ನವದೆಹಲಿ(ಮೇ.10): ಮಾರುತಿ ಅಲ್ಟೋ, ಸ್ವಿಫ್ಟ್, ಬಲೆನೋ, ಡಿಸೈರ್ ಸೇರಿದಂತೆ ಕೆಲ ಕಾರುಗಳಿಗೆ ಮಾರುತಿ ಸುಜುಕಿ ಡೀಲರ್‌ಗಳು ಡಿಸ್ಕೌಂಟ್ ಘೋಷಿಸಿದ್ದಾರೆ. ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಸೇರಿದಂತೆ ಕೆಲ ಆಫರ್ ಘೋಷಿಸಲಾಗಿದೆ . ಮಾರುತಿ ಸುಜುಕಿ ಮಾರಾಟ ಡೀಲರ್‌ಶಿಪ್ ಸುಜುಕಿ ಅರೆನಾ ಹಾಗೂ ನೆಕ್ಸಾ ಇದೀಗ ಕೆಲ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಿದೆ. ಈ ಡಿಸ್ಕೌಂಟ್ ಆಯ್ದ ಡೀಲರ್‌ಬಳಿ ಮಾತ್ರ ಲಭ್ಯ. 

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ಕ್ರಾಸ್ಓವರ್ ಕಾರು; ಟಾಟಾ HBX ಮೇಲೆ ಎಲ್ಲರ ಚಿತ್ತ!...

ಮಾರುತಿ ಸುಜುಕಿ ಅಲ್ಟೋ ಕಾರಿಗೆ 20,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಹಾಗೂ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಆಫರ್ ಘೋಷಿಸಲಾಗಿದೆ. ಸೆಲೆರಿಯೋ ಕಾರಿಗೆ 25,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಹಾಗೂ 20,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಆಫರ್ ನೀಡಲಾಗಿದೆ. 

ಮಾರುತಿ ಸುಜುಕಿ ಸ್ಫಫ್ಟ್, ಡಿಸೈರ್ ಕಾರಿಗೆ ಕ್ಯಾಶ್ ಡಿಸ್ಕೌಂಟ್ ಹಾಗೂ 20,000 ರೂಪಾಯಿ ಹಾಗೂ 25,000 ಎಕ್ಸ್‌ಚೇಂಜ್ ಬೋನಸ್ ಆಫರ್ ಘೋಷಿಸಲಾಗಿದೆ. ಆದರೆ ವಿಟರಾ ಬ್ರೆಜ್ಜಾ, ಎರ್ಟಿಗಾ ಕಾರಿಗೆ ಯಾವುದೇ ಆಫರ್ ನೀಡಲಾಗಿಲ್ಲ.

ಮಾರುತಿ Dzire, ಹೊಂಡಾ ಅಮೇಜ್ ಪ್ರತಿಸ್ಪರ್ಧಿ, ಬರುತ್ತಿದೆ ಟಾಟಾ ಸೆಡಾನ್ ಕಾರು!.

ಮಾರುತಿ ಇಗ್ನಿಸ್ ಹಾಗೂ ಬಲೆನೋ  ಕಾರಿಗೆ 20,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಹಾಗೂ 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಆಫರ್ ಘೋಷಿಸಲಾಗಿದೆ. 

ಸೂಚನೆ: ಡಿಸ್ಕೌಂಟ್ ಆಫರ್ ಕುರಿತು ಹತ್ತಿದರ ಡೀಲರ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ಆಯ್ದ ಡೀಲರ್ ಬಳಿ ಮಾತ್ರ ಆಫರ್ ಲಭ್ಯವಿದೆ.