ಬೆಂಗಳೂರು(ನ.04): ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರ ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವಂತೆಯೇ ಕಟ್ಟು ನಿಟ್ಟಿನ ನಿಯಮಗಳು ಕೂಡ ಜಾರಿಯಾಗಿದೆ. ಇದೀಗ ಭಾರತದಲ್ಲಿ ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನ ಮಾರಾಟ ಮಾಡುವಂತಿಲ್ಲ. ಇಷ್ಟೇ ಅಲ್ಲ ಮಾಲಿನ್ಯರಹಿತ ವಾಹನಗಳಿಗೆ ಮಾತ್ರ ಅವಕಾಶ. ಹೀಗಾಗಿ ಈ ನಿಯಮಕ್ಕೆ ವಿರುದ್ಧವಾಗಿರೋ ಕೆಲ ಪ್ರಮುಖ ಕಾರುಗಳು ಭಾರತದ ಭೂಪಟದಿಂದ ಅಳಿಸಿ ಹೋಗಲಿದೆ.

2020ರಿಂದ ಬಿಎಸ್ 6 ವಾಹನಗಳು ಮಾತ್ರ ರಸ್ತೆಗಿಳಿಯಲು ಅವಕಾಶ. 2019ರಿಂದ ಗರಿಷ್ಠ ಸುರಕ್ಷತೆ ಹಾಗೂ ಮಾಲಿನ್ಯ ರಹಿತ ವಾಹನಗಳಿಗೆ ಮಾತ್ರ ಸ್ಥಾನ. ಹೀಗಾಗಿ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ ಕೆಲ ಕಾರುಗಳು ನಿಷೇಧಕ್ಕೆ ಒಳಗಾಗಲಿದೆ.

ಕಾರು: ಮಾರುತಿ ಜಿಪ್ಸಿ
ಕಾರಣ: ಸುರಕ್ಷತೆ

ಕಾರು: ಮಾರುತಿ ಒಮ್ನಿ
ಕಾರಣ: ಸುರಕ್ಷತೆ

ಕಾರು: ಹ್ಯುಂಡೈ ಇಯಾನ್
ಕಾರಣ: ಸುರಕ್ಷತೆ

ಕಾರು: ಮಹೀಂದ್ರ ವೆರಿಟೋ
ಕಾರಣ: ಸುರಕ್ಷತೆ

ಕಾರು: ಟಾಟಾ ಸುಮೋ
ಕಾರಣ: ಸುರಕ್ಷತೆ

ಕಾರು: ಟೊಯೊಟಾ ಇಟಿಯೋಸ್ ಲಿವಾ
ಕಾರಣ: ಎಮಿಶನ್ ಸಮಸ್ಯೆ

ಕಾರು: ಟೊಯೊಟಾ ಇಟಿಯೋಸ್
ಕಾರಣ: ಎಮಿಶನ್ ಸಮಸ್ಯೆ