ನವದೆಹಲಿ(ಮೇ.19): ಮಾರುತಿ ಬಲೆನೋ ಕಾರು ಕಳೆದ ಕೆಲ ತಿಂಗಳುಗಳಿಂದ ಸದ್ದು ಮಾಡುತ್ತಿದೆ. ಒಂದೆಡೆ  ಮಾರುತಿ ಬಲೆನೋ ಕ್ರಾಸ್ ಬ್ಯಾಡ್ಜಿಂಗ್ ಹಕ್ಕು ಪಡೆದಿರುವ ಟೊಯೊಟಾ ಇದೀಗ ಟಯೊಟಾ ಗ್ಲಾಂಝಾ ಕಾರಾಗಿ ಬಿಡುಗಡೆ ಮಾಡುತ್ತಿದೆ. ಇದಕ್ಕೂ ಮುನ್ನ ಮಾರುತಿ ಬಲೆನೋ ಕಾರಿನ ಬೆಲೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: ಇನೋವಾ ಪ್ರತಿಸ್ಪರ್ಧಿ-ಶೀಘ್ರದಲ್ಲಿ ಟಾಟಾ ಹ್ಯಾರಿಯರ್ 7 ಸೀಟರ್ ಕಾರು!

ಮಾರುತಿ ಬಲೆನೋ 2 ವೇರಿಯೆಂಟ್ ಕಾರುಗಳ ಬೆಲೆ ಹೆಚ್ಚಳವಾಗಿದೆ. ಬಲೆನೋ RS ಪೆಟ್ರೋಲ್ ಹಾಗೂ ಬಲೆನೋ ಡೀಸೆಲ್ ಕಾರುಗಳ ಬೆಲೆ ಹೆಚ್ಚಳವಾಗಿದೆ. ಬಲೆನೋ RS ಬೆಲೆ  13,000 ರೂಪಾಯಿ ಹೆಚ್ಚಳವಾಗಿದ್ದರೆ, ಬಲೆನೋ ಡೀಸೆಲ್ ಕಾರಿನ ಬೆಲೆ 20,000 ರೂಪಾಯಿ ಹೆಚ್ಚಳವಾಗಿದೆ. 

ಇದನ್ನೂ ಓದಿ: ಬಿಡುಗಡೆಗೂ ಮುನ್ನ ಹ್ಯುಂಡೈ ವೆನ್ಯೂ ಕಾರಿನ ಬೆಲೆ ಬಹಿರಂಗ! 

ಮಾರುತಿ ಬಲೆನೋ RS ಹಾಗೂ ಡೀಸೆಲ್ ಕಾರಿನ ನೂತನ ಬೆಲೆ:
ಮಾರುತಿ  ಬಲೆನೋ RS ಪೆಟ್ರೋಲ್: 8.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮಾರುತಿ  ಬಲೆನೋ ಸಿಗ್ಮಾ ಡೀಸೆಲ್: 6.74 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮಾರುತಿ  ಬಲೆನೋ ಡೆಲ್ಟಾ ಡೀಸೆಲ್ : 7.52 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮಾರುತಿ  ಬಲೆನೋ ಝೆಟಾ ಡೀಸೆಲ್ : 8.13 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮಾರುತಿ  ಬಲೆನೋ ಆಲ್ಫಾ ಡೀಸೆಲ್ : 8.73 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)