ಇನೋವಾ ಪ್ರತಿಸ್ಪರ್ಧಿ-ಶೀಘ್ರದಲ್ಲಿ ಟಾಟಾ ಹ್ಯಾರಿಯರ್ 7 ಸೀಟರ್ ಕಾರು!
ಟೊಯೊಟಾ ಇನೋವಾ ಪ್ರತಿಸ್ಪರ್ಧಿಯಾಗಿ ಟಾಟಾ ಹ್ಯಾರಿಯರ್ 7 ಸೀಟರ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಟಾಟಾ ಹ್ಯಾರಿಯರ್ ಕಾರು ಕಾರು ಪ್ರಿಯರನ್ನು ಮೋಡಿ ಮಾಡಿದೆ. ಇದೀಗ ಇನೋವಾಗೆ ಶಾಕ್ ನೀಡಲು ಸಜ್ಜಾಗಿರುವ ಟಾಟಾ ಹ್ಯಾರಿಯರ್ 7 ಸೀಟರ್ ಕಾರಿನ ವಿಶೇಷತೆ ಇಲ್ಲಿದೆ.
ನವದೆಹಲಿ(ಮೇ.19): MPV ಕಾರುಗಳಲ್ಲಿ ಟೊಯೊಟಾ ಇನೋವಾ ಕಾರು ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇಷ್ಟೇ ಅಲ್ಲ ಇನೋವಾ ಕಾರು ಜನರ ಮೊದಲ ಆಯ್ಕೆಯಾಗಿದೆ. ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಈಗಾಗಲೇ ಹಲವು ಕಾರುಗಳು ಮಾರುಕಟ್ಟೆಯಲ್ಲಿದೆ. ಆದರೆ ಯಾವ ಕಾರುಗಳು ಕೂಡ ಇನೋವಾ ಮಾರಾಟಕ್ಕೆ ತಡೆಯಾಗಲಿಲ್ಲ. ಇದೀಗ ಟಾಟಾ ಹ್ಯಾರಿಯರ್ 7 ಸೀಟರ್ ಕಾರು ಬಿಡುಗಡೆ ಮಾಡುತ್ತಿದೆ. ಇದು ಟೊಯೊಟಾ ಇನೋವಾ ಚಿಂತೆಗೂ ಕಾರಣವಾಗಿದೆ.
ಇದನ್ನೂ ಓದಿ: ಇತರ SUV ಕಾರಿಗಿಂತ ಹ್ಯುಂಡೈ ವೆನ್ಯೂ ಭಿನ್ನ ಯಾಕೆ?
ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಿರುವ ಟಾಟಾ ಹ್ಯಾರಿಯರ್ ಇದೀಗ 7 ಸೀಟರ್ ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಹ್ಯಾರಿಯರ್ ಕಾರು ಪ್ರಿಯರನ್ನು ಮೋಡಿ ಮಾಡಿದೆ. ಇದರ ಯಶಸ್ಸಿನ ಬೆನ್ನಲ್ಲೇ ಇನೋವಾಗೆ ಶಾಕ್ ನೀಡಲು ಟಾಟಾ ಸಜ್ಜಾಗಿದೆ.
ಇದನ್ನೂ ಓದಿ: ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!
ಸದ್ಯ 7 ಸೀಟರ್ ಟಾಟಾ ಹ್ಯಾರಿಯರ್ ರೋಡ್ ಟೆಸ್ಟ್ ನಡೆಸುತ್ತಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ರೋಡ್ ಟೆಸ್ಟ್‌ನಲ್ಲಿ ತೊಡಗಿಸಿಕೊಂಡಿರುವ ಹ್ಯಾರಿಯರ್ ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಹ್ಯಾರಿಯರ್ ಹಾಹೂ 7 ಸೀಟರ್ ಟಾಟಾ ಕಾರಿನ ಎಂಜಿನ್‌ನಲ್ಲಿ ಬದಲಾವಣೆ ಇಲ್ಲ. 2.0 ಲೀಟರ್ ಎಂಜಿನ್ ಹೊಂದಿದ್ದು, 170 bhp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ. 2020ರಲ್ಲಿ ಈ ಕಾರು ಬಿಡುಗಡೆಯಾಗಲಿದೆ.