11 ಸಾವಿರಕ್ಕೆ ಬುಕ್ ಮಾಡಿ ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು!
ಮಾರುತಿ ಸುಜುಕಿ ಕಂಪನಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ಪೋ 2020ರಲ್ಲಿ ನೂತನ ಬ್ರೆಜ್ಜಾ ಪೆಟ್ರೋಲ್ ಕಾರನ್ನು ಅನಾವರಣ ಮಾಡಿತ್ತು. ಇದೀಗ ಬ್ರೆಜ್ಜಾ ಪೆಟ್ರೋಲ್ ಕಾರಿನ ಬುಕಿಂಗ್ ಆರಂಭಗೊಂಡಿದೆ. 11ಸಾವಿರ ರೂಪಾಯಿಗೆ ಕಾರು ಬುಕ್ ಮಾಡಬಹುದು. ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಫೆ.12): ಭಾರತದ ಅತೀ ದೊಡ್ಡ ಅಟೋ ಎಕ್ಸ್ಪೋ 2020ಯಲ್ಲಿ ಅನಾವರಣಗೊಂಡ ಮಾರುತಿ ಸುಜುಕಿ ಬ್ರೆಜ್ಜಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ಬ್ರೆಜ್ಜಾ ಕಾರಿನ ಬುಕಿಂಗ್ ಆರಂಭಗೊಂಡಿದೆ. 11,000 ರೂಪಾಯಿ ನೀಡಿ ಕಾರು ಬುಕ್ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ ಈ ಹಣ ರಿಫಂಡೇಬಲ್ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು ಅನಾವರಣ; ಡೀಸೆಲ್‌ಗಿಂತ ಕಡಿಮೆ ಬೆಲೆ!
ನೂತನ ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು 4 ಟ್ರಿಮ್ ವೇರಿಯೆಂಟ್ ಹೊರತಂದಿದೆ. LXi, VXi, ZXi ಹಾಗೂ ZXi+ ವೇರಿಯೆಂಟ್ ಲಭ್ಯವಿದೆ. ಜೊತೆಗೆ ಟ್ರಿಮ್ ವೇರಿಯೆಂಟ್ ಆಯ್ಕೆ ಕೂಡ ಲಭ್ಯವಿದೆ. ಸ್ಟಾಂಡರ್ಡ್ ಸಿಂಗಲ್ ಕಲರ್ ಟೋನ್ ಹಾಗೂ ಡ್ಯುಯೆಲ್ ಕಲರ್ ಟೋನ್‌ಗಳಲ್ಲಿ ಕಾರು ಲಭ್ಯವಿದೆ.
ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರು ಅನಾವರಣ; 32 ಕಿ.ಮೀ ಮೈಲೇಜ್ ದಾಖಲೆ!
ನೂತನ ಬ್ರೆಜ್ಜಾ 1.5 ಲೀಟರ್ BS6 ಪೆಟ್ರೋಲ್ ಎಂಜಿನ್ K ಸೀರಿಸ್ ಪೆಟ್ರೋಲ್ ಮೋಟಾರ್ ಹೊಂದಿದ್ದು, 104 ps ಪವರ್ ಹಾಗೂ 138 nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 18.76 ಕಿ.ಮೀ ಮೈಲೇಜ್ ನೀಡಲಿದೆ.
ಬ್ರೆಜ್ಜಾ ಪೆಟ್ರೋಲ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಬ್ರೆಜ್ಜಾ ಡೀಸೆಲ್ ಕಾರಿನ ಬೆಲೆ 7.63 ಲಕ್ಷ ರೂಪಾಯಿಂದ ಆರಂಭವಾಗುತ್ತಿದ್ದು, ಟಾಪ್ ಮಾಡೆಲ್ ಬೆಲೆ 10.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಪೆಟ್ರೋಲ್ ಕಾರಿನ ಬೆಲೆ ಡೀಸೆಲ್ ಕಾರಿಗಿಂತ ಕಡಿಮೆ ಇರಲಿದೆ.