ಗ್ರೇಟರ್ ನೋಯ್ಡಾ(ಫೆ.05): ಮೈಲೇಜ್ ಬರೋಬ್ಬರಿ 32 ಕಿ.ಮೀ. ಇದು ನೂತನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ವಿಶೇಷತೆ. ಗ್ರೇಟರ್‌ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿರುವ ಸ್ವಿಫ್ಟ್ ಹೈಬ್ರಿಡ್ ಕಾರು ಇದೀಗ ಎಲ್ಲರ ಗಮನ ಸೆಳೆದಿದೆ. 2018ರ ಇಂಡೋನೇಷ್ಯಾ ಅಟೋ ಎಕ್ಸ್ಪೋದಲ್ಲಿ ಇದೇ ಕಾರನ್ನು ಪ್ರದರ್ಶನಕ್ಕಿಡಲಾಗಿತ್ತು.

ಇದನ್ನೂ ಓದಿ: BS6 ಮಾರುತಿ ಅಲ್ಟೋ S ಬಿಡುಗಡೆ; ಕಡಿಮೆ ಬೆಲೆಯ CNG ಕಾರು!.

ನೂತನ ಸ್ವಿಫ್ಟ್ ಹೈಬ್ರಿಡ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 10 KW ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ.  1,242 cc-4 ಸಿಲಿಂಡರ್ ಎಂಜಿನ್, 90 Bhp ಪವರ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಕಾರಿನ ಎಲೆಕ್ಟ್ರಿಕ್ ಮೋಟಾರು 17 Bhp ಪವರ್ ಹಾಗೂ  30 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಇಕೋ BS6 ಕಾರು ಲಾಂಚ್; ಬೆಲೆ ಕೇವಲ 3.81 ಲಕ್ಷ ರೂ!

ಸ್ವಿಫ್ಟ್ ಹೈಬ್ರಿಡ್ ಕಾರು 5 ಸ್ಪೀಡ್ ಆಟೋಮೇಟೆಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಈಗಾಗಲೇ ಸ್ವಿಫ್ಟ್ ಡೀಸೆಲ್ ಕಾರು ಸ್ಥಗಿತಗೊಳಿಸಲಾಗಿದೆ. ಇದೀಗ ಸ್ವಿಫ್ಟ್ ಹೈಬ್ರಿಡ್ ಕಾರು ಶೀಘ್ರದಲ್ಲೇ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.