌ಗೆ 5,000 ರೂಪಾಯಿ ಡಿಸ್ಕೌಂಟ್ ಆಫರ್ ಕೊಡಲಾಗಿದೆ. ಸಿಯಾಜ್ ಮಾನ್ಯುಯೆಲ್ ಆಲ್ಫಾ ವೇರಿಯೆಂಟ್ ಕಾರಿನ ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ ನೀಡಲಾಗಿದೆ.

ಸೂಚನೆ: ನೆಕ್ಸಾ ಡೀಲರ್‌ಶಿಪ್‌ನಲ್ಲಿ ಆಫರ್ ನೀಡಲಾಗಿದೆ. ಡೀಲರ್ ಬಳಿ ಸಂಪರ್ಕಿಸಿ ಆಫರ್ ಮಾಹಿತಿ ಖಚಿತಪಡಿಸಿಕೊಳ್ಳಿ