ನವದೆಹಲಿ(ಮೇ.24): ಭಾರತದಲ್ಲಿ ಪೈಪೋಟಿಗೆ ಬಿದ್ದು SUV ಕಾರುಗಳು ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಹ್ಯುಂಡೈ ವೆನ್ಯೂ ಕಾರು ಬಿಡುಗಡೆ ಮಾಡಿದರೆ, ಮಹೀಂದ್ರ XUV300 ಕಾರು ಬಿಡುಗಡೆ ಮಾಡಿದೆ. ಭಾರತದಲ್ಲಿ ಸಬ್‌ಕಾಂಪಾಕ್ಟ್ SUV ಕೈಗೆಟುಕವ ದರದಲ್ಲಿ ನೀಡಿದ ಹೆಗ್ಗಳಿಕೆಗೆ ಮಾರುತಿ ಸುಜುಕಿಗೆ ಸಲ್ಲಲಿದೆ. ಬ್ರೆಜಾ SUV ಕಾರು ಬಿಡುಗಡೆಯಾದಾಗಿನಿಂದ ಇಲ್ಲೀವರೆಗೂ ಗರಿಷ್ಠ ಮಾರಾಟ ದಾಖಲೆ ಹೊಂದಿಗೆ. ಇದೀಗ ಮಾರುತಿ ಬ್ರೆಜಾ ಸ್ಪೋರ್ಟ್ಸ್ ಎಡಿಶನ್ ಕಾರು ಬಿಡುಗಡೆಯಾಗಿದೆ.

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ಮೋದಿ ಹೊಸ ಯೋಜನೆ-2025 ರಿಂದ ಸಿಗಲ್ಲ ಪೆಟ್ರೋಲ್ ದ್ವಿಚಕ್ರವಾಹನ!

ಲಿಮಿಟೆಡ್ ಎಡಿಶನ್ ಕಾರು ಇದಾಗಿದೆ. ಸ್ಪೋರ್ಟ್ಸ್ ಲುಕ್ ಹಾಗೂ ಕೆಲ ಇಂಟಿರಿಯರ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಡೀಲರ್‌ಶಿಪ್‌ಗಳಲ್ಲಿ ಸ್ಪೆಷಲ್ ಕಿಟ್ ಕೂಡ ಲಭ್ಯವಿದೆ. ಈ ಮೂಲಕ ಮಾಡಿಫೈ ಮಾಡೋ ಗ್ರಾಹಕರಿಗೆ ಅನೂಕೂಲವಾಗಲು ಕಿಟ್ ಸೇರಿಸಲಾಗಿದೆ. ಈ ಕಿಟ್‌ನಲ್ಲಿ ಗಾರ್ನಿಶ್ ಗ್ರಿಲ್, ಲೆದರ್ ಸ್ಟೇರಿಂಗ್ ಕವರ್, ಡೋರ್ ಸಿಲ್ ಗಾರ್ಡ್, ಸೈಡ್ ಸ್ಕಿಡ್ ಪ್ಲೇಟ್ ಹಾಗೂ ಸೀಟ್ ಕವರ್ ನೀಡಲಾಗಿದೆ.

ಇದನ್ನೂ ಓದಿ: ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!

ಈ ಕಿಟ್ ಬೆಲೆ 29,900 ರೂಪಾಯಿಗಳು. ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 89 Bhp ಪವರ್ ಹಾಗೂ  200 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ AMT ಆಯ್ಕೆ ಕೂಡ ಲಭ್ಯವಿದೆ. ಮಾರುತಿ ಬ್ರೆಜಾ ಬೆಲೆ 7.95 ಲಕ್ಷ ರೂಪಾಯಿಂದ 9.13 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).