ಬಲೆನೋ ಪ್ರತಿಸ್ಪರ್ಧಿ ಟಾಟಾ 45X ಕಾರು ಬಿಡುಗಡೆ ದಿನಾಂಕ ಪ್ರಕಟ!

ಅತ್ಯುಮ ವಿನ್ಯಾಸ ಹಾಗೂ ಹೈಬ್ರಿಡ್ ಎಂಜಿನ್‌ನಿಂದ ಗಮನಸೆಳೆದಿರುವ ನೂಟನ ಟಾಟಾ 45X ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರಿನ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ಮಾಹಿತಿ.

Maruti Baleno rival Tata 45X launch date revealed

ಮುಂಬೈ(ನ.12): ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ 45X ಕಾರು ಬಿಡುಗಡೆಗೆ ಸಜ್ಜಾಗಿದೆ. 2018ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾದ ಟಾಟಾ 45X ಕಾರಿನ ಬಿಡುಗಡೆ ದಿನಾಂಕ ಪ್ರಕಟಗೊಂಡಿದೆ.

Maruti Baleno rival Tata 45X launch date revealed

ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿ ಟಾಟಾ 45X ಕಾರು 2019ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಟಾಟಾ ಹರಿಯರ್ SUV ಕಾರು ಬಿಡುಗಡೆಯಾದ ಬೆನ್ನಲ್ಲೇ ಟಾಟಾ 45X ಕಾರು ಕೂಡ ರಸ್ತೆಗಿಳಿಯಲಿದೆ. ಈ ಮೂಲಕ ಇತರ ಹ್ಯಾಚ್‌ಬ್ಯಾಕ್ ಹಾಗೂ SUV ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.

Maruti Baleno rival Tata 45X launch date revealed

2018ರ ಆಟೋ ಎಕ್ಸ್ಪೋದಲ್ಲಿ ವಿನ್ಯಾಸದಿಂದಲೇ ಗಮನಸೆಳೆದಿದ್ದ ಟಾಟಾ 45X ಹ್ಯಾಚ್‌ಬ್ಯಾಕ್ ಕಾರು ಮಿಡ್ ಹೈಬ್ರಿಡ್ ಎಂಜಿನ್ ಹೊಂದಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಟಾಟಾ 45X ಹ್ಯಾಚ್‌ಬ್ಯಾಕ್ ಕಾರು ಲಭ್ಯವಿದೆ. ಇಷ್ಟೇ ಅಲ್ಲ ಬಲೆನೋ ಹಾಗೂ ಐ20 ಕಾರುಗಳಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ.
 

Latest Videos
Follow Us:
Download App:
  • android
  • ios