ಹ್ಯುಂಡೈ ಎಲೈಟ್ ಐ20 ಕಾರು ಬಿಡುಗಡೆ-ಬಲೆನೋಗೆ ಪೈಪೋಟಿ!
ಹ್ಯಂಡೈ ನೂತನ ಎಲೈಟ್ ಐ20 ಕಾರು ಬಿಡುಗಡೆ ಮಾಡಿದೆ. ಬರೋಬ್ಬರಿ 12 ವೇರಿಯೆಂಟ್‌ಗಳಲ್ಲಿ ನೂತನ ಕಾರು ಲಭ್ಯವಿದೆ. ಮಾರುತಿ ಬಲೆನೊ ಫೇಸ್‌ಲಿಫ್ಟ್ ಕಾರು ಬಿಡುಗಡೆಗೂ ಮುನ್ನವೇ ಹ್ಯುಂಡೈ ಎಲೈಟ್ ಐ20 ಕಾರು ಬಿಡುಗಡೆಯಾಗಿದೆ. ಇಲ್ಲಿದೆ ನೂತನ ಕಾರಿನ ಬೆಲೆ ಹಾಗೂ ವಿಶೇಷತೆ.
ನವದೆಹಲಿ(ಜ.19): ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಹ್ಯುಂಡೈ ಸಂಸ್ಥೆ ಎಲೈಟ್ ಐ20 ಕಾರು ಬಿಡುಗಡೆ ಮಾಡಿದೆ. ಬಲೆನೊ ಬಿಡುಗಡೆಗೂ ಮುನ್ನ ಐ20 ಬಿಡುಗಡೆ ಮಾಡಿರುವ ಹ್ಯುಂಡೈ ಭಾರಿ ಪೈಪೋಟಿ ನೀಡಲು ಸಜ್ಜಾಗಿದೆ. ಹಲವು ವಿಶೇಷತೆ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಎಲೈಟ್ ಐ20 ಮಾರುಕಟ್ಟೆ ಪ್ರವೇಶಿಸಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಹಾರುವ ಕಾರು-ಬೆಲೆ ಎಷ್ಟು?
2018ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಹ್ಯುಂಡೈ ಎಲೈಟ್ ಐ20 ಕಾರು 2019ರ ಆರಂಭದಲ್ಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಹ್ಯುಂಡೈ ಎಲೈಟ್ ಐ20 ಕಾರು 12 ವೇರಿಯೆಂಟ್‍ಗಳಲ್ಲಿ ಬಿಡುಗಡೆಯಾಗಿದೆ. ಪೆಟ್ರೋಲ್ ವೇರಿಯೆಂಟ್‌ನಲ್ಲಿ 7 ಹಾಗೂ ಡೀಸೆಲ್‌ನಲ್ಲಿ 5 ಕಾರುಗಳು ಲಭ್ಯವಿದೆ.
ಇದನ್ನೂ ಓದಿ: ಕೈ ಶಾಸಕನಿಂದ ಸಿದ್ದರಾಮಯ್ಯಗೆ ಕೋಟಿ ಮೌಲ್ಯದ ಕಾರು ಗಿಫ್ಟ್!
ಎಲೈಟ್ ಐ20 ಪೆಟ್ರೋಲ್
ಎರಾ ರೂ 5,49,900
ಮ್ಯಾಗ್ನ+ ರೂ 6,25,157
ಸ್ಪೋರ್ಟ್ಸ್+ ರೂ 7,11,900
ಸ್ಪೋರ್ಟ್ಸ್+ CVT ರೂ8,21,900
ಸ್ಪೋರ್ಟ್ಸ್+ಡ್ಯುಯೆಲ್ ಟೋನ್ ರೂ 7,41,900
ಆಸ್ತಾ(O) ರೂ 8,06,200
ಆಸ್ತಾ (O) CVT ರೂ 9,11,200
ಇದನ್ನೂ ಓದಿ: ಅಲ್ಟೋ to ಬ್ರಿಜಾ: ಈ ವರ್ಷ ಬಿಡುಗಡೆಯಾಲಿದೆ 12 ಮಾರುತಿ ಕಾರು!
ಎಲೈಟ್ ಐ20 ಡೀಸೆಲ್
ಎರಾ ರೂ 6,88,000
ಮ್ಯಾಗ್ನ+ ರೂ 7,61,000
ಸ್ಪೋರ್ಟ್ಸ್+ ರೂ 8,36,300
ಸ್ಪೋರ್ಟ್ಸ್+ಡ್ಯುಯೆಲ್ ಟೋನ್ ರೂ 8,66,300
ಆಸ್ತಾ(O) ರೂ 9,31,200
ನೂತನ ಎಲೈಟ್ ಐ20 ಕಾರಿನ ಎಲ್ಲಾ ವೇರಿಯೆಂಟ್‌ಗಳಲ್ಲಿ ರೇರ್ ಪಾರ್ಕಿಂಗ್ ಸೆನ್ಸಾರ್ ಅಳವಡಿಸಲಾಗಿದೆ. ಇನ್ನು ಇಕೋ ಕೋಟಿಂಗ್ ಟೆಕ್ ಕೂಡ ಎಲ್ಲಾ ವೇರಿಯೆಂಟ್‌ಗಳಲ್ಲೂ ಲಭ್ಯವಿದೆ. ಈ ಹಿಂದೆ ಟಾಪ್ ಮಾಡೆಲ್ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಇದರ ಜೊತೆಗೆ ಮ್ಯಾಗ್ನಾ ಸೇರಿದಂತೆ ಟಾಪ್ ವೇರಿಯೆಂಟ್ ಕಾರುಗಳಲ್ಲಿ ಬ್ಲೂಟೂಥ್,. ಸ್ಟೇರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್‌ಗಳು ಲಭ್ಯವಿದೆ.