ಮುಂಬೈ(ಏ.23): ಕೊರೋನಾ ವೈರಸ್‌ನಿಂದ ದೇಶವೇ ಲಾಕ್‌ಡೌನ್ ಆಗಿದೆ. ಜನರ ಜೀವನ ಕಷ್ಟವಾಗಿದೆ. ಹೀಗಾಗಿ ಟಾಟಾ ಗ್ರೂಪ್ ಒಟ್ಟು 1,500 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಮೂಲಕ ಭಾರತೀಯರ ಸಂಕಷ್ಟಕ್ಕೆ ನೆರವಾಗಿದೆ. ಇದೇ ರೀತಿ ಹಲವು ಭಾರತೀಯ ಕಂಪನಿಗಳು ನೆರವಿನ ಹಸ್ತ ಚಾಚಿದೆ. ಈ ಹಿಂದೆ ಕೂಡ ದೇಶ ಸಂಕಷ್ಟಕ್ಕೆ ಸಿಲುಕಿದಾಗ ಟಾಟಾ ಸಂಸ್ಥೆ ನೆರವಿನ ಹಸ್ತ ಚಾಚಿದೆ. ಟಾಟಾ ಗ್ರೂಪ್ ನಡೆಯಿಂದ ಭಾರತೀಯರಿಗೆ ಟಾಟಾ ಮೇಲಿದ್ದ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಬಹುತೇಕರ ಆಯ್ಕೆ ಇದೀಗ ಟಾಟಾ ಉತ್ಪನ್ನಗಳಾಗಿದೆ.

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!.

ಇತ್ತ ಲಾಕ್‌ಡೌನ್ ಮುಗಿದ ಬಳಿಕ ಟಾಟಾ ಕೆಲ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ ಪ್ರಮುಖವಾಗಿ ಕಾಂಪಾಕ್ಟ್ ಸೆಡಾನ್ ಕಾರು ಕೂಡ ಒಂದಾಗಿದೆ. ಮಾರುತಿ ಡಿಸೈರ್, ಹೊಂಡಾ ಅಮೇಜ್, ಹ್ಯುಂಡೈ ಔರಾ ಸೇರಿದಂತೆ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಟಾಟಾ ಕಾರು ಬಿಡುಗಡೆಯಾಗಲಿದೆ. ಟಾಟಾ ಅಲ್ಟ್ರೋಜ್ ಮಾದರಿ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡು ನೂತನ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಅವತಾರದಲ್ಲಿ ಮತ್ತೆ ಬಂತು ಟಾಟಾ ಸಿಯೆರಾ!

ನೂತನ ಸೆಡಾನ್ ಕಾರನ್ನು ಟಾಟಾ ಗೋಶಾಖ್ ಎಂದು ಕರೆಯಲಾಗುತ್ತಿದೆ. ಆದರೆ ಇದೇ ಹೆಸರಿನಲ್ಲೇ ಬಿಡುಗಡೆಯಾಗುವ ಕುರಿತು ಟಾಟಾ ಯಾವುದೇ ಖಚಿತತೆ ನೀಡಿಲ್ಲ. ಸದ್ಯ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವುದು ಏಕೈಕ ಸೆಡಾನ್ ಕಾರು ಟಿಗೋರ್. ಹೀಗಾಗಿ ಮತ್ತೊಂದು ಸೆಡಾನ್ ಕಾರಿನ ಮೂಲಕ ಭಾರತದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದೆ. ಸುರಕ್ಷತೆಯಲ್ಲಿ ಟಾಟಾ ರಾಜಿಯಾಗಲ್ಲ. 5 ಸ್ಟಾರ್ ಸೇಫ್ಟಿ ನೀಡಲಿದೆ. ಇಷ್ಟೇ ಅಲ್ಲ ಬೆಲೆ ಕೂಡ ಕೈಗೆಟುಕುವ ದರದಲ್ಲಿರಲಿದೆ.