ನವದೆಹಲಿ(ಜ.29):  ಮಾರುತಿ ಬ್ರಿಜಾ, ಇಕೋ ಸ್ಪೋರ್ಟ್, ಟಾಟಾ ನೆಕ್ಸಾನ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರಿಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ XUV 300 ಕಾರು ಬಿಡುಗಡೆಯಾಗುತ್ತಿದೆ. ಫೆಬ್ರವರಿ 14 ರಂದು ಬಿಡುಗಡೆಯಾಗಲಿರುವ ಈ ಕಾರಿನ ಮೈಲೇಜ್ ಎಷ್ಟು ಅನ್ನೋದು ಬಹಿರಂಗವಾಗಿದೆ. 

ಇದನ್ನೂ ಓದಿ: ಜಾವಾ ಪೆರಾಕ್ ಬಾಬರ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ನೂತನ ಕಾರು ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಮಹೀಂದ್ರ XUV 300 ಕಾರಿನ ಮೈಲೇಜ್ ವಿಚಾರ ಬಹಿರಂಗವಾಗಿದೆ. ಪೆಟ್ರೋಲ್ ವೇರಿಯೆಂಟ್ ಕಾರು ಗರಿಷ್ಠ 17 ಕಿ.ಮೀ ಪ್ರತಿ ಲೀಟರ್‌ಗೆ ನೀಡಿದರೆ, ಡೀಸೆಲ್ ವೇರಿಯೆಂಟ್ ಗರಿಷ್ಠ 20 ಕಿ.ಮೀ ಪ್ರತಿ ಲೀಟರ್‌ಗೆ ನೀಡಲಿದೆ. ಪೆಟ್ರೋಲ್ ವೇರಿಯೆಂಟ್ ಕಾರು ಟಾಟಾ ನೆಕ್ಸಾನ್ ಹಾಗೂ ಫೋರ್ಡ್ ಇಕೋ ಸ್ಪೋರ್ಟ್ ಕಾರಿನಷ್ಟೇ ಮೈಲೇಜ್ ನೀಡುತ್ತಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಬಾಡಿಗೆಗೆ ಎಲೆಕ್ಟ್ರಿಕ್ ಸ್ಕೂಟರ್ -ಪ್ರತಿ ಕಿ.ಮೀಗೆ 20 ಪೈಸೆ!

ಡೀಸೆಲ್ ವೇರಿಯೆಂಟ್ ಮಹೀಂದ್ರ XUV 300 ಕಾರು ಮಾತ್ರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ. ಮಾರುತಿ ಬ್ರಿಜಾ 24.3  km/l, ಟಾಟಾ ನೆಕ್ಸಾನ್ 21.5  km/l a. ಫೋರ್ಡ್ ಇಕೋ ಸ್ಪೋರ್ಟ್ 23  km/l a ಮೈಲೇಜ್ ನೀಡಲಿದೆ.  ನೂತನ ಮಹೀಂದ್ರ XUV 300 ಕಾರಿನ ಬೆಲೆ 8 ಲಕ್ಷ ರೂಪಾಯಿಂದ 12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.