ಬಿಡುಗಡೆಗೂ ಮುನ್ನ ಹ್ಯುಂಡೈ ವೆನ್ಯೂ ಕಾರಿನ ಬೆಲೆ ಬಹಿರಂಗ!
ಹ್ಯುಂಡೈ ವೆನ್ಯೂ ಕಾರಿನ ಬೆಲೆ ಬಹಿರಂಗವಾಗಿದೆ. ಮಾರುತಿ ಬ್ರೆಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ವೆನ್ಯೂ ಕಾರಿನ ಬೆಲೆ ಎಷ್ಟು? ಇಲ್ಲಿದೆ ವಿವರ.
ನವದೆಹಲಿ(ಮೇ.18): ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರಲXUV300 ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದೆ. ಮೇ. 21ಕ್ಕೆ ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಬಿಡುಗಡೆಗೂ ಮುನ್ನವೇ ಹ್ಯುಂಡೈ ವೆನ್ಯೂ ಕಾರಿನ ಬೆಲೆ ಪಟ್ಟಿ ಬಹಿರಂಗವಾಗಿದೆ. ಅಧೀಕೃತ ಪೆಲೆ ಬಹಿರಂಗವಾಗೋ ಮೊದಲೇ ಡೀಲರ್‌ಗಳು ಬೆಲೆ ಪಟ್ಟಿ ಲೀಕ್ ಮಾಡಿದ್ದಾರೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಮಾರುತಿ ಬಲೆನೊ- ಟೊಯೊಟಾ ಗ್ಲಾಂಝಾ ಟೀಸರ್ ರಿಲೀಸ್!
ಹ್ಯುಂಡೈ ವೆನ್ಯೂ ಪೆಟ್ರೋಲ್ ಟಾಪ್ ಮಾಡೆಲ್ SX+ ಆಟೋಮ್ಯಾಟಿಕ್ ಟ್ರಿಮ್ ಕಾರಿನ ಬೆಲೆ 10.65 ಲಕ್ಷ ರೂಪಾಯಿ (ಎಕ್ಸ್-ಶೋರೂಂ). ಟ್ರಿಮ್ ಪೆಟ್ರೋಲ್ ವೆೇರಿಯೆಂಟ್ SX (O) ಮ್ಯಾನ್ಯೆಯಲ್ ಕಾರಿನ ಬೆಲೆ 10.09 ಲಕ್ಷ ರೂಪಾಯಿ (ಏಕ್ಸ್ ಶೋ ರೂಂ). ಟಾಪ್ ಮಾಡೆಲ್ ಡೀಸೆಲ್ ಟ್ರಿಮ್ SX (O) ಬೆಲೆ 10.42 ಲಕ್ಷ ರೂಪಾಯಿ (ಎಕ್ಸ್-ಶೋ ರೂಂ). Fಸದ್ಯ ಬೇಸ್ ಮಾಡೆಲ್ ಬೆಲೆ ಬಹಿರಂಗವಾಗಿಲ್ಲ.
ಇದನ್ನೂ ಓದಿ: ಸಂಕಷ್ಟದಲ್ಲಿ ಭಾರತೀಯ ವಾಹನ ಮಾರುಕಟ್ಟೆ - ಕಳೆದ 8 ವರ್ಷಗಳಲ್ಲಿ ಇದೇ ಮೊದಲು!
ಪೆಟ್ರೋಲ್ - 1.0 ಟರ್ಬೋ SX+ ಆಟೋಮ್ಯಾಟಿಕ್ - 10.65 ಲಕ್ಷ ರೂಪಾಯಿ(ಎಕ್ಸ್-ಶೋ ರೂಂ)
ಪೆಟ್ರೋಲ್ - 1.0 ಟರ್ಬೋ SX (O) ಮ್ಯಾನ್ಯುಯೆಲ್- 10.09 ಲಕ್ಷ ರೂಪಾಯಿ(ಎಕ್ಸ್-ಶೋ ರೂಂ)
ಡೀಸೆಲ್ - 1.4 SX (O) ಮ್ಯಾನ್ಯುಯೆಲ್ 10.42 ಲಕ್ಷ ರೂಪಾಯಿ(ಎಕ್ಸ್-ಶೋ ರೂಂ)
ಹ್ಯುಂಡೈ ವೆನ್ಯೂ ಕಾರಿನಲ್ಲಿ 3 ವೇರಿಯೆಂಟ್‌ಗಳು ಲಭ್ಯವಿದೆ. 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಪೆಟ್ರೋಲ್ ಟರ್ಬೋ ಹಾಗೂ 1.4 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಕಾರು 83hp ಪವರ್ ಹಾಗೂ 115Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.0-ಲೀಟರ್ ಪೆಟ್ರೋಲ್ ಕಾರು, 2 ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಟರ್ಬೋ ಹೊಂದಿದ್ದು, 120hp ಪವರ್ ಹಾಗೂ 172Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು 1.4 ಡೀಸೆಲ್ ಕಾರು 90hp ಪವರ್ 220Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.